About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪ್ರಿಯಾಗೆ ಬಿಗ್ ರಿಲೀಫ್, ತೆಲಂಗಾಣ ಸರಕಾರಕ್ಕೆ ಸುಪ್ರೀಂ ಚಾಟಿ

ದೆಹಲಿ: ಮಲೆಯಾಳಿ ಬೆಡಗಿ ಪ್ರಿಯಾ ವಾರಿಯಾರ್ ಗೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಪ್ರಿಯಾ ವಿರುದ್ಧ ಕೇಸ್ ದಾಖಲಿಸಿದ್ದ ತೆಲಂಗಾಣ ಸರಕಾರವನ್ನು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.

‘ಒರು ಅಡರ್ ಲವ್’ ಮಲಯಾಳಿ ಚಿತ್ರದಲ್ಲಿ ಪ್ರಿಯಾ ವಾರಿಯರ್ ಕಣ್ಣು ಮಿಟುಕಿಸಿದರ ವಿರುದ್ಧ ಕೆಲವರು ನೀಡಿದ್ದ ದೂರನ್ನು ತೆಲಂಗಾಣ ಪೊಲೀಸರು ಸ್ವೀಕರಿಸಿದ್ದರು. ಇದರ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಕಣ್ಣು ಮಿಟುಕಿಸಿದರೂ ಕೇಸ್ ಹಾಕ್ತೀರಲ್ವಾ..? ನಿಮಗೆ ಬೇರೇನು ಕೆಲಸ ಇಲ್ವಾ ಎಂದು ಪ್ರಶ್ನಿಸಿ ಚಾಟಿ ಬೀಸಿ, ಅರ್ಜಿ ವಜಾಗೊಳಿಸಿದೆ.

ಸಿನಿಮಾದ ಹಾಡಿನಲ್ಲಿ ಕೆಲವು ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡಲಾಗಿತ್ತು ಎಂದು ದೂರಲಾಗಿತ್ತು. ಈ ಚಿತ್ರದಲ್ಲಿ ಕಣ್ಣು ಮಿಟಿಕಿಸುವ ದೃಶ್ಯದಲ್ಲಿ ರಾತ್ರೋರಾತ್ರಿ ನಟಿ ಪ್ರಿಯಾ ವಾರಿಯರ್ ಜನಪ್ರಿಯರಾದರು. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ಭಾರಿ ಸದ್ದು ಮಾಡಿತ್ತು.

Tags

Related Articles

Leave a Reply

Your email address will not be published. Required fields are marked *

Language
Close