ವಿಶ್ವವಾಣಿ

ಭಾರತ್‌‌ ಬಂದ್‌ಗೆ ಬಲಿಯಾದ ಮಗು

ಜಹನಾಬಾದ್:  ಸರಿಯಾದ ಸಮಯಕ್ಕೆ  ಆ್ಯಂಬುಲೆನ್ಸ್ ಸಿಗದೆ ಮಗುವೊಂದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಜಹನಾಬಾದ್‍ನಲ್ಲಿ ಪುಟ್ಟ ಮಗುವೊಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ ಭಾರತ್ ಬಂದ್ ಪ್ರಯುಕ್ತ ಸಕಾಲದಲ್ಲಿ ಆ್ಯಂಬುಲೆನ್ಸ್ ಬರಲಿಲ್ಲ. ಇದರಿಂದ ಮಗುವಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟಿದೆ.