ದೂರು ಬದಲು ತೇಜಸ್ವಿಗೆ ಬಂತು 45000 ಪ್ರೇಮ ಸಂದೇಶ!

Posted In : Others

ಪಾಟ್ನಾ: ರಸ್ತೆ ಅವ್ಯವಸ್ಥೆ ಬಗ್ಗೆ ವಾಟ್ಸಾಪ್ ನಲ್ಲಿ ದೂರು ಸಲ್ಲಿಸುವಂತೆ ಕೇಳಿಕೊಂಡರೆ ರಾಜ್ಯದ  ಯುವತಿಯರು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರಿಗೆ ಪ್ರೇಮ ಸಂದೇಶ ಕಳುಹಿಸಿದ್ದಾರೆ.

ಹೌದು! ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು ಕೆಟ್ಟು ಹೋದ ರಸ್ತೆಗಳ ಛಾಯಾಚಿತ್ರ ತೆಗೆದು  ವಾಟ್ಸಾಪ್ ನಲ್ಲಿ ದೂರು ಸಲ್ಲಿಸುವಂತೆ ಮನವಿ ಮಾಡಿದ್ದರು.  ಆದರೆ ರಾಜ್ಯದಲ್ಲಿರುವ ಹದಿಹರೆಯದ ಯುವತಿಯರು ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವ ಬದಲಾಗಿ  ತಮ್ಮ ವಿವಿಧ ಭಂಗಿಯ ಫೋಟೋಗಳನ್ನು ಕಳುಹಿಸುವ ಜೊತೆಗೆ ಹಾಯ್ ಡಿಯರ್, ಐ ಲವ್ ಯೂ, ಐ ವಾಂಟ್ ಮ್ಯಾರಿ ಯೂ ಎಂಬ ಸಂದೇಶಗಳನ್ನು ಕಳುಹಿಸುವ ಮೂಲಕ ತೇಜಸ್ವಿ ಅವರನ್ನು ಮುಜುಗರಕ್ಕೀಡು ಮಾಡಿದ್ದಾರೆ.

ರಾಜ್ಯದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ತೇಜಸ್ವಿ ಅವರು ಕಳೆದ ವಾರವಷ್ಟೇ ತಮ್ಮ ವಾಟ್ಸ್ಆ್ಯಪ್ ನಂಬರ್ ಅನ್ನು  ಜನತೆಗೆ ನೀಡಿದ್ದರು.  ನಂಬರ್ ಕೊಟ್ಟ ಒಂದು ವಾರದಲ್ಲೇ ಸುಮಾರು 45 ಸಾವಿರ ಪ್ರೇಮಸಂದೇಶಗಳು ಬಂದಿವೆ.

26 ವರ್ಷದ ತೇಜಸ್ವಿ ಅವರು ಇನ್ನು ಕೂಡ ಮದುವೆಯಾಗದಿರುವುದರಿಂದ ಯುವತಿಯರು ಈ ರೀತಿ ಸಂದೇಶ ಕಳುಹಿಸಿದ್ದಿರಬಹುದು ಎಂಬುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

11 + 15 =

 
Back To Top