About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಕೆಪಿಎಲ್: ಬುಲ್ಸ್ ಢಿಕ್ಕಿಗೆ ವಾರಿಯರ್ಸ್ ಅಪ್ಪಚ್ಚಿ

ಮೈಸೂರು: ನಾಯಕ ಭರತ್ ಚಿಪ್ಲಿ(63) ಆಕರ್ಷಕ ಅರ್ಧಶತಕ ಹಾಗೂ ಮೀರ್ ಕೌನೇನ್ ಅಬ್ಬಾಸ್(42) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಬಿಜಾಪುರ್ ಬುಲ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧ 10ನೇ ಪಂದ್ಯದಲ್ಲಿ ಕೇವಲ ಎರಡು ರನ್‌ಗಳಿಂದ ರೋಚಕ ಜಯ ಸಾಧಿಸಿತು.

ಮಳೆಯಿಂದಾಗಿ ರದ್ದಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್‌ನ 10ನೇ ಪಂದ್ಯ ಶನಿವಾರ ನಡೆಯಿತು. ಇಲ್ಲಿನ ಗಂಗೋತ್ರಿ ಗ್ಲೇಡ್‌ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ್ ಬುಲ್‌ಸ್ ಗೆ ಮೊದಲ ವಿಕೆಟ್ ಪತನವಾಯಿತು. ಆರಂಭಿಕ ಶಿಶಿರ್ ಭವಾನೆ ಶೂನ್ಯ ಸಂಪಾದನೆಗೆ ಎನ್.ಪಿ.ಭರತ್ ಎಸೆತದಲ್ಲಿ ಅರ್ಜುನ್ ಹೊಯ್ಸಳಗೆ ಕ್ಯಾಚ್ ನೀಡಿದರು. ನಂತರ ಕೇವಲ 9 ರನ್ ಗಳಿಸಿ ನವೀನ್ ಎಂ.ಜಿ ಪೆವಿಲಿಯನ್ ಪಾಲಾದರು.

ಭರತ್-ಅಬ್ಬಾಸ್ ಜುಗಲ್‌ಬಂದಿ:

ಬಿಜಾಪುರ್ ಬುಲ್‌ಸ್ 22 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ತೀವ್ರ ಒತ್ತಡಕ್ಕೆ ಸಿಲುಕಿದಾಗ ನಾಯಕ ಭರತ್ ಚಿಪ್ಲಿ ಹಾಗೂ ಅಬ್ಬಾಸ್ ಜೋಡಿ ಮೈಸೂರು ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ 88 ಜತೆಯಾಟ ತಂಡದ ಮೊತ್ತ ನೂರರ ಗಡಿ ದಾಟಲು ನೆರವಾಯಿತು.
42 ರನ್ ಗಳಿಸಿ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಾಸ್, ಭರತ್.ಎನ್.ಪಿ ಎಸೆತದಲ್ಲಿ ಔಟ್ ಆದರು. ಉತ್ತಮ ಬ್ಯಾಟಿಂಗ್ ಮಾಡಿದ ಭರತ್ ಚಿಪ್ಲಿ 53 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ ಒಟ್ಟು 63 ರನ್‌ಗಳನ್ನು ತಂಡಕ್ಕೆ ಕೊಡುಗೆ ನೀಡಿದರು. ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಸುನೀಲ್ ರಾಜು 28 ಹಾಗೂ ಶ್ರೀಜಿತ್ 17 ರನ್ ಗಳಿಸಿದರು.20 ಓವರ್‌ಗಳಿಗೆ ಬಿಜಾಪುರ್ ಬುಲ್‌ಸ್ ಆರು ವಿಕೆಟ್ ಕಳೆದುಕೊಂಡು ಒಟ್ಟು 167 ರನ್ ಗಳಿಸಿತು.

ಬಳಿಕ, 168 ರನ್‌ಗಳ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್‌ಗೆ ಅರ್ಜುನ್ ಹೋಯ್ಸಳ ಹಾಗೂ ರಾಜು ಭಟ್ಲಳ ಜೋಡಿ ಉತ್ತಮ ಆರಂಭ ನೀಡಿತು. ಆದರೆ, ತಂಡದ ಮೊತ್ತ 46 ರನ್ ಆಗುವಷ್ಟರಲ್ಲಿ ಅರ್ಜುನ್ ಹೊಯ್ಸಳ(21) ಹಾಗೂ ಅಮಿತ್ ವರ್ಮಾ(1) ಅವರ ವಿಕೆಟ್ ಉರುಳಿತು. 29 ರನ್ ಗಳಿಸಿ ರಾಜು ಭಟ್ಕಳ ನವೀನ್‌ಗೆ ಔಟ್ ಆದರು. ಪಂದ್ಯದಲ್ಲಿ ಮಿಂಚಿದ್ದ ಶೋಯೆಬ್ ಮ್ಯಾನೇಜರ್ ಈ ಪಂದ್ಯದಲ್ಲಿ 17 ರನ್ ಗಳಿಗೆ ಸೀಮಿತರಾದರು.

ನಂತರ, ಕೆಲಕಾಲ ಉತ್ತಮ ಬ್ಯಾಟಿಂಗ್ ಮಾಡಿದ ಸಿದ್ಧಾರ್ಥ 28 ರನ್ ಗಳಿಸಿ ಕಾರಿಯಪ್ಪಗೆ ಶರಣರಾದರು. ಕೊನೆಯ ಕ್ಷಣದವರೆಗೂ ನಾಯಕ ಜೆ.ಸುಚಿತ್(34) ಹಾಗೂ ಭರತ್.ಎನ್.ಪಿ(17) ಅವರು ನಡೆಸಿದ ಹೋರಾಟ ಅಂತಿಮವಾಗಿ ವ್ಯರ್ಥವಾಯಿತು. ಮೈಸೂರು ವಾರಿಯರ್ಸ್ ನಿಗದಿತ 20 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ, ಕೇವಲ ಎರಡು ರನ್‌ಗಳಿಂದ ಬಿಜಾಪುರ್ ಬುಲ್‌ಸ್ ಗೆ ತೀವ್ರ ನಿರಾಸೆಗೆ ಒಳಗಾಯಿತು.

ಸ್ಕೋರ್ ವಿವರ

ಬಿಜಾಪುರ್ ಬುಲ್‌ಸ್: 167/6(20)
ಭರತ್ ಚಿಪ್ಲಿ- 63
ಕೌನೇನ್ ಅಬ್ಬಾಸ್- 42
ಬೌಲಿಂಗ್: ಪ್ರತೀಕ್ ಜೈನ್ 15ಕ್ಕೆ 2, ಭರತ್ ಎನ್.ಪಿ 27ಕ್ಕೆ 2.

ಮೈಸೂರು ವಾರಿಯರ್ಸ್: 165/5(20)
ಜೆ.ಸುಚಿತ್-34*
ರಾಜು ಭಟ್ಕಳ್-29
ಕೆ.ಸಿದ್ಧಾರ್ಥ್-28
ಬೌಲಿಂಗ್: ಕೆ.ಸಿ.ಕಾರಿಯಪ್ಪ 23ಕ್ಕೆ 2.

Tags

Related Articles

Leave a Reply

Your email address will not be published. Required fields are marked *

Language
Close