About Us Advertise with us Be a Reporter E-Paper

ಗೆಜೆಟಿಯರ್

ಬೈಕ್ ಪ್ರಿಯರೇ ಸ್ವಲ್ಪ ದಿನ ಕಾಯಿರಿ

ಆದಿತ್ಯ ಹೆಚ್.ಎಸ್ ಹಾಲ್ಮುತ್ತೂರು

ಒಂದು ಬೈಕ್ ಇದೆ. ಲಾಂಗ್ ಡ್ರೆûವ್ ಹೋಗೋಕೆ ಇನ್ನೊಂದು ಬೈಕ್ ತಗೊಳ್ಳಬೇಕು ಅಂತ ಯೋಚಿಸ್ತಿರೋರಿಗೆ ಹಾಗೂ ಮಗ ಬೈಕ್ ಕೇಳ್ತಾ ಇದಾನೆ ಕೊಡಿಸ್ಬೇಕು ಅಂತ ಯೋಚಿಸ್ತಿರೋ ಅಂಕಲ್‌ಗಳಿಗೆ, ಹೊಸ ಮಾಡೆಲ್ ಬೈಕ್ ತಗೊಂಡು ರೌಂಡ್ ಹೊಡಿಬೇಕು ಅಂತ ನಿದ್ರೆ ಕಣ್ಣಲ್ಲೂ ಕನವರಿಸ್ತಿರೋ ಬೈಕ್ ಪ್ರಿಯರಿಗೆ ಇಲ್ಲಿವೆ ಹಲವು ಆಯ್ಕೆಗಳು.

ಯುಎಂ ರೆನೆಗೇಡ್ ಡ್ಯೂಟಿ ಎಸ್

ಈ ಬೈಕ್ 223 ಸಿಸಿ ಎಂಜಿನ್ ಹೊಂದಿದ್ದು, 5 ಸ್ಪೀಡ್ ಗೇರ್ ಹೊಂದಿದೆ. ಕಿಕ್, ಮತ್ತು ಸೆಲ್‌ಫ್ ಸ್ಟಾರ್‌ಟ್ ಸೌಲಭ್ಯವಿದ್ದು, ನೋಡಲು ಅತ್ಯಂತ ಆಕರ್ಷಕವಾಗಿದೆ. ಮತ್ತು ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ. 10 ಲೀ ಪೆಟ್ರೋಲ್ ಸಾಮರ್ಥ್ಯವನ್ನು ಹೊಂದಿರುವ ಈ ಬೈಕ್ ಪ್ರತಿ ಲೀ. 41 ಕಿ.ಮೀ ಮೈಲೇಜ್ ನೀಡಲಿದೆ. ಡಿಜಿಟಲ್ ಸ್ಪೀಡೋ ಮೀಟರ್ ಹೊಂದಿದ್ದು, ರೌಂಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಎಲ್‌ಇಡಿ ಸಿಗ್ನಲ್ ಲ್ಯಾಂಪ್ ಹೊಂದಿದೆ. ಟ್ಯೂಬ್‌ಲೆಸ್ ಟಯರ್ ಹೊಂದಿದ್ದು, ಫ್ರೆಂಟ್ 280ಎಮ್‌ಎಮ್ ಡಿಸ್‌ಕ್, ಬ್ಯಾಕ್ ಡ್ರಮ್ ಬ್ರೇಕಿಂಗ್ ಸಿಸ್ಟಂ ಇದ್ದು, ಎಬಿಎಸ್ ಆಯ್ಕೆಯನ್ನು ನೀಡಲಾಗಿದೆ. ಇದರ ಎಕ್‌ಸ್ ಶೋ ರೂಂ ಬೆಲೆ ರು.1.10 ಲಕ್ಷ ಆಗಿರಲಿದೆ. ಇದು ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, 200 ಸಿಸಿ, ಮತ್ತು 220 ಸಿಸಿ, 250 ಸಿಸಿ ಸಾಮರ್ಥ್ಯದ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಎಂವಿ ಆಗಸ್ಟಾ ಡ್ರಾಗ್‌ಸ್ಟರ್ 800

798 ಸಿಸಿ ಎಂಜಿನ್ ಹೊಂದಿದ್ದು, ಏರ್ ಕೂಲಿಂಗ್ ಸಿಸ್ಟಂ ಹೊಂದಿರುವ ಈ ಬೈಕ್ 6 ಸ್ಪೀಡ್ ಬಾಕ್‌ಸ್ ಅನ್ನು ಹೊಂದಿದೆ. 16.60 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದ್ದು, ಪ್ರತಿ ಲೀಟರ್‌ಗೆ 16 ಕಿ.ಮೀ ಮೈಲೇಜ್ ನೀಡಲಿದೆ. ಸೆಲ್‌ಫ್ ಸ್ಟಾರ್‌ಟ್ ಮಾತ್ರವೇ ಇರಲಿದೆ. ಅಲಾಯ್ ವ್ಹೀಲ್ ಇದ್ದು, ಫ್ರೆಂಟ್ 320ಎಮ್‌ಎಮ್, ಬ್ಯಾಕ್ 210 ಡಿಸ್‌ಕ್ ಬ್ರೇಕ್ ಹೊಂದಿದೆ. ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಹೊಂದಿದ್ದು ಎಬಿಎಸ್ ಸಿಸ್ಟಂ ಹೊಂದಿರಲಿದೆ. ಇದರ ಎಕ್‌ಸ್ ಶೋ ರೂಮ್ ಬೆಲೆ ರು.12.70 ಲಕ್ಷ ಇರಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ.

ವೈಜಡ್‌ಎಫ್ ಆರ್15 ವಿ3

ಈ ಬೈಕ್ 155 ಸಿಸಿ ಎಂಜಿನ್ ಹೊಂದಿದ್ದು ಲಿಕ್ವಿಡ್ ಕೂಲ್‌ಡ್ ಕೂಲಿಂಗ್ ಸಿಸ್ಟಂ ಆಗಿದೆ. 6 ಸ್ಪೀಡ್ ಗೇರ್‌ಬಾಕ್‌ಸ್ ಹೊಂದಿದೆ. ಸೆಲ್‌ಫ್ ಸ್ಟಾರ್‌ಟ್ ಮಾತ್ರ ಇದೆ. 11 ಲೀಟರ್ ಪೆಟ್ರೋಲ್ ಟ್ಯಾಕ್ ಹೊಂದಿದೆ. ಅಲಾಯ್ ವ್ಹೀಲ್ ಹೊಂದಿದ್ದು, ಫ್ರೆಂಟ್ 282 ಎಮ್‌ಎಮ್ ಮತ್ತು ಬ್ಯಾಕ್ 220ಎಮ್‌ಎಮ್ ಡಿಸ್‌ಕ್ ಬ್ರೇಕ್ ಅನ್ನು ಹೊಂದಿದೆ. ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, ಎಲ್‌ಇಡಿ ಸಿಗ್ನಲ್ ಲ್ಯಾಂಪ್, ಲೋ ಫ್ಯುಯಲ್ ಸಹ ಹೊಂದಿದೆ. ಇದರ ಎಕ್‌ಸ್ ಶೋ ರೂಮ್ ಬೆಲೆ ಸುಮಾರು ರು.1.30 ಲಕ್ಷ., ಆಗಸ್‌ಟ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದು ಆಫೀಸ್ ಯೂಸ್‌ಗೆ ಉತ್ತಮ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close