About Us Advertise with us Be a Reporter E-Paper

ಗೆಜೆಟಿಯರ್

ಬದಲಾವಣೆಯೊಂದಿಗೆ ಬರಲಿವೆ ಬೈಕುಗಳು

*ಗಗನ್ ಕಡೂರು

2019ರ ಹೊಸ ಮಾದರಿಯ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿವೆ. ಈ ಬಾರಿ ಯಾವುದನ್ನು ಎನ್ನುವ ನಿಮ್ಮ ಗೊಂದಲ ಹೆಚ್ಚಾಗುವುದಂತೂ ಗ್ಯಾರಂಟಿ. ಏಕೆಂದರೆ ಒಂದಿಷ್ಟು ಹಳೆಯ ಮಾಡೆಲ್‌ಗಳು ಹೊಸ ರೂಪದೊಂದಿಗೆ ಉತ್ತಮ ಕಾರ್ಯಕ್ಷಮತೆ ಪಡೆದುಕೊಂಡು ನಿಮ್ಮೆದುರು ಬರುತ್ತಿದ್ದರೆ ಇನ್ನೊಂದಿಷ್ಟು ಹೊಸ ಬೈಕ್‌ಗಳು ‘ನಾವೂ ಸ್ಪರ್ಧೆಯಲ್ಲಿದ್ದೇವೆ’ ಎನ್ನುತ್ತಾ ಮುನ್ನುಗ್ಗುತ್ತಿವೆ. ಒಟ್ಟಿನಲ್ಲಿ ಮುಂದಿನ ತಿಂಗಳುಗಳಲ್ಲಿ ಒಂದಿಷ್ಟು ಹೊಸ ಬೈಕ್‌ಗಳು ನಮ್ಮ ನಿದ್ದೆಗೆಡಿಸುವುದಂತೂ ಗ್ಯಾರಂಟಿ.

ಜಾವ ಮೋಹ ಹೆಚ್ಚಾಗಲಿದೆ
ಜಾವಾ ಮೋಟಾರ್ ಸೈಕಲ್ ಸಂಸ್ಥೆಯು ಜಾವಾ ಮತ್ತು ಜಾವಾ 42 ಎಂಬ ಎರಡು ನೂತನ ಬೈಕ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇನ್ನೂ ಬಿಡುಗಡೆಯಾಗದ ಈ ಬೈಕ್‌ನ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಜಾವಾ ಸಂಸ್ಥೆಯು ಬಿಡುಗಡೆಗೊಳಿಸಿದ ‘ಜಾವಾ’ ರು. 1.64 ಲಕ್ಷ ಮತ್ತು ‘ಜಾವಾ 42’ ರು. 1.55 ಲಕ್ಷದ ಬೆಲೆಯದ್ದಾಗಿದೆ. ಸಂಸ್ಥೆಯು ಈ ಎರಡೂ ಬೈಕ್‌ಗಳ ಬಿಡುಗಡೆಯ ವೇಳೆ ಮತ್ತೊಂದು ‘ಪೆರಾಕ್’ ಎಂಬ ಹೆಸರಿನ ಬೈಕ್‌ನ್ನು ಅನಾವರಣಗೊಳಿಸಿದೆ. ಪೆರಾಕ್ ಬೈಕಿನ ಬುಕ್ಕಿಂಗ್ ಇದೇ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.

ಅಂದ ಹಾಗೆ ಈ ಬೈಕ್‌ಗಳ ಖರೀದಿಗಾಗಿ ಗ್ರಾಹಕರು ಜಾವಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಜಾವಾ ಡೀಲರ್‌ಗಳ ಬಳಿ ರು. 5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬ್ಯಾಚ್ ಪ್ರಕಾರ ಗ್ರಾಹಕರಿಗೆ ಬೈಕ್ ವಿತರಣೆ ಮಾಡಲಾಗುವುದು. ಸದ್ಯ ಮಧ್ಯಪ್ರದೇಶದ ಪ್ರಿಥಮ್ಪುನರ್‌ಲ್ಲಿರುವ ಒಂದೇ ಒಂದು ಬೈಕ್ ಉತ್ಪಾದನಾ ಘಟಕದಲ್ಲಿ ಜಾವಾ ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಎಚ್‌ಪಿ ಮತ್ತು 28ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್‌ನ್ನು 6 ಗೇರ್‌ಬಾಕ್‌ಸ್ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್‌ನ್ನು ಪಡೆದುಕೊಳ್ಳಲಿದೆ.

ಯಮಹಾದಿಂದ ಎಂಟಿ 15
ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಭಾರತದಲ್ಲಿ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯಮಹಾ ಸಂಸ್ಥೆಯು ಸಹ ಎಂಟಿ-15 ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕೆಲವು ಯಮಹಾ ಡೀಲರ್‌ಸ್ಗಳು ಆಸಕ್ತ ಗ್ರಾಹಕರಿಂದ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಕೂಡಾ ಸ್ವೀಕರಿಸುತ್ತಿದ್ದು, ಈ ಬೈಕ್ ಆರ್15 ವಿ3.0 ಆವೃತ್ತಿಯ ಮುಂದುವರಿದ ಭಾಗವಾಗಿರಲಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳೊಂದಿಗೆ ಮರುಬಿಡುಗಡೆಯಾಗಿರುವ ಎಂಟಿ-15 ಬೈಕ್ ಮಾದರಿಯು, ಕಳೆದ ಅಕ್ಟೋಬರ್‌ನಲ್ಲಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡು ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿತ್ತು. ಈ ಮಾದರಿಯು ಯಮಹಾ ನಿರ್ಮಾಣದ ಮತ್ತೊಂದು ದುಬಾರಿ ಬೆಲೆಯ ಎಂಟಿ-9 ಬೈಕಿನ ಡಿಸೈನ್ ಹೋಲಿಕೆಯಿದ್ದು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿದೆ.

155.1-ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಟೆಡ್, ಸಿಲಿಂಡರ್ ಎಂಜಿನ್ ಹೊಂದಿರುವ ಎಂಟಿ-15 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್‌ಸ್ ಸಹಾಯದೊಂದಿಗೆ 19.3-ಬಿಎಚ್‌ಪಿ ಮತ್ತು 14.7-ಎನ್‌ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೀಗಾಗಿ ಎಂಟಿ-15 ಬೈಕ್‌ಗಳು ಕಡಿಮೆ ಸಾಮರ್ಥ್ಯದ ಎಂಜಿನ್ ಸೌಲಭ್ಯವನ್ನು ಹೊಂದಿದ್ದರೂ ಸಹ ಪರ್ಫಾಮೆನ್‌ಸ್ ವಿಚಾರದಲ್ಲಿ 200ಸಿಸಿ ಬೈಕ್‌ಗಳನ್ನು ಸಹ ಹಿಂದಿಕ್ಕುವ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ವೆರಿಬಲ್ ವೆಲ್ವ್ ಆಕ್ಷನ್(ವಿವಿಎ) ಕಿಟ್ ಜೋಡಣೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ. 2,020-ಎಂಎಂ ಉದ್ದ, 800-ಎಂಎಂ ಅಗಲ, 1,070-ಎಂಎಂ ಎತ್ತರ, 1335ಎಂಎಂ ಬೆಸ್, 160ಎಂಎಂ ಗ್ರೌಂಡ್ ಕ್ಲಿಯೆರೆನ್‌ಸ್ ಹೊಂದಿದ್ದು, ಹೊಸ ಬೈಕ್ ಬರೋಬ್ಬರಿ 135ಕೆ.ಜಿ ತೂಕವಿರಲಿದೆ. ಇನ್ನು ಇದರ ಬೆಲೆ ರು.1.20 ಲಕ್ಷದಿಂದ ರು. 1.40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೊಸ ಡಾಮಿನಾರ್ 400
ಬಜಾಜ್ ಸಂಸ್ಥೆಯು ತಮ್ಮ ಡಾಮಿನಾರ್ ಬೈಕನ್ನು ನವೀಕರಿಸಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುಲಿದೆ. ಈ ಬಾರಿ ಬಿಡುಗಡೆಯಾಗಲಿರುವ ಹೊಸ ಬಜಾಜ್ ಡಾಮಿನಾರ್ ಬೈಕ್ ಬಿಎಸ್-6 ಎಂಜಿನ್‌ನ್ನು ಪಡೆಯಲಿದ್ದು, ಇಂಡಿಯನ್ ಆಟೋಸ್ ಬ್ಲಾಗ್ ಮಾಹಿತಿ ಪ್ರಕಾರ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದೀಗ ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಶುರುವಾಗಿದೆ. ಹೀಗಾಗಿ ಆಸಕ್ತ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಬಜಾಜ್ ಡೀಲರ್‌ನ ಬಳಿ ರು.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಎಮಿಷನ್‌ನ್ನು ಪಡೆದುಕೊಂಡಿರುವ ಬಜಾಜ್ ಡಾಮಿನಾರ್ ಬೈಕ್‌ಗಳು ಹೆಚ್ಚು ಸಾಮರ್ಥ್ಯವನ್ನು ಹೊರಹಾಕಲಿದ್ದು, ಎಷ್ಟು ಪವರ್ ಔಟ್‌ಪುಟ್ ನೀಡಲಿದೆ ಎಂದು ತಿಳಿಯಬೇಕಿದೆ. ಆದರೆ ಪ್ರಸ್ತುತ ಇರುವ ಬಜಾಜ್ ಡಾಮಿನಾರ್ 400 ಬೈಕ್ 373ಸಿಸಿ, ಲಿಕ್ವಿಡ್ ಕೂಲ್ಡ್, ಸಿಲೆಂಡರ್ ಎಂಜಿನ್ ಸಹಾಯದಿಂದ 34ಬಿಎಚ್‌ಪಿ ಮತ್ತು 35ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್‌ನ್ನು 6 ಸ್ಪೀಡ್ ಗೇರ್‌ಬಾಕ್‌ಸ್ನೊಂದಿಗೆ ಜೋಡಿಸಲಾಗಿದೆ.

ಹೊಸ ಬಜಾಜ್ ಡಾಮಿನಾರ್ 400 ಬೈಕಿಗೆ ಈ ಬಾರಿ ನೀಡಲಾದ ಎಂಜಿನ್‌ನ್ನು 43.5 ಬಿಎಚ್‌ಪಿ ಸಾಮರ್ಥ್ಯವನ್ನು ನೀಡುವ ಕೆಟಿಎಂ 390 ಬೈಕಿನಿಂದ ಪಡೆಯಲಾಗಿದ್ದು, ಇದು ಹೆಚ್ಚಿನ ಸಂಕುಚಿತ ಅನುಪಾತದಿಂದಾಗಿ ಮತ್ತು ಬಜಾಜ್ ಆಟೊ ಅದರ ಒತ್ತಡ ಹೆಚ್ಚಾಗುವುದನ್ನು ಸ್ವಲ್ಪ ಹೆಚ್ಚಿನ ಶಕ್ತಿ ಪಡೆಯುವಂತೆ ಮಾಡುತ್ತದೆ ಎನ್ನಲಾಗಿದೆ. ಅಷ್ಟೆ ಈ ಬಾರಿಯ ಬಜಾಜ್ ಡಾಮಿನಾರ್ 400 ಬೈಕಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಸಹ ನೀಡುವ ಸುಳಿವು ನೀಡಿದ್ದು, ಹೊಸ ಎಕ್ಸಾಸ್‌ಟ್ ಸಿಸ್ಟಂನ್ನು ನೀಡಲಾಗಿತ್ತಿದೆ. ಈ ಬಾರಿ ಈ ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್‌ಟ್ ಪೋರ್ಟ್‌ಸ್, ಮುಂಭಾಗದಲ್ಲಿ ಅಪ್ಲೈಡ್ ಫ್ರಂಟ್ ಫೋರ್ಕ್‌ಸ್ನ್ನು ಒದಗಿಸಲಾಗಿದೆ. ಜತೆಗೆ ಈ ಹೊಸ ಎಕ್ಸಾಸ್‌ಟ್ ಹೆಚ್ಚು ಸದ್ದನ್ನು ಕೂಡ ಹೊರಹಾಕುತ್ತಂತೆ. ಹೊಸ 2019 ಬಜಾಜ್ ಡೊಮಿನಾರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್‌ಗ್ರೇಡ್ ಉಪಕರಣಗಳನ್ನು ಸಹ ಸ್ವೀಕರಿಸುತ್ತದೆ.

ಪ್ರಸ್ತುತ ಇರುವ ನೀಡಲಾದ ಸ್ಕೀನ್‌ನ್ನು ಪಡೆದಿರಲಿದ್ದು, ಹೊಸದಾಗಿ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್‌ನ್ನು ಪಡೆದುಕೊಳ್ಳಲಿದೆ. ಇದಲ್ಲದೇ ಈ ಬಾರಿ ಫ್ಯುಯಲ್ ಟ್ಯಾಂಕರ್‌ನ ಮೇಲೆ ನೀಡಲಾದ ಸ್ಕ್ರೀನ್ ಗೇರ್ ಪೊಸಿಷನ್‌ನ್ನು ತೋರಿಸುತ್ತದೆ. ಹೊಸ ಡಾಮಿನಾರ್ 400 ಬೈಕಿನಲ್ಲಿ ಎಬಿಎಸ್‌ನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್‌ಕ್ ಬ್ರೇಕ್‌ನ್ನು ಅಳವಡಿಸಲಾಗಿದೆ. ಪ್ರಸ್ತುತ ಇರುವ ಬಜಾಜ್ ಡಾಮಿನಾರ್ 400 ಬೈಕ್ ಎಕ್‌ಸ್ ಶೋರಂ ಬೆಂಗಳೂರು ಪ್ರಕಾರ 2.02 ಲಕ್ಷದ ಬೆಲೆಯಲ್ಲಿ ಹೊಸ ನವೀಕರಣದೊಂದಿಗೆ ಬಿಡುಗಡೆಯಾಲಿರುವ ಬೈಕ್ ಇನ್ನು ರು.15,000 ರಿಂದ ರು.20,000 ಅಧಿಕವಾಗಿರಬಹುದೆಂದು ಹೇಳಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close