ವಿಶ್ವವಾಣಿ

‘ಬಿಂದಾಸ್’ ಎಂಟ್ರಿ ‘ಗೂಗ್ಲಿ’ ಗ್ಯಾರೆಂಟಿ..!

ಸ್ಯಾಂಡಲ್‌ವುಡ್‌ನಲ್ಲಿ ಇಂದು ‘ಬಿಂದಾಸ್ ಗೂಗ್ಲಿ’ ಚಿತ್ರ ತೆರೆಗೆ ಬರುತ್ತಿದೆ. ನಟ ಧರ್ಮ ಕೀರ್ತಿರಾಜ್ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಕಾಶ್ ಎಂಬ ನವ ಪ್ರತಿಭೆ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ನಿಮಿಕಾ ರತ್ನಾಕರ್, ಮಮತಾ ರಾವತ್, ಶಿಲ್ಪಾ ಲದ್ದಿಮಠ್, ಹಿರಿಯ ನಟರಾದ ರಾಮಕೃಷ್ಣ, ಕೀರ್ತಿರಾಜ್, ವಾಣಿಶ್ರೀ, ರವಿ ಶೇಟ್, ಅಶೋಕ್, ಕಾರ್ತಿಕ್, ಶೃತಿ, ಮುತ್ತು ರಾಜ್, ಜೆನೀಫರ್, ರೀನಾ ಅರ್ಕಸಲಿ, ಅಭಿಲಾಷ್, ಶಶಾಂಕ್, ರಣವೀರ್, ಭೋಜರಾಜ್ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಚಿತ್ರದಲ್ಲಿ ಸಂಸದ ಸುರೇಶ್ ಅಂಗಡಿ, ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ, ನಿರ್ಮಾಪಕ ವಿಜಯಕುಮಾರ್ ಅನ್ವೇಕರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಬಿಂದಾಸ್ ಆಗಿರುವ ಹುಡುಗರು ಮಾತ್ರ ಗೂಗ್ಲಿ ಥರ ಡ್ಯಾಾನ್‌ಸ್‌ ಮಾಡುತ್ತಾರೆ. ಇದನ್ನೇ ‘ಬಿಂದಾಸ್ ಗೂಗ್ಲಿ’ ಸಿನಿಮಾದಲ್ಲಿ ತೆರೆಮೇಲೆ ಹೇಳುತ್ತಿದ್ದೇವೆ. ಮಕ್ಕಳೆಂದರೆ ಅವರು ಕೇವಲ ಓದಿಗಾಗಿ ಇರುವವರಲ್ಲ. ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ, ಅವರು ಏನನ್ನು ಬೇಕಾದ್ರೂ ಸಾಧಿಸಬಲ್ಲರು. ಅದನ್ನೇ ಈ ಸಿನಿಮಾ ಕೂಡ ಹೆಳುತ್ತದೆ’ ಎನ್ನುವುದು ನಿರ್ಮಾಪಕ ವಿಜಯಕುಮಾರ್ ಅನ್ವೇಕರ್ ಮಾತು.


‘ಇಡೀ ಚಿತ್ರ ಕಾಲೇಜ್ ಹಿನ್ನೆೆಲೆಯಲ್ಲಿ ನಡೆಯುತ್ತದೆ. ಡ್ಯಾನ್‌ಸ್‌ ಕಡೆಗೆ ಆಸಕ್ತರಾದ ಹುಡುಗರು ಹೇಗೆ ತಮ್ಮ ಸವಾಲುಗಳನ್ನು ಎದುರಿಸಿ, ಗುರಿಯನ್ನು ಸಾಧಿಸುತ್ತಾರೆ ಎಂಬುದೇ ಚಿತ್ರದ ಕತಾಹಂದರ. ಇಂದಿನ ಯುವಕರು ಮತ್ತು ಪೋಷಕರನ್ನು ಮನದಲ್ಲಿಟ್ಟುಕೊಂಡು ಈ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟ್ರೇಲರ್‌ಗಳಿಗೆ ಎಲ್ಲೆೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಜನಮನ ಗೆಲ್ಲಲಿದೆ’ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
ಚಿತ್ರದಲ್ಲಿ ಕಾಲೇಜ್‌ನ ಡ್ಯಾನ್‌ಸ್‌ ಕೋಚ್ ಪಾತ್ರದಲ್ಲಿ ಧರ್ಮ ಕೀರ್ತಿರಾಜ್, ಕಾಲೇಜ್ ಸ್ಟುಡೆಂಟ್ ಪಾತ್ರದಲ್ಲಿ ಆಕಾಶ್ ಕಾಣಿಸಿಕೊಂಡಿದ್ದಾರೆ.  ಬಿಟ್ ಸಾಂಗ್‌ಸ್‌ ಸೇರಿದಂತೆ ಒಟ್ಟು 11 ಹಾಡುಗಳಿದ್ದು, ವಿನು ಮನಸ್ಸು ಹಾಡುಗಳಿಗೆ ಸಂಗೀತ ಸಂಯೋಜಿಸಿದರೆ, ಹೈಟ್ ಮಂಜು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಚಿತ್ರಕ್ಕೆೆ ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸಂತೋಷ್ ಕುಮಾರ್ ‘ಬಿಂದಾಸ್ ಗೂಗ್ಲಿ’ ಚಿತ್ರಕ್ಕೆೆ ಆ್ಯಕ್ಷನ್-ಕಟ್ ಹೇಳಿದ್ದಾರೆ.