About Us Advertise with us Be a Reporter E-Paper

Breaking Newsಸಿನಿಮಾಸ್
Trending

ಬೆಳ್ಳಿಪರದೆ ಮೇಲೆ ಬರಲಿದೆ ಜಯಲಲಿತಾ ಜೀವನಾಧಾರಿತ ಸಿನಿಮಾ..!

ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರ ಜೀವನ ಕಥೆಯಾಧರಿತ ಸಿನಿಮಾ ಹೊರತರಲು ಕಾಲಿವುಡ್‍ನಲ್ಲಿ ಭರ್ಜರಿ ತಯಾರಿ ನಡೆದಿದೆ.

ಈ ಸಿನಿಮಾವನ್ನು ಮದ್ರಾಸಿಪಟ್ಟಣಂ ಚಿತ್ರ ನಿರ್ಮಿಸಿದ ವಿಜಯ್ ಅವರೇ ಜಯಲಲಿತಾ ಜೀವನಾಧಾರಿತ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಜಯಲಲಿತಾ ಅವರ ಸಿನಿಮಾ ಪಯಣ ಹಾಗೂ ರಾಜಕೀಯದಲ್ಲಿನ ಸಾಧನೆಗಳ ಬಗ್ಗೆ ಬೆಳ್ಳಿಪರದೆ ಮೇಲೆ ಮೂಡಿಬರಲಿದೆ. ಜಯಾ ಹುಟ್ಟುಹಬ್ಬ ಫೆಬ್ರವರಿ 24ರಂದು ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಇನ್ನು ಈ ಚಿತ್ರವು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆಯಂತೆ.

ಕರ್ನಾಟಕದಲ್ಲಿ ಹುಟ್ಟಿದ ಜಯಲಲಿತಾ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. ಹಲವು ವರ್ಷ ಬಣ್ಣದ ಜಗತ್ತನ್ನು ಆಳಿದ ಅವರು, ತಮಿಳುನಾಡು ರಾಜಕೀಯದತ್ತ ಮುಖ ಮಾಡಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದರು. ಆರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಳಿದ ಅವರು, ಜನರ ಪಾಲಿಗೆ ಅಮ್ಮಾ ಆಗಿದ್ದರು. ಅನಾರೋಗ್ಯದಿಂದಾಗಿ 2016 ಡಿಸೆಂಬರ್ 5ರಂದು ಕೊನೆಯುಸಿರೆಳೆದರು.

Tags

Related Articles

Leave a Reply

Your email address will not be published. Required fields are marked *

Language
Close