About Us Advertise with us Be a Reporter E-Paper

Breaking NewsUncategorizedಪ್ರಚಲಿತರಾಜ್ಯ

ನನಗೂ ಬಿಜೆಪಿ ಸೇರುವಂತೆ ಆಫರ್‌‌ ಕೊಟ್ಟಿದ್ದರು…!

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿಕೆ

ಚಿಕ್ಕಮಗಳೂರು: ನನಗೂ ಕೆಲ ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಕೇಳಿದ್ರು, ಅದನ್ನು ನಾನು ತಿರಸ್ಕರಿಸಿದ್ದೇನೆ ಎಂದು ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಾನು ತತ್ತ್ವ ಸಿದ್ಧಾಂತಗಳ ಮೇಲೆ ರಾಜಕೀಯಕ್ಕೆ ಬಂದವನು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಮ್ಮ ನಾಯಕರು. ಕಾಂಗ್ರೆಸ್ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದರು.

ಶಿವಮೊಗ್ಗ ಮತ್ತು ಸಕಲೇಶಪುರದ ಕೆಲ ಬಿಜೆಪಿ ಮುಖಂಡರು ತಮ್ಮ ಪಕ್ಷಕ್ಕೆ ಸೇರುವಂತೆ ಭಾರಿ ಮೊತ್ತದ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದರು. ಬಿಜೆಪಿ ಅವರು ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ನೀಡುವ ಹಣ ಭ್ರಷ್ಟಚಾರದ್ದು ಅಲ್ವಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅವರು ನನ್ನನ್ನು ಕೂಡ ಚುನಾವಣೆ ನಂತರ ಮತ್ತು ಈಗಲೂ ಆಪರೇಷನ್ ಕಮಲಕ್ಕೆ ಒಳಪಡಿಸುವ ಪ್ರಯತ್ನ ಮಾಡಿದ್ದರು ಎಂದರು.

Tags

Related Articles

One Comment

  1. ಒಟ್ಟಿನಲ್ಲಿ ಕಾಂಗ್ರೆಸಿನ ಜೆ.ಡಿ.ಎಸ್ ಎಲ್ಲ ಸಚಿವ ಸ್ಥಾನದ ಆಕಾಂಕ್ಷಿಗಳು ಸಂದರ್ಭದ ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಿ.ಎಜೆ.ಪಿ. ೩೦ ಕೋಟಿ ಕೊಡುತ್ತೇನೆ, ಸಚಿವ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ಇವರು ಸಚಿವರಾಗುವುದಕ್ಕೆ ಒತ್ತಡ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

Language
Close