About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮಹಿಳಾ ಸಬ್  ಇನ್ಸ್‌‌ಪೆಕ್ಟರ್ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ

ಉತ್ತರ ಖಂಡ್: ರಾಜ್ಯದಲ್ಲಿ ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್  ಇನ್ಸ್‌‌ಪೆಕ್ಟರ್ ಮೇಲೆ ದರ್ಪ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಹಿಳೆ ಎಂಬುದನ್ನು ಲೆಕ್ಕಿಸದೆ ಸಾರ್ವಜನಿಕರ ಎದುರೇ ನಿಂದಿಸಿ ಬೆದರಿಕೆ ಹಾಕಿರುವ ಆ ವಿಡಿಯೋದಲ್ಲಿ ದಾಖಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಇಬ್ಬರು ಬೆಂಬಲಿಗರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರುದ್ರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜ್ ಕುರ್ಮಾ ತುಕ್ರಾಲ್ ಉತ್ತರಖಂಡ್ ನಗರದ ಸಂಚಾರಿ ಘಟಕದ ಸಬ್ ಇನ್ಸ್‌‌ಪೆಕ್ಟರ್ ಅನಿತಾ ಗೈರೊಲ್ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ತಾನು ಜನಪ್ರತಿನಿಧಿ ಎಂಬುದನ್ನು ಮರೆತು ಠಾಣೆಯ ಎದುರೇ ಮಹಿಳಾ ಇನ್ಸ್‌‌ಪೆಕ್ಟರ್ ವಿರುದ್ಧ ಹರಿಹಾಯ್ದಿದ್ದಾರೆ. ಸಬ್ ಇನ್ಸ್‌‌ಪೆಕ್ಟರ್ ಉತ್ತರಕ್ಕೆ ಅವಕಾಶ ನೀಡದೆ ರೌಡಿಯಂತೆ ವರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವರ್ತನೆಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close