About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬಿಜೆಪಿಯವರಂತೂ ಸಾಲಮನ್ನಾಕ್ಕೆ ಕೇಂದ್ರದಿಂದ ನಯಾ ಪೈಸೆ ತರಲಿಲ್ಲ…!

ಮುಖ್ಯಮಂತ್ರಿ ಕುಮಾರಸ್ವಾಮಿ ಅಸಹಾಯಕತೆ

ಬೆಂಗಳೂರು: ಸಾಲ ಮನ್ನಾ ವಿಚಾರವಾಗಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ದುಡ್ಡು ಕೊಡುತ್ತೇವೆಂದರೂ ಬ್ಯಾಂಕ್‌ಗಳು ಮಾಹಿತಿ ನೀಡುತ್ತಿಲ್ಲವೆಂದರೆ ಏನು ಮಾಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಹಾಯಕತೆಯನ್ನು ತೋಡಿಕೊಂಡರು.

ವಿಧಾನಸೌಧದಲ್ಲಿ  ಮಾತನಾಡಿದ ಅವರು, ಬಿಜೆಪಿಯವರು ಸಾಲ ಮನ್ನಾ ಹಣವನ್ನು ಕೇಂದ್ರದಿಂದ ಬಿಡುಗಡೆ ಮಾಡಿಸಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕೇಂದ್ರದ ಅಧೀನದಲ್ಲಿವೆ. ಬಿಜೆಪಿ ರಾಜಕೀಯ ಮಾಡುವುದನ್ನು ಬಿಟ್ಟು, ಸಾಲ ಮನ್ನಾ ಕುರಿತು ಮಾಹಿತಿಯನ್ನಾದರೂ ನೀಡುವಂತೆ ಸೂಚಿಸಲಿ ಎಂದರು.

ನವಂಬರ್‌ನಿಂದ ಸಾಲ ಮನ್ನಾ ಹಣ ಬಿಡುಗಡೆ: ಬ್ಯಾಂಕ್ ಅಧಿಕಾರಿಗಳು ಕನಿಷ್ಟ ಸಾಲದ ಮಾಹಿತಿಯನ್ನಾದರೂ ನೀಡಬೇಕು. ಬಿಜೆಪಿಯವರಂತೂ ಸಾಲಮನ್ನಾಕ್ಕೆ ಕೇಂದ್ರದಿಂದ ನಯಾ ಪೈಸೆಯನ್ನೂ ತರಲಾಗಿಲ್ಲ. ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ, ಕೇಂದ್ರ ಸರಕಾರದೊಂದಿಗೆ ಬ್ಯಾಂಕ್‌ಗಳಿಂದ ಮಾಹಿತಿ ತರಿಸಿಕೊಟ್ಟರೆ ನಾನು ಅವರಿಗೆ ಆಭಾರಿಯಾಗಿರುತ್ತೇನೆ.

ನಾವು ಸಾಲ ಮನ್ನಾ ಮಾಡಲು ತಯಾರಿದ್ದೇವೆ. ರಿಸರ್ವ್ ಬ್ಯಾಂಕ್‌ನಿಂದ ನಿರ್ದೇಶನ ಮಾಡಿಸಿ ಮಾಹಿತಿ ಕೊಡಿಸಲಿ. ಆದಷ್ಟು ಬೇಗ ಸಾಲ ಮನ್ನಾ ಆಗುತ್ತದೆ. ನವೆಂಬರ್‌ನಿಂದ ಹಂತ ಹಂತವಾಗಿ ಬ್ಯಾಂಕ್ ಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ 6,500 ಕೋಟಿ ರು. ಬಿಡುಗಡೆ ಮಾಡಲು ಸಿದ್ಧರಿದ್ದೇವೆ ಎಂದು ವಿವರಿಸಿದರು.

ದುಡ್ಡು ನೀಡಲು ಬ್ಯಾಂಕ್‌ಗಳು ಮಾಹಿತಿ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಪ್ರಧಾನಿ ಮೋದಿ ಹಾಗೂ ಸಚಿವ ಅರುಣ್ ಜೇಟ್ಲಿ ವ್ಯಾಪ್ತಿಗೆ ಬರುತ್ತದೆ. ಡೇಟಾ ಬೇಸ್ ಕೊಡಿಸುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ. ಸರಕಾರದಲ್ಲಿ ದುಡ್ಡಿನ ಸಮಸ್ಯೆ ಇಲ್ಲ. ಸಾಲ ಮನ್ನಾ ಹಣ ನೀಡಲು ಸರಕಾರ ಸಿದ್ಧ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close