About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸರಕಾರ ಉರುಳಿಸುವ ಪ್ರಯತ್ನವನ್ನು ಬಿಜೆಪಿಯವರು ಇನ್ನೂ ಬಿಟ್ಟಿಲ್ಲ: ಕೃಷ್ಣ ಭೈರೇಗೌಡ

ಬೆಂಗಳೂರು: ಬಿಜೆಪಿ ಅವರಿಂದ ಎದುರಾಗುತ್ತಿರುವ ಒತ್ತಡ ತಡೆಯುವ ಅನಿವಾರ್ಯ ಇರುವುದರಿಂದ ಕಾಂಗ್ರೆಸ್ ಶಾಸಕರನ್ನು ಒಂದೆಡೆ ಸೇರಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಸಹಕಾರ ನಗರದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಬಿಜೆಪಿ ಅವರು ನಡೆಸುತ್ತಿರುವ ಸರಕಾರ ಉರುಳಿಸುವ ಪ್ರಯತ್ನವನ್ನು ವಿಫಲಗೊಳಿಸಿದ್ದೇವೆ. ಆದರೂ ಸಹ ಅವರು ಪ್ರಯತ್ನವನ್ನೂ ಬಿಟ್ಟಿಲ್ಲ. ನಮ್ಮ ಕೆಲ ಶಾಸಕರನ್ನು ನೇರವಾಗಿ ಸಂಪರ್ಕಿಸಿ ಆಮಿಷವೊಡ್ಡಿದ್ದಾರೆ. ಅದನ್ನು ತಡೆಯುವುದು ನಮಗೆ ಅನಿವಾರ್ಯವಾಗಿರುವುದರಿಂದ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ನಾಯಕರು ಕಳೆದ ಒಂದು ವಾರದಿಂಧ ಅವರ ಶಾಸಕರನ್ನು ಹಾಕಿದ್ದಾರೆ. ರೆಸಾರ್ಟ್ ಸಂಸ್ಕೃತಿಯನ್ನು ಆರಂಭ ಮಾಡಿದ್ದೇ ಅವರು. ಬಿಜೆಪಿ ಅವರಿಂದ ನಡೆಯುತ್ತಿರುವ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಯಲಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ: ಕಳೆದ ಎರಡು-ಮೂರು ವರ್ಷಗಳಿಂದ ದೇಶದಲ್ಲಿ ಉದ್ಯೋಗಾವಕಾಶ ಕಡಿಮೆಯಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯುವ ಸಮುದಾಯದ ನಿರೀಕ್ಷೆಗೆ ತಕ್ಕಂತೆ ಉದ್ಯೋಗಾವಕಾಶ ದೊರೆಯಬೇಕು. ಉದ್ಯೋಗ ಮೇಳದ ಮೂಲಕ ಸ್ವಲ್ಪ ಮಟ್ಟಿನ ಪರಿಹಾರ ಒದಗಿಸುವ ಉದ್ದೇಶದಿಂದ ಮೇಳಗಳನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close