ವಿಶ್ವವಾಣಿ

2019ರ ಚುನಾವಣೆ ಗೆಲ್ಲಲು ಬಿಜೆಪಿಗೆ ವಾಜಪೇಯಿ ಸ್ಪರ್ಷ ಬೇಕು: ಅಕಾಲಿ ದಳ ನಾಯಕ

ದೆಹಲಿ: 2019ರಲ್ಲಿ ಗೆಲುವಿನ ಹಾದಿಯನ್ನು ಮುಂದುವರೆಸಬೇಕೆಂದರೆ ಇಂದಿನ ಬಿಜೆಪಿಗೆ ವಾಜಪೇಯಿರ ಮಾರ್ಗದಲ್ಲಿ ನಡೆಯುವ ಅಗತ್ಯವಿದೆ ಎಂದು ಅಕಾಲಿ ದಳದ ನಾಯಕ ನರೇಶ್‌ ಗುಜ್ರಾಲ್‌ ತಿಳಿಸಿದ್ದಾರೆ.

“ಚುನಾವಣಾಪೂರ್ವ ಮೈತ್ರಿಯನ್ನು ಯಾವ ರೀತಿಯಲ್ಲಿ ಹೆಣೆಯುತ್ತಾರೆ ಎಂಬುದರ ಮೇಲೆ ಎನ್‌ಡಿಎ ಗೆಲುವಿನ ಸಾಧ್ಯತೆಗಳು ಅವಲಂಬಿತವಾಗಿವೆ. ಸದ್ಯದ ಪಾಲುದಾರರ ಜತೆಗೆ ಇನ್ನಷ್ಟು ಪಕ್ಷಗಳನ್ನು ಸೇರಿಸಿಕೊಂಡಲ್ಲಿ. ತನ್ನ ಮಿತ್ರಪಕ್ಷಗಳನ್ನು ಬಿಜೆಪಿ ಬಹಳ ನಾಜೂಕಾಗಿ ನಿರ್ವಹಣೆ ಮಾಡಬೇಕಿದೆ. ಈ ವಿಚಾರದಲ್ಲಿ ವಾಜಪೇಯಿ ಸ್ಪರ್ಷದ ಅಗತ್ಯವಿದೆ” ಎಂದು ಗುಜ್ರಾಲ್‌ ತಿಳಿಸಿದ್ದಾರೆ.

“ಹೆಚ್ಚಿನ ಸೀಟುಗಳಿಗೆ ಬೇಡಿಕೆ ಇಡದಿದ್ದರೆ ಶಿವಸೇನಾ ಎನ್‌ಡಿಎಯಲ್ಲೇ ಮುಂದುವರೆಯಲಿದೆ ಎಂದು ಖಾತ್ರಿಯಿದೆ. ನಿತೀಶ್‌ ಕುಮಾರರಿಗೂ ಹೆಚ್ಚಿನ ಸೀಟುಗಳು ಬೇಕಿವೆ. ಅಕಾಲಿ ದಳದ ಬಳಿ ಹೆಚ್ಚಿಗೆ ಸೀಟು ಕೇಳಿದರೆ ಬಿಟ್ಟುಕೊಡೆವು” ಎಂದು ಗುಜ್ರಾಲ್‌ ಹೇಳಿದ್ದಾರೆ.