About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

2022ಕ್ಕೆ ನವಭಾರತ ನಿರ್ಮಾಣದ ಸಂಕಲ್ಪ: ಬಿಜೆಪಿ

ದೆಹಲಿ: ತನ್ನ ಮೇಲೆ ಆಧಾರವೇ ಇಲ್ಲದೇ ವಿಪಕ್ಷಗಳು ಹೊರಿಸುತ್ತಿರುವ ಆಪಾದನೆಗಳ ಕುರಿತಂತೆ ವಾಗ್ದಾಳಿ ನಡೆಸಿದ ಬಿಜೆಪಿ, 2019ರ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದೆ.

ಇಂದು ಮುಕ್ತಾಯವಾದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾವೆಡೇಕರ್‌, “ಸರಕಾರಕ್ಕೆ ದೂರದೃಷ್ಟಿ, ಸಂಕಲ್ಪ ಹಾಗು ಕಲ್ಪನೆಗಳಿವೆ ಮತ್ತು ಸರಕಾದ ಸಾಧನೆಗಳನ್ನು ನೋಡಬಹುದಾಗಿದೆ. 2022ರ ವೇಳೆಗೆ ಭಾರತವು ಭಯೋತ್ಪಾದನೆ, ಕೋಮು ಗಲಭೆ ಹಾಗು ಜಾತಿವಾದಗಳಿಂದ ದೇಶ ಮುಕ್ತವಾಗಲಿದ್ದು ಪ್ರತಿಯೊಬ್ಬರ ತಲೆಯ ಮೇಲೂ ಸೂರಿರಲಿದೆ” ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಬರಲಿರುವ ವಿಧಾನಸಭಾ ಹಾಗು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಸಾಧ್ಯಾಸಾಧ್ಯತೆಗಳ ಕುರಿತಂತೆ ಇದೇ ಸಂದರ್ಭ ಮಂಥನ ನಡೆಸಲಾಯಿತು.

 

Tags

Related Articles

Leave a Reply

Your email address will not be published. Required fields are marked *

Language
Close