About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

2014ಕ್ಕಿಂತ ದೊಡ್ಡ ಬಹುಮತ ಪಡೆಯಲು ಬಿಜೆಪಿ ಶಪಥ

ದೆಹಲಿ: 2014ಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ಬಿಜೆಪಿ ಶಪಥಗೈದಿದೆ.

ತನ್ನದೇ ಬಲದಿಂದ 2014ರಲ್ಲಿ ಮೊದಲ ಬಾರಿಗೆ ಬಹುಮತ ಪಡೆದಿದ್ದ ಬಿಜೆಪಿ ತನ್ನ ಸಾಧನೆಯನ್ನು ಪುನರಾವರ್ತನೆ ಮಾಡಲು ಪಕ್ಷದ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಿಕೊಳ್ಳಲಾಗಿದೆ.

ಪಕ್ಷದ ಎಲ್ಲ ರಾಜ್ಯಗಳ ಮುಖ್ಯಸ್ಥರು ಹಾಗೂ ರಾಷ್ಟ್ರಮಟ್ಟದ ನಾಯಕರ ಸಭೆಯಲ್ಲಿ ಅಜೇಯ ಬಿಜೆಪಿ ಎಂಬ ಘೋಷವಾಕ್ಯ ಮೊಳಗಿಸಲಾಯಿತು. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು.

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಪಕ್ಷದ ಸಂಖ್ಯೆಗಳನ್ನು ವೃದ್ಧಿಸಲು ಇದೇ ವೇಳೆ ಪಣ ತೊಟ್ಟಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close