About Us Advertise with us Be a Reporter E-Paper

ಅಂಕಣಗಳು

ಭಾರತೀಯ ಸಂಸತ್ತು: ಬಿ.ಎಲ್. ಶಂಕರ್ ಮನೋಜ್ಞ ಕೃತಿ ಲೋಕಾರ್ಪಣೆ

ಅಂಕಿತ ಪುಸ್ತಕ ಪ್ರಕಾಶಿಸಿರುವ  ಮಹತ್ವದ ಕೃತಿಯನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಎಂ.ಎನ್. ವೆಂಕಟಾಚಲಯ್ಯ ನೆರವೇರಿಸುವರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದಾರೆ. ಕೃತಿಯ ಸ್ಥೂಲ ಪರಿಚಯ ಇಲ್ಲಿದೆ.

ಮೂಲ ಆಂಗ್ಲ ಆವೃತ್ತಿಯು ಒಟ್ಟು ಎಂಟು ಅಧ್ಯಾಯಗಳನ್ನೊಳಗೊಂಡಿದೆ. ಅದರ ಈ ಕ್ನಡ ಅವತರಣಿಕೆಯು ಭಾರತೀಯ ಸಂಸತ್ತಿನ ಬೆಳವಣಿಗೆ ಹಾೂ ಕಾರ್ಯನಿರ್ವಹಣೆಯಲ್ಲಿ ಅತ್ಯಂತ ್ರಮುಖ ಪಾತ್ರವಹಿಸುತ್ತಿರುವ ಸಮಿತಿ ವ್ಯವಸ್ಥೆಯ ವಿಸ್ತೃತ ವಿಶ್ಲೇಷಣೆಯನ್ನು ಒಳಗೊಂಡಿದೆ. ಮೂಲ ಆ್ಂಲ ಆವೃತ್ತಿ, 14ನೇ ಲೋಕಸಭೆಯವರೆಗಿನ ಕಲಾಪಗಳನ್ನು ಮಾತ್ರ ಒಳಗೊಂಡಿತ್ತು. ಆ್ಂಲ ಆವೃತ್ತಿಯ ಪ್ರಕಟಣೆಯಾಗಿ ಹಲವು ವರ್ಷಗಳ ನಂತರ ಪ್ರಸ್ತುತ ಅನುವಾದಿತ ಕೃತಿಯು ಹೊರಬರುತ್ತಿರುವುದರಿಂದ ಈ ಮಧ್ಯೆ ನಡೆದ 15ನೇ ಹಾಗೂ 16ನೇ ಲೋಕಸಭೆಯ  ನಂತರದಲ್ಲಿ ಲೋಕಭೆಯ ಸದಸ್ಯತ್ವದಲ್ಲಾದ ಬದಲಾವಣೆಯ ಸಂಕ್ಷ್ತಿ ಪರಿಚಯ ವನ್ನೂ ಸಹ ಇಲ್ಲಿ ಮಾಡಿಕೊಡಲಾಗಿದೆ.

ಬಿಡುಗಡೆಯಾಗುತ್ತಿರುವ ಕೃತಿಯು ಒಂದು ಚಲನಶೀಲ ರಾಜಕೀಯ ಸಂಸ್ಥೆಯಾಗಿ ಭಾರತೀಯ ಸಂಸತ್ತು ವಿಕಾಸಗೊಂಡ ಬಗೆಯನ್ನು ವಿವರಿಸುತ್ತದೆ. ಇದು ಕೇವಲ ಸಂಸತ್ತು ಎನ್ನುವ ರಾಜಕೀಯ ಸಂಸ್ಥೆಯ ಕಥನ ವ ಾತ್ರವಲ್ಲ; ಸಂಸತ್ತಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದ ಹಾಗೆ, ಭಾರತದ ಪ್ರಜಾಪ್ರಭುತ್ವ, ರಾಜಕೀಯ ಪ್ರಕ್ರಿಯೆಯ ಸಂಕೀರ್ಣತೆಯು ಅದರ ಎಲ್ಲ ಆಯಾಮಗಳೊಂದಿಗೆ ಓದುಗರ ಮುಂದೆ ತೆರೆುಕೊಳ್ಳುತ್ತಾ ಹೋಗುತ್ತದೆ. ಸಂಸತ್ತು  ಪ್ರಜಾಪ್ರಭುತ್ವದ ಒಂದು ಮುಖವಾಣಿ. ಇದು ರಾಜಕೀಯ ಬದುಕಿನ ಅತ್ಯಂತ ಚಲನಶೀಲವಾದ ಸಾರ್ವಜನಿಕ ಸಂಸ್ಥೆಗಳ ಮತ್ತು ಹಕ್ಕುಗಳ ಆಳ್ವಿಕೆಯ ಕೇಂದ್ರಬಿಂದುವಾಗಿದೆ. ಇದೇ ಮೊದಲ ಬಾರಿಗೆ ಕೈಗೊಂಡ ಇಂತಹ ಒಂದು ಅಧ್ಯಯನದಲ್ಲಿ ಮೂರು ಹಂತಗಳ  (1950, 1970 ಮತ್ತು 1990) ಮತ್ತು ಅದಕ್ಕೂ ನಂತರದ ಕಾಲಾವಧಿಯ ಮೇಲೆ ಕೇಂದ್ರೀಕರಿಸಿ ಭಾರತದ ಸಂಸತ್ತಿನ ಜೀವಂತ ಅನುಭವಗಳನ್ನು ಶೋಧಿಸ್ತುದೆ. ಅವನತಿಯಾಗುತ್ತಿದೆ ಎಂದು ವ್ಯಾಪಕವಾಗಿ ಹರಡಿರುವ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೃತಿಕಾರರು ವಾದಿಸುತ್ತಾರೆ ಮತ್ತು ಅದು ಆರು  ತನ್ನ ಅಸ್ತಿತ್ವದಲ್ಲಿ ಭಾರತದಲ್ಲಿ ಬದಲಾಗುತ್ತಿರುವ ಅಗತ್ಯಗಳಿಗೆ ತ್ಕಂತೆ ಮತ್ತೆ ಮತ್ತೆ ಹಾಗೂ ಯಶಸ್ವಿಯಾಗಿ ್ಪಂದಿಸುತ್ತಿದೆ ಎನ್ನುವುದನ್ನು ತೋರಿಸಿಕೊಡುತ್ತಾರೆ.

ಪುಸ್ತಕ ಒಳಗೊಂಡಿರುವ ಒಂಬತ್ತು ಅಧ್ಯಾಯಗಳ ಸ್ಥೂಲ ಪರಿಚಯ ಮಾಡಿಕೊಡುವುದಾದರೆ, ‘ಭಾರತದ ಸಂಸತ್ತಿನ ನಿರ್ಮಾಣ’ ಶೀರ್ಷಿಕೆಯ ಮೊದಲ ಅಧ್ಯಾಯದಲ್ಲಿ ಭಾರತೀಯ ಸಂಸತ್ತು ಒಂದು ಚಿಂತನೆಯಾಗಿ ಹಾಗೂ ಒಂದು ಸಂಸ್ಥೆಯಾಗಿ ಕಾಲಾಂತರದಲ್ಲಿ ಹೇಗೆ ನಿರ್ಮಿತವಾಯಿತು ಎನ್ನುವುದನ್ನು ಕಾಣಬಹುದು. ರಾಷ್ಟ್ರೀಯ ಚಳವಳಿ ಮತ್ತು ಸಂಸದೀಯ ಸರಕಾರ ರಚನೆಯ ಬಗ್ಗೆ ಒಡಮೂಡಿದ ಒಮ್ಮತದ ನಡುವಿನ ಸಂಬಂಧವನ್ನು  ಗುರುತಿಸುತ್ತದೆ. ಕರಡು ಸಂವಿಧಾನ ರಚನಾಸಮಿತಿಯ ಸಭೆಯಲ್ಲಿ ಅಧ್ಯಕ್ಷೀಯ, ್ಥಳೀಯ ಹಾಗೂ ಗಾಂಧೀ ಮಾದರಿ ಸರಕಾರಗಳಿಗೆ ಪ್ರತಿಯಾಗಿ ಸಂಸದೀಯ ಮಾದರಿ ಸರಕಾರದ ಪರವಾಗಿ ನಡೆದ ಮುಖ್ಯ ವಾದಗಳತ್ತ ಇದು ಗಮನಹರಿಸ್ತುದೆ. ಸಂಸತ್ತಿನ ಮಹ್ವದ ಸಾಧನೆಗಳನ್ನು ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯದ ಪ್ರಾರಂಭದಲ್ಲಿ  ಅತ್ಯಂತ ಸಂಕ್ಟದ ದಿನಗಳಾದ 1970ರ ದಶಕ ಮತ್ತು ರಾಜಕೀಯ ಅಸ್ಥಿರತೆಯನ್ನು ಕಾಡಿದ ಸಮ್ಮಿಶ್ರ ಸರಕಾರಗಳ 1990ರ ದಶಕದ ಕಾಲದ ಬೆಳವಣಿಗೆಗಳನ್ನು ಈ ಅಧ್ಯಾಯವು ಚರ್ಚಿಸುತ್ತದೆ. ತನ್ನ ಆಂತರಿಕ ಕಾರ್ಯನಿರ್ವಹಣೆಯನ್ನು  ಕೈಗೊ ್ಳಲಾದ ‘ಪಕ್ಷಾಂತರ ನಿಷೇಧ ಕಾನೂನಿ’ನಂತಹ ಸಂವಿಧಾನಾತ್ಮಕ ಹಾಗೂ ಕಾನೂನಿನ ಮಾರ್ಗವೂ ಸೇರಿದಂತೆ ಇಷ್ಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸಂಸತ್ತಿನ ಸಾಂಸ್ಥಿಕ ಸಂಕೀರ್ಣತೆಯನ್ನು ಇದು ಪರಿಚಯಿಸ್ತುದೆ. ್ವಲ್ಪಮಟ್ಟಿಗೆ ಸಂಸತ್ತು ಹಾಗೂ ಚುನಾವಣಾಪ್ರಕ್ರಿಯೆಯ ನಡುವಿನ ಸಂಬಂಧ ಮತ್ತು ಸಂಸತ್ತು ಹಾಗೂ ರಾಜಕೀಯ ಪಕ್ಷಗಳ ನಡುವಿನ ಸಂಬಂಧದ ಬಗ್ಗೆಯೂ ಸಹ ಇದು ಗಮನಹರಿಸುತ್ತದೆ.

ಲೋಕಸಭೆಯ ಬದಲಾಗುತ್ತಿರುವ ಸಾಮಾಜಿಕ ರಚನೆ ಕುರಿತು ಎರಡನೆಯ ಅಧ್ಯಾಯ ವಿವರಿಸುತ್ತದೆ. 1950, 1970 ಮತ್ತು  1990ರ ದಶಕಗಳ  ವಿಶೇಷ ಗಮನಹರಿಸಿ, ಸಂಸತ್ತಿನ ಸಾಮಾಜಿಕ ರಚನೆಯಲ್ಲಾದ ಬದಲಾವಣೆಯನ್ನು ವಿವರಿಸುತ್ತದೆ. ಸ್ವಾತಂತ್ರ್ಯಾನಂತರದ ಮೊದಲ ಮೂರು ದಶಕಗಳ ಕಾಲ ಆಳಿದ ಕಾಂಗ್ರೆಸ್, ಕ್ರಿಯಾಶೀಲ, ಸಾಮಾಜಿಕ ತಳಹದಿಯು, ಸಾಮಾಜಿಕ, ಆರ್ಥಿಕ ಹಾಗೂ  ಬೌದ್ಧಿಕ ಗಣ್ಯರನ್ನು ಒಳಗೊಂಡಿದ್ದರೂ ಕೂಡ, ಸಂಸತ್ತಿನ ಪ್ರತಿನಿಧಿಗಳ ಆಯ್ಕೆಯಲ್ಲಿ ವ್ಯೆವಿಧ್ಯಮಯ ಗುಂಪುಗಳು ಹಾಗೂ ಸಮುದಾಯ ಗಳನ್ನು ಒಳಗೊಳ್ಳುವ ನೀತಿಯನ್ನು ಅನುಸರಿಸಿತು. 1960ರ ದಶಕದ ಕೊನೆಯ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿ ಈ ಗುಂಪುಗಳು ಕಾಂಗ್ರೆಸ್‌ನೊಂದಿಗಿನ ತಮ್ಮ ಸಂಬಂಧವನ್ನು ಕಡಿದುಕ್ಳೊಲು ಪ್ರಾರಂಭಿಸಿದವು. ಭೂ  ವ್ಯಾಪಾರ್ಥರ ಒಂದು ವರ್ಗ ಮತ್ತು ಸಂಪ್ರದಾಯವಾದಿಗಳು ಭಾರತೀಯ ಜನಸಂಘ ಮತ್ತು ್ವತಂತ್ರ ಪಕ್ಷದ ಕಡೆ, ಮಧ್ಯಮವರ್ಗದ ರೈತರು ಮತ್ತು ಮಧ್ಯಮ ಜಾತಿಗಳು ಕಾಂಗ್ರೆಸ್‌ನಿಂದ ಹೊರಬಂದು ಭಾರತೀಯ ಕ್ರಾಂತಿದಳ, ಭಾರತೀಯ ಲೋಕದಳ ಮತ್ತು ಹಲವು ಬಗೆಯ ಸಮಾಜವಾದಿ ಪಕ್ಷಗಳನ್ನು ಸೇರಿದವು. ಈ ಪ್ರಕ್ರಿಯೆಯಲ್ಲಿ ಹಳ್ಳಿಗಳತ್ತ ಅಧಿಕಾರ ಪಸರಿಸತೊಡಗಿತು. 1980 ಹಾಗೂ 1990ರ ದಶಕದಲ್ಲಿ ಸಂಸತ್ತಿನ ರಚನೆಯಲ್ಲಿ ಮ ಹ್ವದ ಬದಲಾವಣೆಯಾಯಿತು. ಇದುವರೆಗೂ ರಾಜ್ಯಕ್ಕೆ ಸೀಮಿತವಾಗಿದ್ದ ಶಕ್ತಿಗಳು ಕ್ರಮೇಣ ಸಂಸತ್ತಿನಲ್ಲಿ ತಮ್ಮನ್ನು

‘ಬದಲಾಗುತ್ತಿರುವ ಪ್ರಾತಿನಿಧ್ಯದ ಪರಿಕಲ್ಪನೆ’ಯನ್ನು ಮೂರನೆಯ ಅಧ್ಯಾಯ ವಿವರಿಸುತ್ತದೆ. ಚರ್ಚಾಂಶಗಳು, ಕಳಕಳಿಗಳು ಹಾಗೂ ಸಂಸ್ಥೆಗಳಲ್ಲಿ 1950ರಿಂದ ಇಂದಿನವರೆಗೆ ಪ್ರಾತಿನಿಧ್ಯವನ್ನು ಕುರಿತ ಚಿಂತನೆಗಳಲ್ಲಿ ಆಗಿರುವ ಸ್ಥಿತ್ಯಂತರಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. 1950ರ ಪ್ರಾರಂಭದಲ್ಲಿ ಚುನಾಯಿತ ಪ್ರತಿನಿಧಿಗಳು ತಾವು ಪ್ರತಿನಿಧಿಸುವ ಕ್ಷೇತ್ರಕ್ಕಿಂತ ಹೆಚ್ಚಾಗಿ ರ್ಟ್ರಾದ ಹಿತಚಿಂತನೆಯ ಬಗ್ಗೆ ಕಳಕಳಿಯನ್ನು ಹೊಂದಿದ್ದರು. ಜಾತಿ, ಸಮುದಾಯ, ಸಾರ್ವಜನಿಕ ಸೌಲಭ್ಯಗಳು, ನದಿನೀರಿನ ವಿವಾದ, ಹಲವು ವಂಚಿತ ಗುಂಪುಗಳಿಗೆ ಮೀಸಲಾತಿ ಮತ್ತು ಪ್ರಾದೇಶಿಕ ಗುರುತುಗಳ ಪ್ರತಿಪಾದನೆ ಇತ್ಯಾದಿ  ಸಂಸತ್ತು ನಿಭಾಯಿಸಿದ ರೀತಿಯನ್ನು ನೋಡಿದರೆ ಇದು ನಮಗೆ ಸ್ಪ್ಟವಾಗ್ತುದೆ. ಇವುಗಳಲ್ಲಿ ಕೆಲವು ಇಂದಿಗೂ ನಮ್ಮನ್ನು ಕಾಡುತ್ತಿವೆ. ಆದರೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಅವುಗಳನ್ನು ನಿಭಾಯಿಸಿದ ರೀತಿ ಭಿನ್ನವಾಗಿತ್ತು. ಘನತೆವ್ತೆ ಸಂಸತ್ತಿನ ಸದಸ್ಯರುಗಳು ತಮ್ಮ ಸಂಕುಚಿತ ಹಾಗೂ ಸೀಮಿತ ದೃಷ್ಟಿಕೋನವನ್ನು ಬದಿಗಿರಿಸಿ ಇಡೀ ದೇಶದ ಹಿತಾಸಕ್ತಿಯ ಕಡೆ ಗಮನ ಹರಿಸಬೇಕು ಎಂದು ಆಗಾಗ ಅವರನ್ನು ಎಚ್ಚರಿಸಲಾಗುತ್ತಿತ್ತು.  ಸದಸ್ಯರುಗಳೂ ಸಹ ಅಂತಹ ಪಾತ್ರವನ್ನೇ ನಿರ್ವಹಿಸಲು ಇಚ್ಛಿಸುತ್ತಿದ್ದರು ಎನ್ನುವುದು ಸದನದಲ್ಲಿ ಅವರುಗಳು ಕೇಳುತ್ತ್ದಿ  ವ್ಯ್ತವಾುತ್ತಿತ್ತು. 1970ರ ಹೊತ್ತಿಗೆ ಈ ದೃಷ್ಟಿಕೋನದಲ್ಲಿ ಅಗಾಧ ಬದಲಾವಣೆಯಾಯಿತು. ಸದಸ್ಯರುಗಳು ಹೆಚ್ಚು ಹೆಚ್ಚಾಗಿ ಜಾತಿ, ಸಮುದಾಯ ಹಾಗೂ ಪ್ರಾದೇಶಿಕ ಭಾಷೆಯನ್ನು ಬಳಸತೊಡಗಿದರು. ಕೇವಲ ಮಾತನಾಡುವುದಷ್ಟೇ ಅಲ್ಲದೆ ರಾಷ್ಟ್ರದ ಹಿತಾಸಕ್ತಿಯ ಬಗ್ಗೆ ಯೋಚಿಸುವುದರ ಬದಲಾಗಿ ಇಂತಹ ವಿಷಯಗಳ ಬಗ್ಗೆ ಚಿಂತಿಸುವುದು ಬಹಳ ಮುಖ್ಯ ಎಂದು ಅವರು ಯೋಚಿತೊಡಗಿದರು. ಹಾಗೆ ಮಾಡುವುದರ ಮೂಲಕ ಅದುವರೆಗೂ ಒಂದು ಸುಸಂಬದ್ಧ ರಾಷ್ಟ್ರದ ಹೆಸರಿನಲ್ಲಿ ಮುಲೆಗುಂಪಾಗ್ದಿ ಇಂತಹ ಹಲವಾರು ವಿಷಯಗಳನ್ನು ಮತ್ತು 1950ರವರೆಗೆ ಬಹಳ ಜಾಳುಜಾಳಾಗಿ  ಸಾಂಸ್ಥಿಕ ನಡವಳಿಕೆಗಳ ಮೇಲೆ ಅವುಗಳ ಪರಿಣಾಮಗಳನ್ನು ಎತ್ತಿಹಿಡಿಯತೊಡಗಿದರು.

1970ರ ಹೊತ್ತಿಗೆ, ಜೆ.ಪಿ.ಚಳವಳಿಯಲ್ಲಿ ಅಭಿವ್ಯಕ್ತಗೊಂಡ ಹಾಗೆ ಭಾರತದ ಸಾರ್ವಜನಿಕ ಸಂಸ್ಥೆಗಳ ವಿಫಲತೆಯ ಬಗ್ಗೆ ಒಂದು ವಿಧದ ಸಂಕಷ್ಟ ಮತ್ತು ಹತಾಶೆ ದೇಶಾದ್ಯಂತ ಆವರಿಸಿತ್ತು. ಅದೇ ಸಮಯದಲ್ಲಿ, ಸಂಸತ್ತು ಅಂತಹ ವಿಷಯಗಳನ್ನು ನೇರವಾಗಿ ಎದುರಿಸಲು ಹಿಂಜರಿದರೂ ಕೂಡ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಡೆಗಣಿಸುವಂತಿರಲಿಲ್ಲ. ಈ ಪರಿಸ್ಥಿತಿ, ಕಾರ್ಯಾಂಗವು ಸಂಸತ್ತಿಗಿಂತಲೂ ಪ್ರಧಾನವಾಗುವ ಅವಕಾಶವನ್ನು ಕಲ್ಪಿಸಿತು. ಪ್ರತಿನಿಧಿಗಳು 1950ರಲ್ಲಿ ಯಾವುದನ್ನು ತಮ್ಮ ಜವಾಬ್ದಾರಿಗಳೆಂದು ತಿಳಿದುಕೊಂಡಿದ್ದರೋ ಅವುಗಳನ್ನು  ಮತ್ತು ಕಾರ್ಯಾಂಗಕ್ಕೆ ವರ್ಗಾಯಿಸತೊಡಗಿದರು. ಅದೇ ಸಮಯದಲ್ಲಿಯೇ 1970ರ ದಶಕದಲ್ಲಿ ಭಾರತೀಯ ಪ್ರಜಾಪ್ರಭ್ವುದ ಬುನಾದಿ ವಿಸ್ತಾರಗೊಳ್ಳುತ್ತಾ ಹೋಯಿತು. ಅದರ ವ್ಯಾಪ್ತಿಗೆ ಗಣನೀಯ ಸಂಖ್ಯೆಯಲ್ಲಿ ಜನರು ಪ್ರವೇಶಿಸತೊ ಡಗಿದರು. ಈ ಕಾಲದಲ್ಲಿ ರೂಪಿತವಾದ ಕೆಲವು ಸಾರ್ವಜನಿಕ ನೀತಿಗಳು, ಉದಾಹರಣೆಗೆ, ಇ್ಪತ್ತು ಅಂಶಗಳ ಕಾರ್ಯಕ್ರಮ, ರಾಜರುಗಳಿಗ್ದಿ ವಿಶೇಷ ಸವಲತ್ತುಗಳ ನಿಷೇಧ, ರಾಜಕೀಯ ಹೊಂದಾಣಿಕೆಗಳಲ್ಲಾದ ಬದಲಾವಣೆ ಮುಂತಾದವು ಇದಕ್ಕೆ ಪೂರಕವಾಗಿದ್ದವು.

1950ರಲ್ಲಿ ಒಬ್ಬ ಸಂಸತ್ ಸದಸ್ಯ, ಸ್ಥಳೀಯವಾಗಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗ್ದಿ. ತಾನು ಒಬ್ಬ  ಇಡೀ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದೇನೆ ಎಂದು ಭಾವಿಸಿದ್ದ. ಅವನು ಜನಪ್ರತಿನಿಧಿ ಎಂಬುದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. 1970ರ ಹೊತ್ತಿಗೆ ಪ್ರಾತಿನಿಧ್ಯದ ತಳಹದಿಯು ಗಣನೀಯವಾಗಿ ವಿಸ್ತಾರಗೊಳ್ಳುತ್ತಾ ಹೋಯಿತು. ಅದರಲ್ಲೂ ವಿಶೇಷವಾಗಿ, ಹಿಂದುಳಿದ ವರ್ಗಗಳು ಇದರಲ್ಲಿ ಪ್ರಮುಖ ಪಾತ್ರವಹಿಸಿದವು. 1990ರ ದಶಕ ರಾಜಕೀಯ ಪಕ್ಷಗಳ ಮತ್ತು ಅವುಗಳ ಸಾಮಾಜಿಕ ತಳಹದಿಯ ವಿಘಟನೆಯ ಮತ್ತು ಅಸ್ಮಿತೆಗಳ ಪ್ರತಿಪಾದನೆಯ ಕಾಲ. ಅವುಗಳನ್ನೆಲ್ಲ ಒಳಗೊಳ್ಳುವ ಒಂದು ಸಮಗ್ರ ಚೌಕಟ್ಟನ್ನು ರೂಪಿಸುವುದು ಸಂಸತ್ತಿನ ಮುಖ್ಯ ಕಾಳಜಿಯಾಗಿತ್ತು. ಕೆಲವರ ಪ್ರಕಾರ ಹಿಂದ್ವು  ಒಂದು ಸಮಗ್ರ ಚೌಕಟ್ಟನ್ನು ಒದಗಿಸಬಲ್ಲುದಾಗಿತ್ತು. ಹಿಂದುತ್ವ ಎನ್ನುವುದು ಬಹುಸಂಖ್ಯಾತ ಭಾರತೀಯರು ಒಪ್ಪಿಕೊಂಡಿರುವ ಅಸ್ಮಿತೆ ಎುಂ ಅವರು ಭಾವಿಸ್ದಿರು. ಇನ್ನು ಕೆಲವರ ಪ್ರಕಾರ ಜಾತ್ಯತೀತವಾದಿ ತತ್ವ ಅಂತಹ ಒಂದು ಸಮಗ್ರ ಚೌಕಟ್ಟನ್ನು ಕೊಡಬಲ್ಲದಾಗಿತ್ತು. ಸಂಸತ್ತಿನ ಮೇಲೆ ರಾಜಕೀಯದ ಈ ಸ್ಪಷ್ಟ ವಿಭಜನೆಯ ಪರಿಣಾಮ ಅನಿವಾರ‌್ಯವಾಗಿತ್ತು. ಭಾರತಕ್ಕೆ ಅಧ್ಯಕ್ಷೀಯ ಮಾದರಿಯ ಸರಕಾರ ಸೂಕ್ತವೇ ಎಂಬ ವಾದ ುತ್ತೆ ತಲೆಯೆತ್ತಿತು. ಯಾವ ಪಕ್ಷವೂ ತನ್ನ ಸ್ವಂತಬಲದ ಮೇಲೆ ಅಧಿಕಾರ ರಚಿಸುವುದು  ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ  ಸರಕಾರದ ರಚನೆ ಅನಿವಾರ್ಯವಾಯಿತು. ಪ್ರಾದೇಶಿಕತೆ ಮತ್ತು ಅಸ್ಮಿತೆ ಆಧರಿತ ರಾಜಕೀಯ ಪ್ರಾಧಾನ್ಯ ಪಡೆಯಿತಯ ಮತ್ತು ಪ್ರಾತಿನಿಧ್ಯವು ಹೊಸ ವ್ಯಾಖ್ಯಾನವನ್ನು ಪಡೆಯತೊಡಗಿತು. ಇ್ಟಲ್ಲದೆ ಸಂವಿಧಾನಾತ್ಮಕ ಚೌಟ್ಟ್ನು ಬದಲಾಯಿಸಬೇಕೆಂಬ ಸಲಹೆಗಳೂ ಸಹ ಕೆಲವೆಡೆಗಳಿಂದ ಬಂದವಾದರೂ ಅದರಿಂದ ಹೆಚ್ಚೇನನ್ನೂ ಸಾಧಿಸಲಾಗಲಿಲ್ಲ.

ನಾಲ್ಕನೆ ಅಧ್ಯಾಯದ ಶೀರ್ಷಿಕೆ, ‘ಬದಲಾಗುತ್ತಿರುವ ಸಂಕಥನ ವಿದಾನ: ಇಂಗ್ಲೀಷಿನಿಂದ ಪ್ರಾದೇಶಿಕ ಭಾಷೆಗಳಿಗೆ ಸ್ಥಿತ್ಯಂತರ’.

ಇದು ಸದನದಲ್ಲಿ ಆಭಿವ್ಯಕ್ತಿಯ ಮಾಧ್ಯಮವಾಗಿ ಭಾಷೆಯಲ್ಲಾದ ಬದಲಾವಣೆಯನ್ನು ಚರ್ಚಿಸುತ್ತದೆ. ಕರಡು ಸಂವಿಧಾನ ರಚನಾಸಮಿತಿಯ ಸಭೆ ಹಾಗೂ ಸಂಸತ್ತಿನ  ದಿನಗಳಲ್ಲಿ ಆ್ಂಲಭಾಷೆ ಪ್ರಮುಖವಾದ ಮಾಧ್ಯಮವಾಗಿತ್ತು. ಇದು ವಸಾಹತುಶಾಹಿಯ ಯಾಜಮಾನ್ಯ ಭಾಷೆಯೂ ಆಗಿತ್ತು ಮತ್ತು ಸಂಸತ್ತಿನ ಬಹಳಷ್ಟು ಸದಸ್ಯರಿಗೆ ಅದು ಹೊಸದೇನೂ ಆಗಿರಲಿಲ್ಲ. ಹಿಂದಿ ರಾಷ್ಟ್ರೀಯ ಭಾಷೆ ಎನ್ನುವುದರ ಬಗ್ಗೆ ್ವಲ್ಪಮಟ್ಟಿನ ಒಮ್ಮತವಿತ್ತಾದರೂ ಬಹುಸಂಖ್ಯಾತ ಜನರ ಭಾಷೆಯಾಗಿ ಅದು ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಶ್ಧು ಹಿಂದಿ ಎನ್ನುವುದು ಗಣ್ಯರ, ಪ್ರತ್ಯೇಕವಾದ, ಸಂಕುಚಿತ ಭಾಷೆಯಾಯಿತು. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಹೊರಟ ವಿಧಾನದಿಂದಾಗಿ ಇತರ ಭಾರತೀಯ ಭಾಷೆಗಳು ತಮ್ಮ ಅಸ್ತಿತ್ವವನ್ನು  ಆತಂಕಕ್ಕೊಳಗಾದರು. ಕಾಲಕ್ರಮೇಣ ಸಂಸತ್ತಿನ ರಚನೆಯ ಸ್ವರೂಪವು ಬದಲಾಗುತ್ತಾ ಹೋದಂತೆ ಬಹಳಷ್ಟು ಸಂಸದರು ಹಿಂದಿಯ ಲ್ಲಾಗಲೀ, ಆ್ಂಲಭಾಷೆಯಲ್ಲಾಗಲೀ ಮಾತನಾಡಲು ಶಕ್ತರಾಗದೆ ಇರುವುದನ್ನು ನಾವು ಕಾಣುತ್ತೇವೆ. ಹಿಂದಿಯ ಮಹ್ವವನ್ನು ಉಳಿಸಿಕೊ ್ಳಲು, ಅದನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಾಯಿತಾದರೂ 1970ರ ವೇಳೆಗೆ ಪ್ರಾದೇಶಿಕ ಭಾಷೆಗಳು ತಮ್ಮ ಹಕ್ಕೊತ್ತಾಯ ಮಂಡಿಸಲು ಪ್ರಾರಂಭಿಸಿದವು. 1990ರ ಹೊತ್ತಿಗೆ ರಾಷ್ಟ್ರೀಯ ಭಾಷೆಯ ವಿಷಯವೇ ತನ್ನ ಮಹ್ವವನ್ನು ಕಳೆದುಕೊಂಡಿತು. 1950ರ ದಶಕದಲ್ಲಿ ಈ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಬಹುಅಸ್ಮಿತೆಗಳ ಹಕ್ಕೊತ್ತಾಯ  ಉದಾರೀಕರಣದ ಸಂದರ್ಭಗು ಸಾರ್ವಜನಿಕ ವಲಯದಲ್ಲಿ ಪ್ರಾದೇಶಿಕ ಭಾಷೆಗಳನ್ನು ಹಿಂದಿ ಮತ್ತು ಆಂಗ್ಲಭಾಷೆಯ ಜೊತೆಜೊತೆಯಲ್ಲೇ ಇರಿಸಿದವು.

‘ರಾಷ್ಟ್ರೀಯ ಅಸ್ಮಿತೆಯಿಂದ ಬಹ್ವುದ ಅಸ್ಮಿತೆಯೆಡೆಗೆ’ ಎಂಬ ಹೆಸರಿನ ಐದನೆ ಅಧ್ಯಾಯವು ಸಂಸತ್ತಿನಲ್ಲಿ ಪ್ರತಿಬಿಂಬಿತವಾದ ರಾಷ್ಟ್ರೀಯ ಅಸ್ಮಿತೆಯಿಂದ ಬಹು ಅಸ್ಮಿತೆಗಳೆಡೆಗೆ ಆದ ಸ್ಥಿತ್ಯಂತರವನ್ನು ತೋರಿಸುತ್ತದೆ. ಕಾಲ ಕಳೆದಂತೆ ಸಂಸತ್ತಿನ ಸಾಮಾಜಿಕ ರಚನೆಯಲ್ಲಿ ಬದಲಾವಣೆಗಳಾದರೂ ಸಹ ಅದು ವಿಭಿನ್ನ ಅಸ್ಮಿತೆಗಳ ಹುಟ್ಟಿಗೆ ಕಾರಣವಾಗಬೇಕಿರಲಿಲ್ಲ. ಅದೇನೇ ಇರಲಿ, 1980 ಮತ್ತು 1990ರ ದಶಕಗಳಲ್ಲಿ ಬಹಳಷ್ಟು  ಸದಸ್ಯರುಗಳು ತಮ್ಮ  ಕಾಳಜಿಗಳನ್ನು ವ್ಯಕ್ತಪಡಿಸಲು ಹೆಚ್ಚಾಗಿ ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ ಮತ್ತು ಲಿಂಗಾಧರಿತ ಅಸ್ಮಿತೆಗಳ ಮೊರೆಹೋಗುವುದನ್ನು ನಾವು ನೋಡುತ್ತೇವೆ. ಕರಡು ಸಂವಿಧಾನ ರಚನಾಸಮಿತಿಯಲ್ಲಿ ಇದಕ್ಕೆ ವಿರುದ್ಧವಾಗಿ ರಾಷ್ಟ್ರೀಯ ಅಸ್ಮಿತೆಯ ಮಹತ್ವದ ಬಗ್ಗೆ ತೀವ್ರ ಕಾಳಜಿಯನ್ನು ವ್ಯ್ತಪಡಿಸಲಾಗಿತ್ತು. 1970ರಲ್ಲಿ ಈ ಬೆಳವಣಿಗೆ ಮಸುಕುಮಸುಕಾಗಿತ್ತು. ಜನತಾಪಕ್ಷವು ತನ್ನೊಳಗೆ ಹಲವಾರು ಅಸ್ಮಿತೆಗಳನ್ನು ಅಡಗಿಸಿಕೊಂಡ್ದಿರೂ ಈ ಸಮಯದಲ್ಲಿ ರ್ಟ್ರಾವ್ಯಾಪಿಯಾಗಿದ್ದ ಜೆ.ಪಿ.ಚಳವಳಿಯ ಕೇಂದ್ರ ಸಿದ್ಧಾಂತದಲ್ಲಿ ಅವುಗಳಿಗೆ ಪ್ರಮುಖ ಪಾತ್ರವೇ ಇರಲಿಲ್ಲ. 1990ರಲ್ಲಿ ಎಲ್ಲ ತರದ ಬಹುತ್ವ ಅಸ್ಮಿತೆಗಳು ರಾಜಕೀಯ  ತಮ್ಮನ್ನು ಗುರುತಿಸಿಕ್ಳೊಲು ಪ್ರಾರಂಭಿಸಿದವು. ಸಂಸತ್ ಸದಸ್ಯರುಗಳು ಈ ಬೆಳವಣಿಗೆಯಿಂದ ತಮ್ಮನ್ನು ಪ್ರತ್ಯೇಕಗೊಳಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಈ ಕಾಲದಲ್ಲಿ ಲೋಕಸಭೆ ಅಗಾಧ ಬದಲಾವಣೆಗಳನ್ನು ಕಂಡಿತು.

ಸಂಸತ್ತು ಹಾಗೂ ನ್ಯಾಯಾಂಗದ ನಡುವಿನ ಸಂಬಂಧವನ್ನು ಆರನೇ ಅಧ್ಯಾಯವು ಒಳಗೊಂಡಿದೆ.  1950,70 ಹಾಗೂ 90ರ ದಶಕವನ್ನು ಪ್ರಮುಖ ಹಂತಗಳಾಗಿ ಗುರುತಿಸಿಕೊಂಡು ಸಂಸತ್ತು ಹಾಗೂ  ನ್ಯಾಯಾಂಗದ ನಡುವಿನ ಸಂಬಂಧವನ್ನು ಇದು ಚರ್ಚಿಸ್ತುದೆ. ಮೊದಲಿನ ಎರಡು ದಶಕಗಳಲ್ಲಿ ಸಂಸತ್ತಿಗಿರುವ ಆದ್ಯತೆಯನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿತ್ತು. ಆದರೆ, ಕೇಶವಾನಂದ ಭಾರತಿ  ನಂತರ ತ್ಕಡಿ ನಿಧಾನವಾಗಿ ನ್ಯಾಯಾಂಗದ ಕಡೆ ವಾಲತೊಡಗಿತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನ್ಯಾಯಾಂಗದ ವ್ಯಾಪ್ತಿಯನ್ನು ಕಡಿತಗೊಳಿಸುವ ಪ್ರಯತ್ನವನ್ನು ಸಂಸತ್ತು ಮಾಡಿತ್ತು. ಆದರೆ 1977ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬರುತ್ತ್ದಿಂತೆ ನ್ಯಾಯಾಂಗವು ದೇಶದ ಸಂವಿಧಾನ ಮತ್ತು ಕಾನೂನಿನ ಆಳ್ವಿಕೆಯ ರಕ್ಷಕನ ಪಾತ್ರವನ್ನು ವಹಿಸತೊಡಗಿತು. ಸ್ವಾತಂತ್ರೊ್ಯ್ತೀರ ಭಾರತದಲ್ಲಿ ಸಂಸತ್ತು ಹಾಗೂ ನ್ಯಾಯಾಂಗದ ನಡುವಿನ ಸಂಬಂಧ ಬ್ಕಿಟ್ಟಿನಿಂದ ಕೂಡಿತ್ತಾದರೂ ಹಲವಾರು ವಿವಾದ್ಮಾಕ ಪರಿಸ್ಥಿತಿಗಳಲ್ಲಿ ನ್ಯಾಯಾಂಗವು ಸಂಸತ್ತಿನ ಪರವಾಗಿ ನಿಂತಿದೆಯೆಂದೇ ಹೇಳಬೇಕು. ಈ ಅಧ್ಯಾಯವು ಅಧಿಕಾರ ಕ್ಷೇತ್ರ,  ಮತ್ತು ಧಾರ್ಮಿಕ ಒಡಂಬಡಿಕೆ ಅಂಶಗಳು, ಅಲ್ಪಸಂಖ್ಯಾತ ಹಕ್ಕುಗಳು, ಧರ್ಮ ಮತ್ತು ಪೂಜೆ, ಪ್ರಜಾಪ್ರಭುತ್ವ ಮತ್ತು ಹಕ್ಕುಗಳು, ಸಮಾನತೆ ಮತ್ತು ಮೀಸಲಾತಿ ನೀತಿ, ಪ್ರಾತಿನಿಧ್ಯ, ುನಾವಣೆ ಮತ್ತು ತುರ್ತುಪರಿಸ್ಥಿತಿಯ ಅಧಿಕಾರಗಳು ಮತ್ತು ಕೆನೆಪದರಿನ ಪರಿಕಲ್ಪನೆ ಮುಂತಾದ ವಿವಾದ್ಮಾಕ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಮತ್ತು ನ್ಯಾಯಾಂಗದ ನಡುವಿನ ಸಂಘರ್ಷವನ್ನು ವಿವರಿಸುತ್ತದೆ. ನ್ಯಾಯಾಂಗದ ಕ್ರಿಯಾಶೀಲತೆ ಮತ್ತು ಸಂಸತ್ತಿನ ವ್ಯಾಪ್ತಿಯ ಮೇಲಾದ ಅದರ ಪರಿಣಾಮದ ಬಗ್ಗೆಯೂ ಕೂಡ ಈ ಅಧ್ಯಾಯದಲ್ಲಿ ಸಾಕಷ್ಟು ಚರ್ಚಿಸಲಾಗಿದೆ. ಲೋಕಸಭಾ  ರಾಜ್ಯಸಭಾಗಳ ನಡುವಿನ ಸಂಬಂಧದ ಬಗ್ಗೆ ಲಭ್ಯವಿರುವ ಅಧ್ಯಯನಗಳಲ್ಲಿ ಹೆಚ್ಚೇನೂ ಮಾಹಿತಿಯಿಲ್ಲ.

‘ಲೋಕಸಭೆ ಹಾಗೂ ರಾಜ್ಯಸಭೆ’ ಶೀರ್ಷಿಕೆಯ ಏಳನೇ ಅಧ್ಯಾಯವು ರಾಜ್ಯಸಭಾದ ಅಸ್ತಿತ್ವಕ್ಕೆ ನೀಡಲಾಗಿರುವ ವ್ಯೆಚಾರಿಕ ಸಮರ್ಥನೆಗಳು ಮತ್ತು ಕಾಲಕ್ರಮೇಣ ಅದರ ಸುತ್ತ ಬೆಳೆದಿರುವ ವಿವಾದಗಳನ್ನು ವಿಶ್ಲೇಷಿಸುತ್ತದೆ. ರಾಜ್ಯಸಭಾದ ಬೆಳವಣಿಗೆ ಮತ್ತು ಅದು ತನ್ನದೇ ಆದ ನಿರ್ದ್ಟಿ ವಲಯವನ್ನು ಸೃಷ್ಟಿಸಲು ಮಾಡಿರುವ ಪ್ರಯತ್ನವನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಚರ್ಚೆಗಳ ಗುಣಮ ಟ್ಟದ ಮೇಲೆ ಸದನಗಳ ಪ್ರಭಾವವನ್ನು ವಿಶ್ಲೇಷಿಸಲು ಇಲ್ಲಿಯವರೆಗೆ ಸಂಸತ್ತಿನಲ್ಲಿ  ಮೂರು ಜಂಟಿಸದನಗಳ ಸಭೆಯ ನಡಾವಳಿಯನ್ನು ಇಲ್ಲಿ ಪರಿಶೀಲಿಸಲಾಗಿದೆ. ರಾಜ್ಯಸಭಾ ಸದಸ್ಯ್ವಕ್ಕೆ ವಾಸ್ಥಳ ಅಗತ್ಯವೆನ್ನುವುದರ ಬಗ್ಗೆ ನಡೆದಿುವ ಇತ್ತೀಚಿನ ವಿವಾದದ ಮತ್ತು ಅದರ ಕುರಿತಾದ ನ್ಯಾಯಾಂಗದ ತೀರ್ಪಿನ ಹಿನ್ನೆಲೆಯಲ್ಲಿ ಭಾರತದ ಅಗಾದ ವೈವಿಧ್ಯತೆಯ್ನು ಗಮನದಲ್ಲಿರಿಸಿಕೊಂಡು ಈ ಅಧ್ಯಾಯವು ರಾಜ್ಯಸಭಾವನ್ನು ಬೇರೆಯದೇ ಆದ ನೆಲೆಯಲ್ಲಿ ನೋಡಲು ಪ್ರಯತ್ನಿಸಿದೆ.

 ‘ಲೋಕಸಭೆಯ ಸದನದೊಳಗಿನ ಬೆಳವಣಿಗೆ’ ಅಡಿಯಲ್ಲಿ ಲೋಕಸಭೆಯ ಆಂತರಿಕ ಪುನರುತ್ಪಾದನೆಯ ವಿಷಯವನ್ನು ಎಂಟನೆ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಲೋಕಸಭೆಯ ಆಂತರಿಕ ಸಂಸ್ಥೆಗಳಾದ ಸಭಾಧ್ಯಕ್ಷ, ವಿರೋದಪಕ್ಷ ಮತ್ತು  ಸ್ಥಾಯೀಸಮಿತಿಗಳಲ್ಲಿ ಗುರುತಿಸಲಾಗಿರುವ ಪ್ರಮುಖ ಮೂರು ಹಂತಗಳಲ್ಲಾದ ಬದಲಾವಣೆಗಳನ್ನು ಎಂಟನೇ ಅಧ್ಯಾಯವು ಗುರುತಿಸ್ತುದೆ. 1990ರ ದಶಕದಲ್ಲಿ ವಿರೋಧಪಕ್ಷಗಳ ಬಲ ಗಣನೀಯವಾಗಿ ಹೆಚ್ಚಿದೆಯೆಂದು ಈ ಅಧ್ಯಾಯವು ಸೂಚಿಸ್ತುದೆ. ಲೋಕಸಭೆ  ಒಂದು ಸಂಸ್ಥೆಯಾಗಿ ವ್ಯವಸ್ಥೆಯ ವಿರೋಧಿಗಳನ್ನು, ಅವಿಧೇಯರನ್ನು ತನ್ನ ಕಾರ್ಯನಿರ್ವಹಣೆಯ ರಚನೆಯ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಈ ಅಧ್ಯಯನವು ಕಂಡುಕೊಂಡಂತೆ, ಭಾರತದ ಲೋಕಸಭೆಯ ಸಭಾಧ್ಯಕ್ಷ ಎನ್ನುವ ವ್ಯಕ್ತಿ ಆಳುವಪಕ್ಷದ ಹಿಡಿತದಿಂದ ಹೊರಬಂದು ತನ್ನದೇ ಆದ ಅಸ್ತ್ವಿವ್ನು ಕಂಡುಕೊಳ್ಳುವ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಈ  ಕೆಲಮಟ್ಟಿನ ಪ್ರಗತಿಯಾಗಿದೆ.

‘ಲೋಕಸಭೆಯಲ್ಲಿ ಸ್ಥಾಯೀಸಮಿತಿಗು’ ಎನ್ನುವ ಅಧ್ಯಾಯದಲ್ಲಿ ಸಂಸತ್ತಿನ ಕಾಯ ದರ್ಕ್ಷತೆಯನ್ನು ವೃದ್ಧಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಸಮಿತಿಗಳ ಕಾರ್ಯನಿರ್ವಹಣೆಯ ವಿಸ್ತೃತ ವಿಶ್ಲೇಷಣೆಯನ್ನು ಮಾಡಲಾಗಿದೆ. ಅತಿ ಮುಖ್ಯ ವಿಭಾಗಗಳಿಗೆ ಸಂಬಂಧಿಸಿದ ಸಮಿತಿಗಳ ರಚನೆ, ಸಂಸತ್ತು ತನ್ನ ರಕ್ಷಣೆಗೆ ಕಂಡುಕೊಂಡ ಹಲವಾರು ಮಾರ್ಗಗಳಲ್ಲಿ ಒಂದಾಗಿದೆ. ಈ ಮೊದಲಿಗೆ ಹೋಲಿಸಿದರೆ ಲೋಕಸಭೆಯು ಚರ್ಚೆಗೆ ವ್ಯಯಿಸುತ್ತಿರುವ  ಕಾಲ ಬಹಳ ಕಡಿಮೆಯಾಗಿದ್ದರೂ ಕೂಡ ಆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವ ರವಸೆಯನ್ನು ಈ ಸಮಿತಿಗಳು  ಸಂಸತ್ತಿನ ಸಾಂಸ್ಥಿಕ ಸ್ವಾಸ್ಥ್ಯವನ್ನು ಉತ್ತಮಪಡಿಸಲು ಈ ಅಧ್ಯಾಯ ಯಾವುದೇ ನಿರ್ದಿಷ್ಟ  ಶಿಫಾರಸುಗಳನ್ನು ಮಾಡದ್ದಿರೂ ಕೂಡ ಈ ದಿಕ್ಕಿನಲ್ಲಿ ಮಾಡಬೇಕಾದ ಕೆಲಸ ಬಹಳಷ್ಟಿದೆ ಎನ್ನುವುದನ್ನು ಇಲ್ಲಿ ಸೂಚಿ ಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close