About Us Advertise with us Be a Reporter E-Paper

Breaking Newsರಾಜ್ಯ

ಸೇತುವೆಯಿಂದ ನದಿಗುರುಳಿದ ಬೊಲೆರೋ ವಾಹನ: ಮಹಿಳೆ ದುರ್ಮರಣ

ಮಂಗಳೂರು: ಸೇತುವೆಯಿಂದ ಬೊಲೆರೋ ವಾಹನವೊಂದು ನದಿಗೆ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ನಡೆದಿದೆ.

ಡಯಾನ(45) ಮೃತ ಮಹಿಳೆ. ಮೃತ ಮಹಿಳೆಯನ್ನು ಕಾರ್ಕಳದ ಬೋಳ ನಿವಾಸಿ ಎಂದು ಗುರುತಿಸಲಾಗಿದ್ದು, ಶಾಂಭವಿ ನದಿಯ ತಡೆಯಿಲ್ಲದ ಸೇತುವೆ ದಾಟುತ್ತಿದ್ದಾಗ ಬೊಲೆರೋ ಆಯತಪ್ಪಿ ನದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪದವು ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್ ಅವರು ಕುಟುಂಬ ಸಮೇತ ಮಂಗಳೂರಿಗೆ ಮದುವೆ  ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ವಾಹನದಲ್ಲಿ ಸ್ಟ್ಯಾನಿ ಅವರ ಪತ್ನಿ ಡಯಾನಾ, ಮಕ್ಕಳಾದ ಶೆಲ್ಡನ್ ಮತ್ತು ಶರ್ಮನ್ ಜೊತೆಗಿದ್ದರು. ಸಂಕಲಕರಿಯ ಸಮೀಪ ಶಾಂಭವಿ ನದಿ ಸೇತುವೆ ಮೇಲಿಂದ ಇವರಿದ್ದ ಬುಲೇರೋ ವಾಹನ ನದಿಗೆ ಬಿದ್ದಿದೆ.

ನದಿಗುರುಳಿದ ವಾಹನ ಕಂಡು ಸ್ಥಳೀಯರು ನೀರಿಗೆ ಧುಮುಕಿ ಮೂವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close