About Us Advertise with us Be a Reporter E-Paper

ವಿವಾಹ್

ಹನಿಮೂನ್‌ಗೋಸ್ಕರ ಇಡೀ ರೈಲೇ ಬುಕ್ಕಿಂಗ್!

ನೀಲಗಿರಿ ಪರ್ವತದ ಸಾಲಿನಲ್ಲಿ ರೈಲು ಪ್ರಯಾಣವೇ ಆರಾಮದಾಯಕ. ಅದರಲ್ಲೂ ಮಳೆಗಾಲವೋ, ಚಳಿ ಗಾಲವೋ ಆಗಿದ್ದರಂತೂ ಮುಗಿದೇ ಹೋಯಿತು. ಸ್ವರ್ಗದಲ್ಲಿ ಪಯಣಿಸಿದಂಥ ಅನುಭವ. ಅದರಲ್ಲೂ ಮದುವೆಯಾಗಿ ಮಧುಚಂದ್ರಕ್ಕೆ ಅಂತೇನಾದರೂ ನೀಲಗಿರಿ ಬೆಟ್ಟಸಾಲುಗಳನ್ನು ಹೊಕ್ಕಿರೋ  ಮಾಧುರ್ಯತೆ ಅನುಭವಿಸಿದವರಿಗೇ ಗೊತ್ತು. ಈ ಬೆಟ್ಟಗಳ ನಡುವೆ ದಿನವಿಡೀ ರೈಲು ಸಂಚಾರವಿರು ತ್ತದೆ. ಅದರಲ್ಲಿ ಹೋಗಲೆಂದೇ ಪ್ರವಾಸಿಗರು ಟಿಕೆಟ್ ಕಾಯ್ದಿರಿಸುತ್ತಾರೆ. ಈ ಮಾರ್ಗ ನವದಂಪತಿಗಳಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಇಲ್ಲಿ ಸಂಚರಿಸ ಲೆಂದೇ ಭಾರತೀಯ ರೈಲ್ವೇ ನಿಗಮವು ವಿಶೇಷ ರೈಲು ಸೌಕರ್ಯವನ್ನು ಕಲ್ಪಸಿದೆ.

ನವವಿವಾಹಿತರಿಗೆ ಸೂಕ್ತವೆನಿಸಿದ ಮಾರ್ಗದ ರೈಲು ಹೆಚ್ಚಿನ ಸಂದರ್ಭಗಳಲ್ಲಿ ಭರ್ತಿಯಾಗಿರುತ್ತದೆ. ಹೀಗಾಗಿ ಬ್ರಿಟನ್ ಮೂಲದ ಜೋಡಿ ಮೆಟ್ಟು ಪಳಯಂನಿಂದ ಉದಕಮಂಡಲ (ಊಟಿ)ಹೋಗುವ ಮಾರ್ಗದ ಒಂದು ರೈಲಿನ  ಟಿಕೆಟ್‌ಗಳನ್ನು ಖರೀದಿಸಿ ವಿನೂತನವಾಗಿ ತಮ್ಮ ಮಧುಚಂದ್ರದ ಪ್ರಯಾಣವನ್ನು ಅನುಭವಿಸಿದೆ. ಮೆಟ್ಟುಪಳಯಂನಿಂದ ಊಟಿಗೆ 46 ಕಿ.ಮೀ. ರೈಲು ಮರ್ಗ. ಸುಮಾರು 5.00 ಗಂಟೆಗಳ ಪ್ರಯಾಣ. ಮಾರ್ಗ ಮಧ್ಯೆ ಏಳು ನಿಲ್ದಾಣಗಳು ಬರುತ್ತವೆ. ಇಲ್ಲಿ ಓಡಾಡುವುದು ಪುಟಾಣಿ ರೈಲು. (ಹಿಂದಿಯ ‘ಛಯ್ಯ ಛಯ್ಯ ಛಯ್ಯಾ.. ಛಯ್ಯಾ.. ಹಾಡನ್ನು ನೆನಪಿಸಿಕೊಳ್ಳಿ.) ನಿಧಾನವಾಗಿ ಗಿರಿ ಶಿಖರದ ಮಧ್ಯೆ ಆರಾಮವಾಗಿ ಸಂಚರಿಸುವ ಈ ರೈಲಿನಲ್ಲಿ ಕುಳಿತು ಪ್ರಕೃತಿ ಸೌಂದರ್ಯ ಸವಿಯು ವುದು ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿಯೇ  ಗ್ರಹಾಮ್ ವಿಲಿಯಂ ಲೈನ್ (30) ಹಾಗೂ ಸಿಲ್ವಿಯಾ ಪ್ಲಸಿಕ್ (27) ಜೋಡಿ ರೈಲಿನ ಅಷ್ಟೂ ಟಿಕೆಟ್‌ಗಳನ್ನು ಖರೀದಿಸಿ, ಇಡೀ ರೈಲಿನಲ್ಲಿ ತಾವಿಬ್ಬರೇ ಪ್ರಯಾಣಿಸಿ ಮಧುಚಂದ್ರದ ಸವಿಯನ್ನು ಉಂಡಿದ್ದಾರೆ.

ಭಾರತೀಯ ರೈಲ್ವೆ ನಿಗಮದ ವೆಬ್‌ಸೈಟ್‌ನಲ್ಲಿ ಮೂರು ಲಕ್ಷ ಕೊಟ್ಟು ಎಲ್ಲಾ ಟಿಕೆಟ್‌ಗಳನ್ನು ಕಾಯ್ದಿರಿಸಿದ ಜೋಡಿಗೆ ಮೆಟ್ಟುಪಳಯಂ ಹಾಗೂ ಕಣ್ಣೂರು ರೈಲ್ವೇ ನಿಲ್ದಾಣದ ಅಧಿಕಾರಿಗಳು ಹೃದಯಸ್ಪರ್ಶಿ ಸ್ವಾಗತ ಕೋರಿದ್ದಾರೆ. ಇದಪ್ಪಾ ಹನಿ ಜತೆ ಮೂನ್‌ನಲ್ಲಿ ಓಡಾಡಿಕೊಂಡು ಬರೋದು ಅಂದ್ರೆ! ಇಡೀ ರೈಲಿನಲ್ಲಿ  ಇಬ್ಬರೇ ಸುಮಾರು 5 ಗಂಟೆಗಳ ಕಾಲ ಹರಣ ಮಾಡಿ ಮಧುಚಂದ್ರದ ಸವಿ ಉಣ್ಣೋದು ಎಂಥ ಅದ್ಭುತ ಆಲೋಚನೆ ಅಲ್ವಾ..?

ಇಂಥವರಿಗಾಗಿಯೇ ಗುಡ್ಡಗಾಡು ಪ್ರವಾ ಸೋದ್ಯ ಅಭಿವೃದ್ಧಿಪಡಿಸಲು ರೈಲ್ವೇ ಇಲಾಖೆ ಮುಂದಾಗಿದೆ. ನೀಲಗಿರಿ ಬೆಟ್ಟಗಳ ನಡುವಿನ ಟಾಯ್ ಟ್ರೈನ್‌ನಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ರೈಲ್ವೇ ಇಲಾಖೆಯು ಸೇಲಂ ವಿಭಾಗಕ್ಕೆ 120 ಜನ ಕುಳಿತು ಪ್ರಯಾಣಿಸುವ ವಿಶೇಷ ರೈಲೊಂದನ್ನು ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close