ಬೋಪಣ್ಣ ಜೋಡಿಗೆ ಚೆನ್ನೈ ಪ್ರಶಸ್ತಿ

Posted In : ಕ್ರೀಡೆ

ಚೆನ್ನೈ:ರೋಹನ್ ಬೋಪಣ್ಣ ಹಾಗೂ ಜೀವನ್ ನೆಡುಂಚೆಯಿಯಾನ್ ಜೋಡಿ ಚೆನ್ನೈ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಫೈನಲ್‌ನಲ್ಲಿ ಅವರು ಮತ್ತೊಂದು ಭಾರತೀಯ ಜೋಡಿಯಾದ ಪುರುವ್ ರಾಜಾ ಹಾಗೂ ದಿವಿಜ್ ಶರಣ್ ಜೋಡಿಯನ್ನು 6-3, 6-4 ಅಂತರದಿಂದ ಮಣಿಸಿದರು.

ಮೊದಲ ಸೆಟ್‌ನಲ್ಲಿ ಉತ್ತಮ ಆರಂಭ ಪಡೆದ ರಾಜಾ ಹಾಗೂ ದಿವಿಜ್ ಜೋಡಿ ಬಳಿಕ ತಮ್ಮ ಆಟದ ಲಯ ಕಳೆದುಕೊಂಡರು. ಈ ವೇಳೆ ಉತ್ತಮ ಆಟವಾಡಿದ ಬೋಪಣ್ಣ ಜೋಡಿ ಮೊದಲ ಸೆಟ್ ಅನ್ನು 6-3 ಅಂತರದಿಂದ ವಶಪಡಿಸಿಕೊಂಡಿತು. ಎರಡನೇ ಸೆಟ್‌ನಲ್ಲಿ ಮತ್ತೆ ಲಯಕ್ಕೆ ಮರಳಿದಂತೆ ಆಡಿದ ರಾಜಾ-ದಿವಿಜ್ ಜೋಡಿ ಆರಂಭದಲ್ಲಿ ಬೋಪಣ್ಣ ಜೋಡಿಗೆ ತಕ್ಕ ಪ್ರತಿರೋಧ ತೋರಿದರು. ಆದರೆ ಅಂತಿಮ ಹಂತದಲ್ಲಿ ಅನುಭವದ ಆಟವಾಡಿದ ಬೋಪಣ್ಣ 6-4 ಅಂತರದಿಂದ ಸೆಟ್ ಜಯಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

Leave a Reply

Your email address will not be published. Required fields are marked *

nineteen − 16 =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top