About Us Advertise with us Be a Reporter E-Paper

ಯಾತ್ರಾಯಾತ್ರಾ panel2

ವಾಷಿಂಗ್‌ಟ್ನ್ ಡಿಸಿಯ ಬಟಾನಿಕಲ್ ಗಾರ್ಡನ್

ಬಿ.ಪಿ.ಶಿವಮೂರ್ತಿ

ಮೆರಿಕದ ವಾಷಿಂಗ್ಟನ್ ಡಿಸಿಯ ಅನೇಕ ಪ್ರೇಕ್ಷಣೀಯ ಸ್ಥಳಗಳ ಪೈಕಿ ಅತ್ಯಂತ ಮನ ಸೆಳೆಯುವ ಸ್ಥಳವೆಂದರೆ ರಾಷ್ಟ್ರೀಯ ಬಟಾನಿಕಲ್ ಗಾರ್ಡನ್. ಪ್ರಪಂಚದಲ್ಲಿರುವ ವಿವಿಧ ಬಗೆಯ ಸುಮಾರು 12000 ಪ್ರಭೇದಗಳ 60ಸಾವಿರ ಸಸ್ಯಗಳು ಹಾಗೂ ಸುಂದರ ಹೂ ಗಿಡಗಳಿರುವ ಈ ಉದ್ಯಾನವನ್ನು ಬಿಟ್ಟು ಹೊರ ಬರಲು ಮನಸ್ಸೇ ಅರಳಿ ನಿಂತಿರುವ ಸಾವಿರಾರು ಬಣ್ಣಬಣ್ಣದ ಮನ ಮೋಹಕ ಹೂಗಳನ್ನು ಎಷ್ಟು ನೋಡಿದರೂ ಸಾಲದೆನಿಸುತ್ತದೆ. ಅವು ಗಳನ್ನೆಲ್ಲ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಓರಣವಾಗಿ ಬೆಳಸಿದ್ದಾರೆ. ಪ್ರಪಂಚದಲ್ಲಿರುವ ಆದಷ್ಟೂ ಎಲ್ಲ ರೀತಿಯ ಜೀವಂತ ಸಸ್ಯಗಳ ಮಾದರಿಗಳನ್ನೂ ಇಲ್ಲಿ ಸಂಗ್ರಹಿಸಿ, ಕಾಪಾಡುವ, ಅಧ್ಯಯನ ಮಾಡುವ ಮತ್ತು ಪ್ರದರ್ಶಿಸಲು ಬೆಳಸಿದ್ದಾರೆ. ಜಗತ್ತಿನ ಯಾವುದೇ ಸ್ಥಳದಲ್ಲಿ ಹೊಸ ಸಸ್ಯ ಕಂಡುಬಂದರೂ ಅದನ್ನು ಕೊಂಡೋ ಅಥವಾ ವಿನಿಮಯ ವಿಧಾನದಲ್ಲೋ ಇಲ್ಲಿಗೆ ತಂದು ಬೆಳಸುತ್ತಾರಂತೆ. ಸಸ್ಯ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಇದೊಂದು ಸಸ್ಯಗಳ ಜೀವಂತ ವಿಶ್ವಕೋಶ.

ಗಾಜಿನ ಸಸ್ಯ ಸಂರಕ್ಷಣಾಲಯ

ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟೋಲ್ ಭವನದ ಮುಂದೆ ಎಡಕ್ಕೆ ಸ್ವಲ್ಪ ಮುಂದೆ ಹೋದರೆ, ಗಾರ್ಫೀಲ್‌ಡ್ ವೃತ್ತದ ಬಳಿ ಈ ಉದ್ಯನವನವಿದೆ. ಇದಕ್ಕೆ ಪ್ರವೇಶ ಉಚಿತ. ಸೂಕ್ಷ್ಮ ಪ್ರಕೃತಿಯ ಸಸ್ಯಗಳನ್ನು ಬೆಳೆಸಲು ಹಾಗೂ ಕಾಪಾಡಲು ಒಂದು ಬೃಹದಾಕಾರದ 93ಅಡಿ ಎತ್ತರದ ಗಾಜಿನ ಮನೆಯನ್ನೂ ಸಹ ಈ ಬಟಾನಿಕಲ್ ಗಾರ್ಡನ್‌ನಲ್ಲಿ ನಿರ್ಮಿಸಿದ್ದಾರೆ. ಈ ಗಾಜಿನ ಮನೆ ಸಂಪೂರ್ಣ ಹವಾನಿಯಂತ್ರಿತ. ವಿವಿಧ ರೀತಿಯ ಬೆಳೆಯಲು ಮತ್ತು ಬದುಕಲು ಬೇಕಾದ ಉಷ್ಣತೆ ಮತ್ತು ಹವೆಯನ್ನು ಗಣಕ ಯಂತ್ರದ ಸಹಾಯದಿಂದ ನಿಯಂತ್ರಿಸುತ್ತಾರೆ. ಎಲ್ಲ ಸಸ್ಯಗಳ ಪ್ರಭೇದ ಮತ್ತು ಗುಣವಿಶೇಷಗಳನ್ನು ಗಣಕಯಂತ್ರದಲ್ಲಿ ಸಂಗ್ರಹಿಸಿದ್ದಾರೆ.

ಸಸ್ಯಗಳ ಮಾದರಿಗಳು

ಬಟಾನಿಕಲ್ ಗಾರ್ಡನ್ನಿನಲ್ಲಿರುವ ಸಸ್ಯಗಳ ಮಾದರಿಗಳೆಂದರೆ, ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು. ಮರುಭೂಮಿ ಸಸ್ಯಗಳು, ಅಮೆರಿಕ ಮತ್ತು ಮೆಕ್ಸಿಕೊ ದೇಶದ ಸಸ್ಯಗಳು, ಹವಾಯಿ ಪೆಸಿಫಿಕ್ ಸಸ್ಯಗಳು, ಟ್ರೋಪಿಕಲ್ ಸಸ್ಯಗಳು, ವಿವಿಧ ಬಗೆಯ ಆರ್ಕಿಡ್‌ಗಳು, ಅಪರೂಪದ ಮತ್ತು ವಿನಾಶದ ಅಪಾಯದಲ್ಲಿರುವ ಮೊದಲಾದವು.

Tags

Related Articles

Leave a Reply

Your email address will not be published. Required fields are marked *

Language
Close