About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಎದೆ ಹಾಲು ಕುಡಿಯುವ ಮಕ್ಕಳು ರೈಟ್‌, ಬಾಟೆಲ್‌ ಹಾಲು ಕುಡಿಯುವ ಮಕ್ಕಳು ಲೆಫ್ಟ್‌ ಹ್ಯಾಂಡೆಡ್‌…!

ವಾಷಿಂಗ್‌ಟನ್‌ ವಿಶ್ವವಿದ್ಯಾಲಯದ ಸಂಶೋಧಕರ ಸಂಶೋಧನೆ

ವಾಷಿಂಗ್‌ಟನ್‌: ತಾಯಿಯ ಎದೆ ಹಾಲು ಕುಡಿಯುವ ಮಕ್ಕಳು ಸಾಮಾನ್ಯವಾಗಿ ರೈಟ್‌ ಹ್ಯಾಂಡೆಡ್‌ ಆಗಿರುತ್ತಾರೆ. ಹಾಗೆಯೇ ಬಾಟೆಲ್‌ ಹಾಲು ಕುಡಿಯುವ ಮಕ್ಕಳು ಲೆಫ್ಟ್‌ ಹ್ಯಾಂಡೆಡ್‌ ಆಗಿರುತ್ತಾರೆ ಎಂದು ಸಂಶೋಧನೆಯೊಂದರಿಂದ ತಿಳಿದು ಬಂದಿದೆ.

ವಾಷಿಂಗ್‌ಟನ್‌ ವಿಶ್ವವಿದ್ಯಾಲಯದ ಸಂಶೋಧಕರು ಕೈಗೊಂಡ ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿದೆ. Asymmetries of Body, Brine, and Cognition ಎಂಬ ವಿಷಯದ ಮೇಲೆ ಅಧ್ಯಯನದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಸಂಶೋಧಕರು 60,000 ತಾಯಿ-ಮಗುವಿನ ಮೇಲೆ ಅಧ್ಯಯನ ನಡೆಸಿದ್ದಾರೆ.

ಮಗುವಿಗೆ ಕಡಿಮೆ ಎಂದರೆ ಆರರಿಂದ ಒಂಬತ್ತು ತಿಂಗಳು ಎದೆ ಹಾಲುಣಿಸಬೇಕು. ಇಲ್ಲದಿದ್ದರೆ ಮಗುವಿನ ಮೇಲೆ ನೇರ ಪರಿಣಾಮ ಬೀಳಲಿದೆ ಎಂದು ಸಂಶೋಧಕಿ ಫಿಲಿಪ್ಪೆ ಹುಜೋಲ್‌ ಹೇಳಿದ್ದಾರೆ. ಎದೆ ಹಾಲು ಕುಡಿಯುವ ಮಕ್ಕಳು ರೈಟ್‌ ಹ್ಯಾಂಡೆಡ್‌, ಬಾಟೆಲ್‌ ಹಾಲು ಕುಡಿಯುವ ಮಕ್ಕಳು ಲೆಫ್ಟ್‌ ಹ್ಯಾಂಡೆಡ್‌ ಆಗಿರುತ್ತಾರೆ ಎಂದು ನಮ್ಮ ಅಧ್ಯಯನದಿಂದ ತಿಳಿದು ಬಂದಿದೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close