About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ: ಆಸಿಸ್ ವಿರುದ್ಧ ಟೀಂಇಂಡಿಯಾಗೆ ಐತಿಹಾಸಿಕ ಗೆಲುವು

ಮೆಲ್ಬೋರ್ನ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಬಗ್ಗು ಬಡಿದಿದ್ದು, ಕಾಂಗರೂಗಳ ವಿರುದ್ಧ 137 ರನ್ ಗಳ ಭರ್ಜರಿ ಜಯಭೇರಿ ಸಾಧಿಸಿದೆ.

ಈ ಮೂಲಕ ಭಾರತ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, 37 ವರ್ಷಗಳ ನಂತರ ಮೆಲ್ಬೋರ್ನ್​ ಅಂಗಳದಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಗೆಲುವಿಗೆ 399 ರನ್​ಗಳ ಸವಾಲಿನ ಮೊತ್ತ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ ತಂಡ 89.3 ಓವರ್​ಗಳಲ್ಲಿ 261ರನ್​ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ ಆಸಿಸ್​ ವಿರುದ್ಧ ಭಾರತ 137 ರನ್​ಗಳ ಭಾರಿ ಅಂತರದ ಗೆಲುವು ದಾಖಲಿಸಿದೆ. ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಸಾಧಿಸಿದೆ.

ನಿನ್ನೆ 4ನೇ ದಿನದಾಟ ಮುಕ್ತಾಯಕ್ಕೆ 258 ರನ್ ಗಳಿಗೆ  8 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್ ಆಸರೆಯಾಗಿ ನಿಂತಿದ್ದರು. 63 ರನ್ ಗಳಿಸಿದ ಅವರು ನಿಜಕ್ಕೂ ಆಸಿಸ್ ತಂಡದ ಸೋಲನ್ನು 5ನೇ ದಿನಕ್ಕೆ ಮುಂದೂಡಿದ್ದರು. ಆದರೆ ಇಂದು ಆಸ್ಟ್ರೇಲಿಯಾ ತಂಡ ಕೇವಲ 3 ರನ್ ಸೇರುಸುವಷ್ಟರಲ್ಲಿ ಬಾಕಿ ಉಳಿದಿದ್ದ 2 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾಗೆ ಶರಣಾಗಿದೆ.

ಈ ಪಂದ್ಯಕ್ಕೂ ಮೊದಲು ಮೆಲ್ಬೋರ್ನ್​ನಲ್ಲಿ 12 ಪಂದ್ಯಗಳನ್ನ ಆಡಿದ್ದ, ಟೀಮ್ ಇಂಡಿಯಾ ಕೇವಲ 2 ಬಾರಿ ಮಾತ್ರ ಜಯ ಕಂಡಿತ್ತು. 1981 ರಲ್ಲಿ ಬಾರಿ ಭಾರತ ಇಲ್ಲಿ ಕೊನೆಯ ಬಾರಿ ಗೆಲುವಿನ ನಗೆ ಬೀರಿತ್ತು. ಅದಾದ ನಂತರ 7 ಟೆಸ್ಟ್​​ಗಳನ್ನಾಡಿದ್ರು ಮತ್ತೆ ಜಯ ಗಳಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ ಕಾಂಗರೂ ಪಡೆಯನ್ನು ಬಗ್ಗುಬಡಿದಿದೆ.

Tags

Related Articles

Leave a Reply

Your email address will not be published. Required fields are marked *

Language
Close