About Us Advertise with us Be a Reporter E-Paper

Breaking Newsವಿದೇಶ
Trending

ವ್ಹೀಲ್ ಚೇರ್ ಬಿಟ್ಟು ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಬಾಲಕ..!

ಯುಎಸ್‍ಎ: ವ್ಹೀಲ್ ಚೇರ್ ನಲ್ಲಿ ಕುಳಿತಿದ್ದರೂ ರಾಷ್ಟ್ರಗೀತೆ ಮೊಳಗುವಾಗ 10 ವರ್ಷದ ಬಾಲಕ ಎದ್ದುನಿಂತು ಗೌರವಿಸಿದ ಹೃದಯಸ್ಪರ್ಶಿ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಪುಟ್ನಮ್ ಕೌಂಟಿ ನಗರದ ಟೆನ್ನೆಸ್ಸಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುವ 10ರ ಬಾಲಕ  ಅವೆರಿ  ಪ್ರೈಸ್ ಗೆ ನಡೆಯಲು ಸಾಧ್ಯವಿಲ್ಲ. ಈತ ವ್ಹೀಲ್ ಚೇರ್ ಮುಖಾಂತರವಾಗಿಯೇ ಸಂಚರಿಸುತ್ತಾನೆ. ಆದ್ರೆ ರಾಷ್ಟ್ರಗೀತೆ ಮೊಳಗುವಾಗ ವ್ಹೀಲ್ ಚೇರ್ ಬಿಟ್ಟು ಯಾವುದೇ ಆಧಾರವಿಲ್ಲದೆ ಎದ್ದು ನಿಂತು ಗೌರವ ಸಲ್ಲಿಸಿದ್ದಾನೆ.

ಬಾಲಕನ ಈ ದೇಶಪ್ರೇಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಗನ ಈ ನಿರ್ಧಾರಕ್ಕೆ ಪೋಷಕರು ಕೂಡ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close