ಬಾಲಕನ ಅಪಹರಣ: ಸಿಕ್ಕಿಬಿದ್ದ ಅಪಹರಣಕಾರರು

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ನಗರದ ಕೆ.ಆರ್.ಪುರದಲ್ಲಿ ಉದ್ಯಮಿಯ ಪುತ್ರನನ್ನು ಅಪಹರಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು, ಬಾಲಕನನ್ನು ರಕ್ಷಿಸುವಲ್ಲಿ ಯಶ ಪಡೆದಿದ್ದಾರೆ.
ಜಗದೀಶ್, ಅನಿಲ್, ಸುಬ್ರಮಣಿ ಹಾಗೂ ವೆಂಕಟೇಶ್ ಬಂಧಿತರು. ಮತ್ತೋರ್ವ ಆರೋಪಿ (ನರೇಶ್)ಗಾಗಿ ಶೋಧ ಕಾರ್ಯ ನಡೆದಿದೆ.  ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ. ಕೆ.ಆರ್. ಪುರಂನ ಅಯ್ಯಪ್ಪ ನಗರದ ಬಳಿ ಶನಿವಾರ ಬೆಳಗ್ಗೆ ವಿನಾಯಕ ಟಿಂಬರ್ ಮರ್ಚೆಂಟ್ ಮಾಲೀಕ ಅರೇಶ್ ಪುತ್ರ ಮಯಾಂಕ್‌ನನ್ನು ಅಪಹರಿಸಲಾಗಿತ್ತು.

ಬಾಲಕ ತನ್ನ ಅಜ್ಜನ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆ ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು, ಬಳಿಕ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದರು. ಆಂಧ್ರ ಪ್ರದೇಶದ ಪಲಮನೇರಿಯಲ್ಲಿನ ಪಂಜಣಿಯಲ್ಲಿ ಬಾಲಕನನ್ನು ರಕ್ಷಿಸಲಾಗಿದೆ.

ಆರೋಪಿಗಳಾದ ಜಗದೀಶ್‌‌ ಹಾಗು ನರೇಶ್ ಉದ್ಯಮಿ ಅರೇಶ್‌ ಬಳಿ ಕೆಲಸ ಮಾಡಿಕೊಂಡಿದ್ದರು. ಅರೇಶ್ ಬಳಿ ಹಣವಿರುವ ಬಗ್ಗೆ ಮಾಹಿತಿ ಪಡೆದ ಆರೋಪಿಗಳು ಹಣಕ್ಕೆ ಹೊಂಚು ಹಾಕಿ, ಬಾಲಕನ ಅಪಹರಣಕ್ಕೆ ಸಂಚು ರೂಪಿಸಿದರು. ಅಪಹರಿಸಿದ ಬಳಿಕ ಅರೇಶ್‌ಗೆ ಫೋನಾಯಿಸಿ, ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ನಿಮ್ಮ ಪುತ್ರನ ಶವವನ್ನು ಪಾರ್ಸೆಲ್‌ ‌ಮಾಡಿ, ಕಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಬಾಲಕನ ದೊಡ್ಡಪ್ಪ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಾಲ್ಕು ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಘಟನೆ ನಡೆದ 12 ಗಂಟೆಗಳಲ್ಲೇ ಬಾಲಕನನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

five − three =

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top