About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬೈಕ್‌ಗೆ ಅಯ್ಯಪ್ಪ ಭಕ್ತರ ಕಾರ್‌ ಡಿಕ್ಕಿ: ಬಾಲಕ ಸಾವು, ಮೂವರ ಸ್ಥಿತಿ ಗಂಭೀರ

ಚಾಮರಾಜನಗರ: ಶಬರಿಮಲೆ ಯಾತ್ರಿಗಳ ಕಾರು ಮತ್ತು 2 ಬೈಕ್ ಗಳಿಗೆ ಡಿಕ್ಕಿಯಾಗಿ ಬಾಲಕ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ ಬಳಿ ನಡೆದಿದೆ.

ದೊಡ್ಡಹುಂಡಿ ಗ್ರಾಮದ ಮದನ್ ಕುರ್ಮಾ( 7) ಮೃತ ಬಾಲಕ. ವೇಗ ಮತ್ತು ಅಜಾಗರೂಕತೆಯಿಂದ ಅಯ್ಯಪ್ಪ ಮಾಲಾಧಾರಿಗಳ ಇನ್ನೋವಾ ಕಾರು 2 ಬೈಕ್ ಗಳಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ ಎನ್ನಲಾಗಿದೆ.

ಗಾಯಗೊಂಡವರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ರವಾನಿಸಲಾಗಿದ್ದು, ಇವರು ಬೆಂಗಳೂರು ಮೂಲದ ಅಯ್ಯಪ್ಪ ಭಕ್ತರು ಎಂದು ತಿಳಿದುಬಂದಿದೆ. ಬೇಗೂರು ಪೊಲೀಸರು ಪ್ರಕರಣ ದಾಖಲಿಸಿ, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close