About Us Advertise with us Be a Reporter E-Paper

Breaking Newsದೇಶಪ್ರಚಲಿತ

ಬಾಲಕಿ ಬಾಯಲ್ಲಿ ಪಾಟಕಿ ಇಟ್ಟು ಸಿಡಿಸಿದ ಬಾಲಕ

ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿ ಮೂರು ವರ್ಷದ ಬಾಲಕಿ ಬಾಯಿ ಒಳಗೆ ಪಟಾಕಿ ಸಿಡಿಸುವ ಮೂಲಕ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ವರದಿಗಳ ಪ್ರಕಾರ ಬಾಲಕಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಲಕಿಯು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯ ಬಾಲಕ ಹರ್ಪಾಲ್ ಎಂಬಾತ ಆಕೆಯ ಬಳಿ ಬಂದು ಕೈಯಲ್ಲಿದ್ದ ಪಟಾಕಿಯನ್ನು ಆಕೆಯ ಬಾಯಲ್ಲಿ ಇಟ್ಟು ಬೆಂಕಿ ಹಚ್ಚಿದ್ದಾನೆ. ಆ ಪಟಾಕಿ ಸಿಡಿತಕ್ಕೆ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ.

ಅಷ್ಟೇ ಅಲ್ಲದೇ ಬಾಲಕಿಯ ಬಾಯಿ ಹಾಗೂ ಮುಖಕ್ಕೆ ಹಾನಿಯಾಗಿದ್ದು, ಬರೋಬ್ಬರಿ 50 ಹೊಲಿಗೆಗಳನ್ನು ಹಾಕಲಾಗಿದೆ ಎಂಬ ವರದಿಗಳು ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಹರ್ಪಾಲ್ ಸದ್ಯ ತಲೆಮರಿಸಿಕೊಂಡಿದ್ದು, ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಯಾವ ಉದ್ದೇಶ ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close