ವೈದ್ಯರಿಗಿಂತ ಬ್ರಾಹ್ಮಣರೇ ಪುಣ್ಯವಂತರು

Posted In : ಸಂಗಮ, ಸಂಪುಟ

ಇತ್ತೀಚಿನ ಸಾರ್ವಜನಿಕ ಮತ್ತು ಮಾಧ್ಯಮದಲ್ಲಿನ ಬೆಳವಣಿಗೆಗಳನ್ನು ಗಮನಿಸಿದಾಗ, ವೈದ್ಯರಿಗಿಂತ ಬ್ರಾಹ್ಮಣರು ಎಷ್ಟೋ ಪಾಲು ಹೆಚ್ಚು ಭಾಗ್ಯವಂತರು ಎಂದನ್ನಿಸುತ್ತದೆ. ಸಮಾಜದ ಎ ಸಮಸ್ಯೆಗಳಿಗೆ, ಪುರೋಹಿತ ಶಾಹಿಯೇ ಕಾರಣ ಎಂದು ಪ್ರತಿಪಾದಿಸುವ ಮತ್ತು ನಂಬುವ ವರ್ಗ ದೊಡ್ಡದಿದೆ. ಇದಕ್ಕೆ ಆಡಳಿತ ವರ್ಗದ ಬೆಂಬಲ ಇರುವುದರಿಂದ, ಯಾರು ಬೇಕಾದರೂ ಬ್ರಾಹ್ಮಣರಿಗೆ ಧಕ್ಕೆ ತರುವಂತೆ ಮಾತನಾಡಿ, ಸುಲಭದಲ್ಲಿ ಅರಗಿಸಿಕೊಳ್ಳಬಹುದು. ಅಪರಾಧಿಗಳಿಗೆ ಶಿಕ್ಷೆ ಅಥವಾ ಪ್ರತಿಭಟನೆ ಇರಲಿ, ಹೇಳಿಕೆ ಕೊಟ್ಟವರ ವಿರುದ್ಧ ಸಣ್ಣ ಖಂಡನೆಯ ಮಾತುಗಳು ಕೂಡ ಕೇಳಿಬರುವುದಿಲ್ಲ .

ಇದೆ ಮಾದರಿಯಲ್ಲಿ ಇಂದಿನ ಎ ಆರೋಗ್ಯ ಕ್ಷೇತ್ರದ ಸಮಸ್ಯೆ ಗಳಿಗೆಲ್ಲ ಆಧುನಿಕ ವೈದ್ಯರೇ ಕಾರಣ ಎಂದು , ಜಾತ್ಯತೀತವಾಗಿ ಅಷ್ಟೇ ಅಲ್ಲ ಧರ್ಮಾತೀತ ಆರೋಪ ಮಾಡುವ ಇನ್ನೂ ದೊಡ್ಡದಿದೆ . ಸಾಮಾನ್ಯ ಜನರು ಒಬ್ಬ ವ್ಯಕ್ತಿಯ ಮೇಲೆ ಹ ಮಾಡಿದರೆ, ಕಾನೂನಿನ ಶಿಕ್ಷೆ ತಪ್ಪಿಸಿಕೊಳ್ಳುವುದಕ್ಕೆ ಆಗದಿರಬಹುದು. ಆದರೆ ಆ ವ್ಯಕ್ತಿ ವೈದ್ಯನಾಗಿದ್ದರೆ, ನಿಮಗೆ ಖಂಡಿತ ಶಿಕ್ಷೆಯಾಗುವುದಿಲ್ಲ . ಹ ಮಾಡಿದವರ ಪರವಾಗಿ ಜನರ, ಜನನಾಯಕರ ಮತ್ತು ಮಾಧ್ಯಮದವರ ಬೆಂಬಲ ನಿರಾಯಾಸವಾಗಿ ಹರಿದು ಬರುತ್ತದೆ. ‘ನಾನು ಮಾಡಬೇಕು ಅಂದು ಕೊಂಡಿರುವ ಕೆಲಸವನ್ನು ನೀನು ಮಾಡಿದೆ ’ಎಂದು ಬೆನ್ನು ತಟ್ಟುತ್ತಾರೆ.ಇದಕ್ಕೆ ತಾಜಾ ಉದಾಹರಣೆ, ಒಬ್ಬ ಸಂಸದರು ವಿಮಾನಯಾನ ಸಿಬ್ಬಂದಿಯ ಮೇಲೆ ಹ ಮಾಡಿದ್ದಕ್ಕೆ , ಸಂಸತ್ತಿನಲ್ಲಿ ಕ್ಷಮೆ ಕೇಳುವವರೆಗೂ ವಿಷಯ ಹೋಗಿತ್ತು. ಆದರೆ ವೈದ್ಯರ ಮೇಲೆ ಹ ಮಾಡಿದ ಮತ್ತೊಬ್ಬ ಸಂಸದರಿಗೆ, ಮಂತ್ರಿ ಪದವಿ ಕೊಡುವ ಮೂಲಕ ಉತ್ತೇಜನ ನೀಡಲಾಯಿತು .

ಇಂದು ಜನರಿಗೆ ವೈದ್ಯರ ಮೇಲಿನ ಅಸಹನೆ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪ್ರಸಿದ್ಧ ಉದಾಹರಣೆಯನ್ನು , ಸ್ವಲ್ಪ ಬದಲಾಯಿಸಿ ಹೇಳಬೇಕೆಂದರೆ,ಹೀಗೆ ಹೇಳಬಹುದು. ದಾರಿಯಲ್ಲಿ ಎದುರಾಗಿ ಹಾವು, ಬ್ರಾಹ್ಮಣರು ಮತ್ತು ವೈದ್ಯರು ಬರುತ್ತಿದ್ದರೆ, ಮೊದಲು ವೈದ್ಯರ ಮೇಲೆ, ಮನದಣಿಯುವವರೆಗೂ ಹ ಮಾಡಿ. ನಿಮಗೆ ಇನ್ನೂ ಸಮಾಧಾನ ವಾಗದಿದ್ದರೆ ಬ್ರಾಹ್ಮಣರ ಮೇಲೆ ಹ ಮಾಡಿ.ಅಷ್ಟರೊಳಗೆ ಹಾವು ತಪ್ಪಿಸಿಕೊಂಡರೆ ಚಿಂತೆಯಿಲ್ಲ. ಈ ಉದಾಹರಣೆ ಓದಿದ ಮೇಲೆ ನಿಮಗೂ ಬ್ರಾಹ್ಮಣರು ವೈದ್ಯರಿಗಿಂತ ಭಾಗ್ಯವಂತರು ಎಂದು ಅನ್ನಿಸದೇ ಇರದು. ಅಕಸ್ಮಾತ್ ವೈದ್ಯರೇನಾದರೂ ಬ್ರಾಹ್ಮಣರಾಗಿದ್ದರೆ, ಅವರ ಪರಿಸ್ಥಿತಿ ಊಹಿಸಲಸಾದ್ಯ .

ನನಗೆ ಈ ಭಾವನೆ ಬರಲು ಮೊದಲ ಕಾರಣ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣ ಸೇರಿದಂತೆ, ಮಾಧ್ಯಮ ಮತ್ತು ಆಡಳಿತ ವರ್ಗದವರಲ್ಲಿ ವ್ಯಕ್ತವಾದ ‘ವೈದ್ಯ ವಿರೋಧಿ ’ ನಡವಳಿಕೆಯಿಂದ . ನನ್ನ ನೆಚ್ಚಿನ ಸಾಹಿತಿಗಳೊಬ್ಬರು ,ಖಾಸಗಿ ಆಸ್ಪತ್ರೆಗಳ ಬಂದ್ ದಿನ ಟ್ವೀಟ್ ಒಂದನ್ನು ಮಾಡಿದ್ದರು ಅದರಲ್ಲಿ ‘ಇಂದು ಎಲ್ಲ ಖಾಸಗಿ ಆಸ್ಪತ್ರೆಗಳು ಮುಚ್ಚಿರುವುದರಿಂದ,ಸಾವು ನೋವುಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವ ಸಂಭವವಿದೆ !’ ಎಂದು ಬರೆದುಕೊಂಡಿದ್ದರು . ಅದಕ್ಕೆ ತದ್ವಿರುದ್ಧವಾಗಿ ದೃಶ್ಯ ಮಾಧ್ಯಮದವರು‘ ಮುಷ್ಕರದಿಂದ ರಾಜ್ಯಾದಂತ ಸಾವು ನೋವುಗಳಾಗುತ್ತಿವೆ. ಇದಕ್ಕೆ ಹೃದಯಹೀನ ಖಾಸಗಿ ವೈದ್ಯರೇ ಹೊಣೆ ’ ಎಂದು ಕೂಗುತ್ತಿದ್ದರು. ಈ ಎರಡರಲ್ಲಿ ಯಾವುದು ಸರಿ ಎಂದು ತಿಳಿಯಲಿಲ್ಲ .

ದೃಶ್ಯ ಮಾಧ್ಯಮ ಚರ್ಚೆಗಳ ತಲೆಬರಹ ನೋಡಿದ ಕೂಡಲೇ ಹೇಳಬಹುದು , ಚರ್ಚೆಯಿಂದ ನಿರೂಪಕರು ಯಾವ ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು. ‘ಸರಕಾರದ ಸರ್ಜರಿಗೆ ವೈದ್ಯರ ವಿರೋಧ; ಧನದಾಹಿಗಳಾದರಾ ಧನ್ವಂತ್ರಿಗಳು ’ ಎಂದು ತಲೆಬರಹ ನೋಡಿದ ಮೇಲೆ ಚರ್ಚೆ ಉದ್ದೇಶ ,ಕಾರ್ಯಕ್ರಮ ನೋಡುವುದಕ್ಕೆ ಮೊದಲೇ ಗೊತ್ತಾಗಿಬಿಡುತ್ತದೆ . ವಾಹಿನಿಯ ಚರ್ಚೆಯೊಂದರಲ್ಲಿ ಪತ್ರಕರ್ತರೊಬ್ಬರು ವೈದ್ಯರಿಗೆ ಸಿಟ್ಟಿನಿಂದ ಪ್ರಶ್ನೆ ಕೇಳುತ್ತಿದ್ದರು ‘ಒಂದೇ ಅಪರೇಷನ್‌ಗೆ ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ರೇಟು ಯ್ಯಾಕೆ ?’ ಅಂತ . ‘ಒಂದು ಪ್ಲೇಟ್ ಇಡ್ಲಿಗೆ ಇಂದಿರಾ ಕ್ಯಾಂಟಿನ್ ನಲ್ಲಿ ಐದು ರೂಪಾಯಿ ಯಾದರೆ , ಪಂಚತಾರಾ ಹೋಟೆಲಿನಲ್ಲಿ 500 ಯಾಕೆ ? ನಾನು ಹಾಕಿರುವ ಬಟ್ಟೆ 500, ನೀವು ಹಾಕಿರುವ ಬಟ್ಟೆ 5೦೦೦ ಯಾಕೆ ?’ ಎಂದು ತಿರುಗಿ ಪ್ರಶ್ನೆ ಮಾಡುವ ಬದಲು , ವೈದ್ಯರು ಸಮಾಧಾನದಿಂದ ವಿವರಿಸುತ್ತಿದ್ದರು. ಸಾರ್ವಜನಿಕ ಟಿವಿಯ ಹಿರಿಯ ಪತ್ರಕರ್ತರು ‘ವೈದ್ಯರೇ, ಇಷ್ಟೆ ಸಾವುಗಳ ನಡುವೆ, ನಿಮ್ಮ ಮುಷ್ಕರ ಯಶಸ್ವಿಯಾಗಿದೆ.ಈಗ ಸಂತೋಷವಾಯಿತಾ ? ’ ಎಂದು ವ್ಯಂಗ್ಯ ವಾಗಿ ಪ್ರಶ್ನೆ ಮಾಡುತಿದ್ದರೆ, ಅವರ ಮುಖದಲ್ಲಿ ಮುಷ್ಕರದಿಂದ ಅಂದಿನ ದಿನದ ಟಿ ಆರ್ ಪಿ ಹೆಚ್ಚಾಗಿರುವುದರ ಬಗೆಗಿನ ಸಂತೋಷ ಎದ್ದು ಕಾಣುತಿತ್ತು .

‘ಸರಕಾರ ಆರೋಗ್ಯ ಸ್ಕೀಮ್ ಹೆಸರಿನಲ್ಲಿ, ಕೋಟ್ಯಂತರ ಹಣವನ್ನು, ಖಾಸಗಿ ಆಸ್ಪತ್ರೆಗಳಿಗೆ ಕೊಡುವುದರ ಬದಲು, ಅದನ್ನೇ ಬಳಸಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ,ಸುಸಜ್ಜಿತ ಆಸ್ಪತ್ರೆ ಏಕೆ ನಿರ್ಮಿಸಬಾರದು ’ ಎಂಬ ಪತ್ರಕರ್ತರ ಪ್ರಶ್ನೆಗೆ , ರಾಜಕಾರಣಿಗಳು ತಬ್ಬಿಬ್ಬಾಗಿದ್ದರೆ , ಆಸ್ಪತ್ರೆ ನಡೆಸುವರಿಗೆ ಇದು ಮೂರ್ಖ ಪ್ರಶ್ನೆ ಎನಿಸಿದ್ದರೂ ಆಶ್ಚರ್ಯವಿಲ್ಲ . ಏಕೆಂದರೆ, ಮೊದಲ ಬಂಡವಾಳಕ್ಕಿಂತ, ದೀರ್ಘಕಾಲದಲ್ಲಿ ಹೆಚ್ಚಿನ ಖರ್ಚು ಆಸ್ಪತ್ರೆ ಬರುವುದು, ಸಿಬ್ಬಂದಿಗಳ ಸಂಬಳ ಮತ್ತು ದೈನಂದಿನ ನಿರ್ವಹಣೆಯಲ್ಲಿ ಎಂಬುದು ವಾಸ್ತವ ಸತ್ಯ.‘ನಾಗರಿಕರ ಆರೋಗ್ಯವನ್ನು ನಿರ್ಲಕ್ಷಿಸಿ ,ವೈದ್ಯರ ಮುಷ್ಕರ ಎಷ್ಟು ಸರಿ ?’ ಎಂಬ ಪ್ರಶ್ನೆಯನ್ನು ರಾಜಕಾರಣಿಗಳೂ ಸೇರಿದಂತೆ ಮಾಧ್ಯಮದಲ್ಲಿ ಪ್ರತಿಯೊಬ್ಬ ಪತ್ರಕರ್ತರೂ ಎತ್ತಿzರೆ . ಆದರೆ ನಮಗೆ ತಿಳಿದ ಮಟ್ಟಿಗೆ ನಾಗರಿಕರ ಆರೋಗ್ಯ ಮೂಲ ಭೂತ ಹಕ್ಕು ಮತ್ತು ಅದರ ಜವಾಬ್ದಾರಿ ಸರಕಾರದ್ದು . ಸಾರ್ವಜನಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ, ಖಾಸಗಿ ವೈದ್ಯರ ಹೆಗಲಿಗೆ ಬಂದಿದ್ದು ಯಾವಾಗ ಎಂದು ಗೊತ್ತಾಗಲಿಲ್ಲ. ಆರೋಗ್ಯದ ಹಕ್ಕು ಇರಲಿ, ಒಂದು ದಿನ ತುರ್ತು ಚಿಕಿತ್ಸೆಯನ್ನು ಕೊಡಲಾಗದ , ಸರಕಾರೀ ಯಂತ್ರದ ಬಗ್ಗೆ ಸಾಹಿತಿಗಳೂ ಸೇರಿದಂತೆ ಸಾರ್ವಜನಿಕರೂ ಕೂಡ ಧ್ವನಿ ಎತ್ತಲಿಲ್ಲ .

ಈ ಕಡೆ ಇಷ್ಟೆಲ್ಲ ಗಲಾಟೆ , ಸಾವು ನೋವು ಆಗುತಿದ್ದರೂ , ಗೋಕುಲಾಷ್ಟಮಿಗೂ , ಇಮಾಮ್ ಸಾಬಿಗೂ ಏನು ಸಂಬಂಧವಿಲ್ಲ ಎನ್ನುವ ಹಾಗೆ ಮಾನ್ಯ ‘ಸರಕಾರಿ’ ಆರೋಗ್ಯ ಸಚಿವರು , ಖಾಸಗಿ ಆಸ್ಪತ್ರೆಗಳ ಮುಷ್ಕರದ ಬಗ್ಗೆ ಮಾಹಿತಿಯೇ ಇ ಎಂದು ಹೇಳಿಬಿಟ್ಟರು. ಕೊನೇಪಕ್ಷ ಅಂದು ಸರಕಾರಿ ಆಸ್ಪತ್ರೆಗಳಿಗೆ ಜನರು ಸಾಗರೋಪಾದಿಯಲ್ಲಿ ಏಕೆ ಬರುತಿದ್ದಾರೆ ಎಂದು ತಿಳಿದುಕೊಂಡಿದ್ದರೆ ,ಆರೋಗ್ಯ ಸಚಿವರಿಗೆ ,ಮುಷ್ಕರದ ಮಾಹಿತಿ ಸಿಗುತಿತ್ತು . ಬಹುಷಃ ಅವರಿಗೆ ಅಂದು ಸರ್ಕಾರಿ ಆಸ್ಪತ್ರೆಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿಯೂ ಕೂಡ ಇದ್ದಂತಿಲ್ಲ .

ಈ ಸಂದರ್ಭದಲ್ಲಿ ಕೆಲವೇ ದಿನಗಳ ಮುಂಚೆ ‘ವೈದ್ಯರು , ಕ್ಷೌರಿಕರಿಗಿಂತ ಕಡೆ’ ಎಂಬ ಹೇಳಿಕೆ ಕೊಟ್ಟು, ನಂತರ ಸವಿತಾ ಸಮಾಜದವರ ಬಳಿ ಕ್ಷಮಾಪಣೆ ಕೇಳಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಅವರಿಗೆ ವೈದ್ಯರ ಬಳಿ ಕ್ಷಮಾಪಣೆ ಕೇಳುವ ಅವಶ್ಯ ಇದೆ ಎನಿಸಲಿಲ್ಲ . ಏಕೆಂದರೆ ಅವರಿಗೂ ಗೊತ್ತು , ವೈದ್ಯರನ್ನು ಹೀಯಾಳಿಸುವುದು ಕೂಡ ಒಂದು ಮತ ಗಳಿಸುವ ವಿಧಾನ ಎಂದು. ‘ವೈದ್ಯರು ಹಣದಾಸೆಗೆ ,ಅನವಶ್ಯಕವಾಗಿ ಸಿಸೇರಿಯನ್ ಮಾಡಿಸುತ್ತಿದ್ದಾರೆ ಎಂದು ಸದನದ ಹೊರಗೆ ಮತ್ತು ಒಳಗೆ ಹೀಯಾಳಿಸಿದ್ದ ಸಚಿವರಿಗೆ, ಕೆಲವೇ ದಿನಗಳ ಹಿಂದೆ ಮನೆಯ ಸದಸ್ಯರಿಗೆ, ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿದ್ದು ವಿಪರ್ಯಾಸ. ಆಗ ಸಚಿವರಿಗೆ ಸಿಸೇರಿಯನ್ ಬೇಡ, ನಾರ್ಮಲ್ ಡೆಲಿವರಿ ಮಾಡಿ ಎಂದು ಹೇಳುವ ಧೈರ್ಯ ಏಕೆ ಬರಲಿಲ್ಲವೋ ಏನೋ ?

ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ ರೋಗಿಗೆ ಹಾನಿಯಾದರೆ, ವೈದ್ಯರನ್ನು 3ವರ್ಷದ ತನಕ ಜೈಲಿಗೆ ಹಾಕುವ ಕಾನೂನು ತರಲು ಪ್ರಯತ್ನಿಸುತ್ತಿರುವ ಆರೋಗ್ಯ ಸಚಿವರ ಮನಸ್ಥಿತಿ ಆಘಾತಕಾರಿ. ಸಚಿವರಿಗೆ ಅಪಘಾತದಿಂದ ಉಂಟಾಗುವ ಹಾನಿಗೂ ,ಅಪರಾಧದಿಂದ ಉಂಟಾಗುವ ಹಾನಿಗೂ ಇರುವ ವ್ಯತ್ಯಾಸ ಬಗ್ಗೆ ಸಾಮಾನ್ಯ eನ ಇಲ್ಲವೋ ಅಥವಾ ವೋಟ್ ಬ್ಯಾಂಕ್ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಹಾಗಾದರೆ ಉದ್ದೇಶ ಪೂರ್ವಕವಾಗಿ ನಡೆಯುವ ಕೊಲೆಗೂ,ರಸ್ತೆ ಅಪಘಾತದಲ್ಲಿ ಆಗುವ ಆಕಸ್ಮಿಕ ಮರಣಕ್ಕೂ ಒಂದೇ ಶಿಕ್ಷೆ ಕೊಡಬಹುದೇ? ಉದ್ದೇಶ ಪೂರ್ವಕವಾಗಿ ರೋಗಿಯನ್ನು ಸಾಯಿಸುವ ವೈದ್ಯರಿದ್ದಾರೆಯೇ? ಹೀಗೆ ಸಾಯಿಸಿದರೆ ವೈದ್ಯರಿಗೆ ಆಗುವ ಲಾಭವಾದರೂ ಏನು? ಎಂದುದನ್ನು ಅವರೇ ವಿವರಿಸಬೇಕು. ಐದು ರುಪಾಯಿಗೆ ವೈದ್ಯರು ಚಿಕಿತ್ಸೆ ಕೊಡಬೇಕು ಎನ್ನಲು ಸರಕಾರಕ್ಕೆ ನೈತಿಕತೆ ಬರಬೇಕಾದರೆ, ವೈದ್ಯರಿಗೆ ಐದು ರುಪಾಯಿಗಳಿಗೆ ಊಟ ಸಿಗುವಂತೆ ಮಾಡಬೇಕು. ಒಂದು ಸಾವಿರಕ್ಕೆ ಆಪರೇಷನ್ ಮಾಡಿ ಎನ್ನುವ ಸರಕಾರ , ಮೊದಲು ವೈದ್ಯಕೀಯ ಶಿಕ್ಷಣದ ಶುಲ್ಕವನ್ನು 10 ಸಾವಿರ ರುಪಾಯಿಗಳಿಗೆ ನಿಗದಿ ಮಾಡಬೇಕು. ಸಮಸ್ಯೆಯ ಮೂಲಕ್ಕೆ ಕೈ ಹಾಕದಿದ್ದರೆ , ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ .

ಹಣದಾಹಿ ಆಧುನಿಕ ವೈದ್ಯರಿಂದ , ಇಂದಿನ ದುಬಾರಿ ಎನ್ನುವರಿಗೆ ಒಂದು ಮಾತು. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಬಹಳಷ್ಟು ವೈದ್ಯರಿಗೆ, ತಮಗೆ ಕಾಯಿಲೆ ಬಂದರೆ , ಅದೇ ಆಸ್ಪತ್ರೆಯ ವೆಚ್ಚವನ್ನು ಭ ರಿಸಲು ಆಗುವುದಿಲ್ಲ ಎಂಬುದು ಸತ್ಯ !. ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರುಗಳು , ತಮ್ಮ ಮನೆಯವರ ಚಿಕಿತ್ಸೆಗೆ ಸಣ್ಣ ಆಸ್ಪತ್ರೆಗಳ ಮೊರೆ ಹೋಗುವುದು ವಿಚಿತ್ರವಾದರೂ ಸತ್ಯ. ಏಕೆಂದರೆ ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳು, ಉಚಿತ ಚಿಕಿತ್ಸೆ ಕೊಟ್ಟರೂ, ಆಸ್ಪತ್ರೆಯ ಕೊನೆಯ ಮೊತ್ತದಲ್ಲಿ ಹೆಚ್ಚಿನ ವ್ಯತ್ಯಾಸ ಬರುವುದಿಲ್ಲ. ಏಕೆಂದರೆ ಆಸ್ಪತ್ರೆಗಳ ಒಳರೋಗಿಗಳ ಖರ್ಚಿನಲ್ಲಿ , ವೈದ್ಯರ ಶುಲ್ಕ 10 % ಮೀರುವುದಿಲ್ಲ .

ಮಿಕ್ಕ 90 % ಶುಲ್ಕ ಬರುವುದು ಔಷಧ, ಹಾಸಿಗೆ, ಸಿರಿಂಜ್,ಸ್ಟೆಂಟ್‌ಗಳಿಂದ. ನಿಜವಾಗಿ ಸರಕಾರಗಳಿಗೆ ಕಾಳಜಿ ಇದ್ದರೆ ಔಷಧಗಳು,ಆಸ್ಪತ್ರೆಯಲ್ಲಿ ಉಪಯೋಗಿಸುವ ಯಂತ್ರಗಳು ಮತ್ತು ಇತರ ವಸ್ತುಗಳ ಗರಿಷ್ಠ ಬೆಲೆಗೆ ಮಿತಿ ಹಾಕಬೇಕು ಮತ್ತು ಉಪಕರಣಗಳನ್ನು ತೆರಿಗೆ ಮುಕ್ತ ಮಾಡಬೇಕು . ಆಗ ತಂತಾನೆ ವೈದ್ಯಕೀಯ ವೆಚ್ಚ ಕಡಿಮೆ ಆಗುತ್ತದೆ . ಈ ನಿಟ್ಟಿನಲ್ಲಿ ಮೋದಿಯವರು ಹೃದಯದ ಸ್ಟೆಂಟ್‌ಗಳ ಗರಿಷ್ಠ ಬೆಲೆ ಮಿತಿ ಮಾಡಿರುವುದು ಅನುಕರಣೀಯ. ಇದೇ ನಿಯಮವನ್ನು ಎ ವೈದ್ಯಕೀಯ ಉಪಕರಣಗಳಿಗೂ ವಿಸ್ತರಿಸಿದರೆ ,ವೈದ್ಯಕೀಯ ವೆಚ್ಚದಲ್ಲಿ ಗಣನೀಯ ವ್ಯತ್ಯಾಸ ಕಾಣಲು ಸಾಧ್ಯ. ಇತ್ತ ಆಸ್ಪತ್ರೆಗಳ ತೆರಿಗೆ ಹಣವೂ ಬೇಕು, ವೆಚ್ಚವೂ ತಗ್ಗಬೇಕು ಎನ್ನುವ ಸರಕಾರದ ಮನಸ್ಥಿತಿ, ಹಾವು ಸಾಯಬೇಕು, ಕೋಲು ಮುರಿಯಬಾರದು ಎನ್ನುವಂತಿದೆ.

ವೈದ್ಯರನ್ನು ಗ್ರಾಹಕರ ಕಾಯ್ದೆಯಲ್ಲಿ ತಂದ ಮೇಲೆ , ವೈದ್ಯರು ಸೇವೆ ಮಾಡಬೇಕು ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ .ವೈದ್ಯಕೀಯ ಕ್ಷೇತ್ರ ಒಂದು ಉದ್ಯಮ ಎಂದು ಕಾನೂನು ಮಾಡಿದ ಮೇಲೆ , ಸೇವೆಯ ಮಾತು ಎಲ್ಲಿ ? ದಿನ ನಿತ್ಯ ವೈದ್ಯರ ಮೇಲಿನ ಹಗಳಿಂದ, ಕೆಲ ವೈದ್ಯರು ಮನಸ್ಸು ಬದಲಾಯಿಸಿಕೊಂಡಿದ್ದರೆ , ಕೆಲವರು ಮಾಧ್ಯಮದವರ ದಾಳಿಗಳಿಂದ ಮನಸ್ಸು ಕಲ್ಲು ಮಾಡಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವೆಚ್ಚ ಭರಿಸುವ ಶಕ್ತಿಯಿಲ್ಲದ ಜನರ , ನಿರಾಶೆಯನ್ನು ಮಾಧ್ಯಮ ಮತ್ತು ಸರ್ಕಾರಗಳು, ಜನರನನ್ನು ವೈದ್ಯರ ವಿರುದ್ಧ ಎತ್ತಿ ಕಟ್ಟುವುದರ ಮೂಲಕ , ತಮ್ಮ ಉಪಯೋಗಕ್ಕೆ ಬಳಸಿ ಕೊಳ್ಳುತ್ತಿವೆ . ಕರ್ನಾಟಕ ತರಲು ಯತ್ನಿಸುತ್ತಿರುವ ಕಾನೂನಿನಿಂದ , ಇದ್ದ ಬದ್ದ ವೈದ್ಯರು ಸೇವಾ ಮನೋಭಾವನೆ ಕಳೆದು ಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಇತರ ಉದ್ಯೋಗಗಳಂತೆ ನಮ್ಮದು ಒಂದು ಉದ್ಯೋಗ ಎಂಬ ಭಾವನೆ ಮೂಡಲು ಹೆಚ್ಚಿನ ಸಮಯ ತೆಗೆದು ಕೊಳ್ಳುವುದಿಲ್ಲ. ಕಾಲ ಖಂಡಿತವಾಗಿಯೂ ಮಿಂಚುತ್ತದೆ.

-ಡಾ . ದಯಾನಂದ ಲಿಂಗೇಗೌಡ

 

2 thoughts on “ವೈದ್ಯರಿಗಿಂತ ಬ್ರಾಹ್ಮಣರೇ ಪುಣ್ಯವಂತರು

  1. Vasthava lekhana.

    Looks like Health minister do not have basic knowledge in medical field.

    Let Health Minister Implement supreme court order regarding minimum wages for nurses in private hospital.

    1. Example Medicines;

      Same content but different trade names or company. Price difference sky high. how come? who must regulate?
      If you are more concern about common people please raise such kind of issues.

Leave a Reply

Your email address will not be published. Required fields are marked *

sixteen − 7 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top