ಭುಬನೇಶ್ವರ: ವಿಪರೀತ ಮಳೆ ಹಾಗು ತೇವಾಂಶದ ವಾತಾವರಣದ ನಡುವೆಯೂ ಯಶಸ್ವಿ ಉಡಾವಣೆ ಕಂಡ ಬ್ರಹ್ಮೋಸ್ ಕ್ಷಿಪಣ ಮತ್ತೊಂದು ಪ್ರಯೋಗಾರ್ಥ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ.
ಇತ್ತೀಚೆಗೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕುಟ(ಎಂಟಿಸಿಆರ್) ಸದಸ್ಯತ್ವ ಸಿಕ್ಕ ಬಳಿಕ ಕ್ಷಿಪಣಿಗೆ ಇನ್ನಷ್ಟು ಸುಧಾರಣೆಗಳನ್ನು ಮಾಡಲಾಗಿದ್ದು, ದೇಶದ ಮುಂಚೂಣಿ ಯುದ್ಧ ವಿಮಾನಗಳಾಸ ಸುಖೋಯ್ 30 ಎಂಕೆಐಗೆ ಅಳವಡಿಸಬಲ್ಲಂತೆ ಮಾರ್ಪಾಡು ಮಾಡಿಕೊಳ್ಳಲಾಗಿದೆ.
ಕ್ಷಿಪಣಿಯ ಆಯುಷ್ಯ ವೃದ್ಧಿ ಹೆಚ್ಚಿಸಲೆಂದು ನಡೆಸಲಾದ ಪರೀಕ್ಷೆಯಲ್ಲಿ, ತನೊಂದು ಸರ್ವಋತು/ಕಲಾದ ನಂಬಿಕಸ್ಥ ಕ್ಷಿಪಣಿ ಎಂದು ಬ್ರಹ್ಮೋಸ್ ಇನ್ನೊಮ್ಮೆ ಸಾಬೀತುಪಡಿದೆ. ಭಾರತ-ರಷ್ಯಾ ಜಂಟಿ ಪಾಲುದಾರಿಕೆಯಲ್ಲಿ ಉತ್ಪಾದಿಸಲಾಗಿರುವ ಬ್ರಹ್ಮೋಸ್ ಜಗತ್ತಿನ ಅತ್ಯಂತವೇಗದ ಕ್ರೂಸ್ ಕ್ಷಿಪಣಿಯಾಗಿದೆ.
ಭಾರತದ ಬ್ರಹ್ಮಪುತ್ರಾ ಹಾಗು ರಷ್ಯಾದ ಮಾಸ್ಕುವಾ ನದಿಗಳ ಹೆಸರನ್ನು ಬೆಸೆದು ಕ್ಷಿಪಣಿ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ.