About Us Advertise with us Be a Reporter E-Paper

ಗೆಜೆಟಿಯರ್

ಫೇಕುಗಳಿಗೆ ಬ್ರೇಕ್… ಜಾಲತಾಣದ ಮೇಲೆ ಲಾಜಿಕಲ್ ಕಣ್ಣು

ಸಂತೋಷ್ ಕುಮಾರ್ ಮೆಹಂದಳೆ

ಅಲ್ಯಾರನ್ನೋ ಬಡಿದುಕೊಂದರು, ಇಲ್ಯಾರೋ ಗುಂಪುಗಾರಿಕೆ ಮಾಡಿದರು, ಇನ್ಯಾರೋ ನಾವು ವಿದೇಶಕ್ಕೆ ಬರೋವ್ರಿಗೆ ಫಂಡು ಕೊಡಿಸ್ತೀವಿ, ಬಿಡಿ ಫಾರಿನ್‌ಗೆ ಕರೆದೊಯ್ತೀನಿ ಅಂದರೆ ಎಂಥವರೂ ಎಲ್ಲಾ ಅಡಇಟ್ಟು ಬರೋಕೆ ರೆಡಿ ಆಗಿ ನಿಂತಿದಾರೆ. ಈ  ಹದಿನೈದು ಜನರಿಗೆ ಶೇರ್ ಮಾಡಿದರೆ ನಿಮಗೆ ಇಷ್ಟು ಹಣ ಸಿಗುತ್ತೆ, ಇದನ್ನು ಕೂಡಲೇ 50 ಜನರಿಗೆ ಫಾರ್ವರ್ಡ್ ಮಾಡಿದರೆ ನಿಮಗೆ ರಿಚಾರ್ಜ್ ಆಗುತ್ತೆ… ಹೀಗೆ ತರಹೇವಾರಿ ಸುದ್ದಿಗಳನ್ನು ಫೇಕುತ್ತಲೇ ಇರುತ್ತಾರೆ. ಅಸಲಿಗೆ ಯಾವುದೂ ನಿಜವಿರೋದಿಲ್ಲ. ಬಾಟ್ ನೆಟ್‌ವರ್ಕ್‌ಲ್ಲಿ ನಡೆಯುವ ದಂಧೆ ಇದು.

ಆದರೆ ಜಾಲತಾಣ ಎಂಬ ಸಾಮೂಹಿಕ ಸನ್ನಿಯಾಗಿ ಅವರಿಸಿ ಕೊಂಡಿರುವ ಫೇಸ್‌ಬುಕ್ಕು, ಟ್ವೀಟರ್ ಮತ್ತು ವಾಟ್ಸಪ್‌ನಲ್ಲಿ ಇವತ್ತು ಪ್ರತಿಯೊಬ್ಬನೂ ಮಹಾನ್ ಪ್ರಭೃತಿಯೇ..! ತನಗೆ ತಿಳಿದದ್ದು, ತಿಳಿಯದ್ದು, ನೋಡಿದ್ದು,  ಇನ್ಯಾರದ್ದೋ ಸಿನೇಮಾ ರಿವ್ಯೂನ ತಾನೇ ಬರೆದಂತೆ ರೀ ಟೈಪು ಮಾಡುವುದು, ಲೈಕು, ಕಮೆಂಟಿಗಾಗಿ ನಾನಾ ಕಸರತ್ತು ನಡೆಸುತ್ತಾ ಸುದ್ದಿ ಹರಡು ವವರಿಗೆ ಇಲ್ಲಿ ಫೇಕಲು ಲಿಮಿಟ್ಟಿಲ್ಲ, ನಿಯಂತ್ರಣವಿಲ್ಲ ಎಲ್ಲದಕ್ಕೂ ಮಿಗಿಲಾಗಿ ಅವನ್ನೆಲ್ಲ ನೋಡಿ, ಯಾವುದನ್ನು ಕೊಡಬೇಕು ಕೊಡಬಾರದು ಎಂದು ನಿರ್ಧರಿಸುವ ಪತ್ರಿಕಾ ಪುಟಗಳಿರುವಂತೆ ಸಂಪಾದಕ ಅಥವಾ ಮ್ಯಾನೇಜರು ಮೊದಲೇ ಇಲ್ಲ. ಕೈಕಾಲು ಹಿಡಿದು, ನಿಮ್ಮ ಕಾಲ ಮೇಲೆ ಬಿದ್ದು ಬೇಡಿಕೊಂಡು ನನ್ನ ಕವನ ನೋಡಿ, ನನ್ನ ಪುಟ ನೋಡಿ  ವರಾತ ತುಸು ಹೆಚ್ಚೆ.

ಹಾಗಾಗಿ ಅವರವರ ಪುಟಕ್ಕೆ ಎಲ್ಲರೂ ಎಡಿಟರೇ, ಅವರವರ ಗುಂಪಿಗೆ ಪ್ರತಿಯೊಬ್ಬನೂ ಅಡ್ಮಿನ್ನೇ. ಹುಡುಗ ನಾಲ್ಕು ಗ್ರುಪ್ ಅಡ್ಮಿನ್ ಎಂದು ಅದನ್ನೆ ಸ್ಟೇಟಸ್ ಮಾಡಿಕೊಳ್ಳುವ ಮಟ್ಟಿಗೆ ಇದು ಅಡಿಕ್ಟು ಮಾಡಿದ್ದೂ ಇದೆ. ಆದರೆ ಹೀಗೆ ಫೇಕಿದ್ದೆಲ್ಲದಕ್ಕೂ ಯಾವ ಬೇಸೂ ಇರುವುದಿಲ್ಲವಲ್ಲ ಅದಕ್ಕೇನು ಮಾಡುವುದು..? ಅದ ರಿಂದಾಗುವ ಅನಾಹುತಗಳಿಗೆ ಯಾರು ಹೊಣೆ…? ಇದಕ್ಕೆ ಉತ್ತರವನ್ನು ಕಳೆದ ವರ್ಷದವರೆಗೂ ಯಾರೂ ಕೊಡಲು ಸಿದ್ಧರಿ ರಲಿಲ್ಲ. ಆದರೆ ಕಳೆದ ತಿಂಗಳು  ಹೆಡೆಮುರಿಗೆ ಕಟ್ಟಲು, ಫೇಕಿಗರನ್ನೆಲ್ಲ ಅಲ್ಲಲ್ಲೆ ಗುಡಿಸಿ ಸ್ವಚ್ಛಮಾಡುವ ಕಸಬರಿಗೆ ಯೊಂದಿಗೆ ವೇದಿಕೆಗೆ ಆಗಮಿಸಿದ್ದು ಲಿರಿಕ್ ಜೈನ್ ಎಂಬ ಕೆಂಬ್ರಿಡ್‌ಜ್ ಮತ್ತು ಮೆಸ್ಸಾಚುಸೆಟ್‌ಸ್ನ ಪ್ರತಿಭಾವಂತ, ಮೂಲತ: ಮೈಸೂರು ಹುಡುಗ.

ಲಾಜಿಕಲ್ ಟೂಲ್ ಎನ್ನುವ ಸುಳ್ಳು ಸುದ್ದಿಗಳನ್ನು ಪತ್ತೆ ಮಾಡುವ ಲಾಗರಿದಮ್ ಬೇಸ್‌ಡ್ ಪ್ರೋಗ್ರಾಂ ಬರೆದಿರುವ ಜೈನ್ ಪ್ರಕಾರ ಜಾಲ ತಾಣದಲ್ಲಿರುವ ಸುಮಾರು 70 ಸಾವಿರ ಡೊಮೈನ್‌ಗಳಲ್ಲಿ ಇರಬಹುದಾದ ಸಂಗ್ರಾಹ್ಯ ಸುದ್ದಿಗಳಿಂದ ಜಾಲಾಡಿ, ಸೋಸಿ ಯಾವುದು ಸುಳ್ಳು ಯಾವುದು ಸತ್ಯ ಮಾಡಲು  ರಚಿಸಿ, ಅದರಲ್ಲಿ ನಮ್ಮ ಮೂಲ ಖಾತೆಯ ಶಬ್ದಗಳು ಮತ್ತು ಮಾಡಿರಬಹುದಾದ ಕಿತಾಪತಿ, (ನಾವು ಮೇಲೆ ಮಾಡು ವುದೆಲ್ಲವನ್ನೂ ಅಳಸಿ ಹಾಕಿದ್ದರೂ ಪ್ರತಿ ವಿವರವೂ 0,1,0 ಲೆಕ್ಕದಲ್ಲಿ ಹಿಂಭಾಗದ ಪರದೆಯಲ್ಲಿ ಅಚ್ಚು ಕಟ್ಟಾಗಿ ಸೇವ್ ಆಗುತ್ತಲೇ ಇರುತ್ತದೆ. ಇದನ್ನು ಡಾರ್ಕ್ ನೆಟ್ವರ್ಕ್ ಪ್ಲಾಟ್ ಫಾರ್‌ಂ ಎನ್ನು ತ್ತಾರೆ) ಹೀಗೆ ಇತ್ಯಾದಿಗಳ ಮಾಹಿತಿಗಳನ್ನು ಕ್ರೋಢೀಕರಿಸಲಾಗುತ್ತದೆ. ಬಳಿಕ  ಅದರಲ್ಲಿರಬಹುದಾದ ಶಬ್ದ ಭಂಡಾರವನ್ನು ಗಲಬರಸಿ, ಆ ಮೂಲಕ ನಿಮ್ಮ ಸಾಚಾತನವನ್ನು ಓರೆಗೆ ಹಚ್ಚಿ, ನಿಮ್ಮ  ಶಬ್ದಗಳ ಮೇಲೆ ಆಯಾ ಊರು, ದೂ.ಸಂ. ಅಡ್ರೆಸ್ಸು ಇತ್ಯಾದಿಗಳಿಗೆಲ್ಲ ಅದೇ ಲಿಂಕ್‌ನ್ನು ತಾಗಿಸಿ, ಆ ಮೂಲಕ ಅಲ್ಲೆಲ್ಲಾ ನೀವು ಹಾಕಿದ ಸುದ್ದಿಯ ಪ್ರಕಾರ ಏನಾದರೂ ನಿಜವಾದುದು ನಡೆದಿದೆಯಾ ಎಂದೆಲ್ಲಾ ಕನ್ಫರ್ಮ್ ಮಾಡಿಕೊಳ್ಳಲಾಗುತ್ತದೆ. ಅಕಸ್ಮಾತ್ ಅದೇ ವಿಷಯ ಅಥವಾ ಸುದ್ದಿಗೆ ಸಂಬಂಧಪಟ್ಟಿದ್ದು ಇನ್ಯಾರಾದರು ವಾಲ್‌ನಲ್ಲಿ ಹರವಿ, ಅಗಲಿಸಿದ್ದಾರಾ ನೋಡಿ, ಹಾಗೆ ಅಲ್ಲೆಲ್ಲಾ ಅದಕ್ಕೆ ಮ್ಯಾಚ್ ಆಗುವ ಅಂಶಗಳಿದ್ದರೆ ಅದರ ಮೂಲಗಳೇನಿವೆ ಹುಡುಕಿ ಹೀಗೆ ಸರಿ ಸುಮಾರು ಲಭ್ಯ ಇರುವ ಎಲ್ಲಾ  ಪರಿಶೀಲಿಸಲು ಹಾಕುವ ಕಾಂಬಿನೇಶನ್‌ಗಳ ಸಂಖ್ಯೆ ಪರಿಮಿತಿ ಸದ್ಯಕ್ಕೆ ಲೆಕ್ಕಕ್ಕೆ ಸಿಗುತ್ತಿಲ್ಲ. ಆ ಮೂಲಕ ನಮ್ಮ ವಾಲ್ ಮತ್ತು ಜಾಲತಾಣ ಪುಟ ಜಾಲಾಡಿ ಫೇಕ್‌ನ್ನು ತೆಗೆದು ಬಿಸಾಡಲಿದೆ.

ಕಾರಣ ಲಾಗರಿದಮ್‌ಸ್ ಎನ್ನುವ ಕೋಷ್ಠಕದ ಮೂಲಕ, ಹಲವು ವಿಶ್ಲೇಷಣೆಗಳ ಚಕ್ಕುಗಳಲ್ಲಿ ವಿಷಯದ ಸತ್ಯಾಸತ್ಯದ ಶಬ್ದಗಳ ಅಲೆದಾಟ ನಡೆಸುವ ಲಾಜಿಕಲಿ ಟೂಲ್ ಎನ್ನುವ  ಆ್ಯಪ್, ಅದಕ್ಕೆ ಸಂಬಂಧಿಸಿದ ವಿಷಯದ ಮೂಲವನ್ನು ಲಾಜಿಕ್ (ಹೀಗಾದರೆ ಹಾಗಾಗುತ್ತದೆ, ಹಾಗಿದ್ದರೆ ಹೀಗಾಗುತ್ತದೆ ಎನ್ನುವ ಕಾಂಬಿನೇಶನ್‌ಗಳಿಗೆ ಸಂಕೀರ್ಣ ಸಂರಚನೆಯ  ಹಂತಗಳ ಅಂತಿಮ ಫಲಿತಾಂಶವನ್ನು ಕೊಡುವ ಲೆಕ್ಕಾಚಾರ)ಎನ್ನುವ ಗಣಿತ ಅಂಶದ ಬಾಯಿಗೆ ನಮ್ಮ ಜಾಲತಾಣವನ್ನು ಕೊಡುವ ಸಿದ್ಧತೆ ನಡೆದಿದೆ.

ಪ್ರಾಯೋಗಿಕವಾಗಿ ನಾಲ್ಕು ಸಾವಿರ ಸುಳ್ಳುಸುದ್ದಿಗಳ ಪೋಸ್‌ಟ್ನ್ನು ವಿವಿಧ ಪೋರ್ಟಲ್ ಅಪ್ಡೇಟ್ ಮೂಲಕ ಪರಿಶೀಲಿ ಸಲು ಕೊಟ್ಟಾಗ ಅದರ ಸತ್ಯಾಸತ್ಯತೆಯನ್ನು ಶೇ.96ರಷ್ಟು  ಖಚಿತಪಡಿಸಿದ ಹೆಗ್ಗಳಿಕೆಗೆ ಲಾಜಿಕಲಿ ಟೂಲ್ ಪಾತ್ರವಾಗಿದೆ. ಬರುವ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಸಾಮಾಜಿಕ ಜಾಲತಣದಲ್ಲಿ ಡಾರ್ಕ್‌ನೆಟ್‌ವರ್ಕ್ ಮೇಲೆ ಕಣ್ಣಿಡಲಿರುವ ಈ ತಂತ್ರಾಂಶ ಮೊದಲು ರಾಜಕೀಯ, ಸಾಮಾಜಿಕ, ವೈಯಕ್ತಿಕ ಮತ್ತು ವಿಡಿಯೋ  ಫೋಟೊ ಕೇಂದ್ರಿತ ವ್ಯವಸ್ಥೆಯ ಮೇಲೆ ಪ್ರತ್ಯೇಕವಾಗಿ ಕೆಲಸ ಮಾಡಲಿದೆ. ಪ್ರತಿ ಮಾಹಿತಿಯ ಮೂಲದವರೆಗೆ ತಲುಪಿ ಅಲ್ಲಿಂದ ಮರು ಹೊರಡುವ ಮಾಹಿತಿಯ ಜಾಲದ ಮೂಲಕ ಸಂವಹನದ ಜಾಲವನ್ನು ಒಡೆಯುವ ತಂತ್ರಜ್ಞದ ಮೇಲೆ ಲಾಜಿಕಲ್ ಟೂಲ್ ಕೆಲಸ ಮಾಡಲಿದ್ದು ಒಂಥರಾ ರಿವರ್ಸ್ ಟೆಕ್ನಾಲಜಿಯ ಲಾಜಿಕ್ ಇದಕ್ಕೆ ಲಗತ್ತಿಸಿಲಾಗಿದೆ. ಇದರಿಂದ ಎರಡು ವಿಭಿನ್ನ ದಿಶೆಯಲ್ಲಿ ಕಾರ್ಯ ರ್ಪವೃತ್ತವಾಗುವ ಜಾಲ ತಾಣದ ಮಾಹಿತಿ ಕ್ರೋಢೀಕರಣ ಅಷ್ಟೆ ವೇಗದಲ್ಲಿ ಒಂದು ಸಮನ್ವಯ ಬಿಂದುವಿನ ಬಳಿಗೆ ಬಂದು  ಸುದ್ದಿಯ ಖಚಿತತೆಗೆ ಒತ್ತು ಕೊಡುತ್ತವೆ.

ಯಾರದ್ದೋ ಫೋಟೊ ಪ್ರಕಟಿಸಿಕೊಳ್ಳುವ ಫೇಕುಗಳನ್ನೆಲ್ಲಾ ಇದು ಹಿಡಿದು ಹಾಕಲಿದೆ. ತತಕ್ಷಣ ಎರಡೂ ಐಡಿಗಳಿಗೆ ಮೆಸೇಜ್ ಮೂಲಕ ಎಲ್ಲೆಲ್ಲಿ ಇರಬಹುದಾದ ಚಿತ್ರದ ಸಾಮ್ಯತೆ ಯನ್ನು ದಾಖಲಿಸಿ ಇ-ಮೇಲ್, ವಾಟ್ಸಪ್, ಮೆಸೆಂಜರ್ ಹೀಗೆ ಸಾಧ್ಯ ಇರುವ ಎಲ್ಲೆಡೆ ದಾಂಗುಡಿ ಇಟ್ಟು ಮೂಲ ಚಿತ್ರ ಒಡೆಯನವರೆಗೂ ತಲುಪುವವರೆಗೂ ಇದ್ದು ಸುತ್ತಾಡುತ್ತಲೇ ಇರುತ್ತದೆ. ಇದಕ್ಕಾಗಿ ಬಾಟ್ ನೆಟ್ ವರ್ಕನ ಮೂಲದಲ್ಲಿ ಆಗುವ ಅನಾಹುತಗಳನ್ನು ಪತ್ತೆ ಮಾಡಿ ಪರಿಚಯಿಸಲಿದ್ದು, ಬಾಟ್‌ನೆಟ್  ಸ್ಪಾಮ್ ಎಂಬ ತಲೆ ಹರಟೆ ನೆಟ್‌ವರ್ಕುಗಳು, ಅದಕ್ಕೆ ಸಿಕ್ಕಿ ದಿವಾಳಿಯಾಗುವುದರ/ವವರ ಹಿಂದಿನ ಕಾಳ ತಂತ್ರಜ್ಞಾನವನ್ನು ಮುಂದಿನ ವಾರಕ್ಕಿರಲಿ.

Tags

Related Articles

Leave a Reply

Your email address will not be published. Required fields are marked *

Language
Close