About Us Advertise with us Be a Reporter E-Paper

Breaking Newsದೇಶಪ್ರಚಲಿತ

ಲಂಚಾರೋಪ: ಸೇನಾಧಿಕಾರಿಗಳ ವಿರುದ್ಧ ಎ‌ಫ್‌‌ಐಆರ್‌ ದಾಖಲು

ದೆಹಲಿ: ಸೈನಿಕರಿಗೆ ಪಡಿತರ ಪೂರೈಸುವ ಗುತ್ತಿಗೆದಾರನಿಂದ ಲಂಚ ಪಡೆದ ಆರೋಪದಲ್ಲಿ ಕರ್ನಲ್ ಸೇರಿದಂತೆ ಸೇನೆಯ ಐವರು ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಕರ್ನಲ್ ರಮಣ್ ದಹ್ದಾ, ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಕುಮಾರ್, ಸುಬೇದಾರ್ ದೇವೇಂದ್ರ ಕುಮಾರ್ , ಹವಾಲ್ದಾರ್ ಅಭಯ್ ಸಿಂಗ್, ಸುಬೇದಾರ್ ಸಾಹುರಾನ್ ಸಾಹು ಹಾಗೂ ಗುತ್ತಿಗೆದಾರ ಕೆ.ಕೆ. ಯಾಂಗ್ಫೊ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಮಣ್ ದಹ್ದಾ ಅವರು 556 ಆರ್ಮಿ ಸಪ್ಲೈ ಕೋನರ್ ಕಮಾಂಡಿಂಗ್ ಅಧಿಕಾರಿಯಾಗಿದ್ದರೆ, ಮಹೇಂದ್ರ ಕುಮಾರ್ ಅವರು ಪ್ಲಾಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಪಡಿತರ ಪೂರೈಕೆ ಮಾಡುವ ಗುತ್ತಿಗೆದಾರನಿಂದ ಈ ಅಧಿಕಾರಿಗಳು ₹ 18 ಲಕ್ಷ ಲಂಚ ಪಡೆದಿರುವ ಆರೋಪ ಕೇಳಿ ಬಂದಿತ್ತು. ನಂತರ ಸೇನೆ ದೂರು ದಾಖಲಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close