About Us Advertise with us Be a Reporter E-Paper

Breaking Newsದೇಶ
Trending

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಸೇತುವೆ ಕುಸಿತ, ಟ್ರಕ್ ಚಾಲಕನಿಗೆ ಗಾಯ

ಕೋಲ್ಕತ:  ಮೂರು ದಿನಗಳ ಹಿಂದಷ್ಟೇ ಕೋಲ್ಕತಾದ ಹೊರವಲಯದಲ್ಲಿದ್ದ 50 ವರ್ಷಗಳ ಹಳೇ ಸೇತುವೆ ಕುಸಿದು ಮೂವರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಪಶ್ಚಿಮಬಂಗಾಳದ ಡಾರ್ಜಲಿಂಗ್ ಜಿಲ್ಲೆಯ ಸಿಲಿಗುರಿ ಸಮೀಪ ಸೇತುವೆಯೊಂದು ಏಕಾಏಕಿ ಕುಸಿದು ಬಿದ್ದಿದೆ.

ಶುಕ್ರವಾರ ಮುಂಜಾನೆ ಟ್ರಕ್​ವೊಂದು ಹಾದು ಹೋಗುವ ವೇಳೆ ಅವಘಡ ಸಂಭವಿಸಿದೆ. ಮನಗಂಜ್​ ಪ್ರದೇಶದಿಂದ ಉತ್ತರ ಬಂಗಾಳದ ಸಿಲಿಗುರಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು ತುಂಬಾ ಹಳೆಯದಾಗಿತ್ತು. ಸೇತುವೆ ಮೇಲೆ ಟ್ರಕ್ ಚಲಿಸುತ್ತಿದ್ದಂತೆಯೇ ಕುಸಿದು ಬಿದ್ದಿದ್ದು, ಇಬ್ಭಾಗವಾದ ಸೇತುವೆಯ ಮಧ್ಯೆದಲ್ಲಿ ಟ್ರಕ್ ಸಿಲುಕಿಕೊಂಡಿದೆ. ಘಟನೆಯಲ್ಲಿ ಟ್ರಕ್ ಚಾಲಕ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close