About Us Advertise with us Be a Reporter E-Paper

ಗೆಜೆಟಿಯರ್

ಬ್ರೌಸರ್ ಬದಲಿಸಿ ಎಂಬ ಹುಸಿ ಸಂದೇಶ

ಶಶಿಧರ ಹಾಲಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏನನ್ನೋ ಬ್ರೌಸ್ ಮಾಡುತ್ತಿರುವಾಗ ಒಮ್ಮೊಮ್ಮೆ ಗಾಬರಿಗೊಳಿ ಸುವ ರೀತಿಯ ಮೆಸೇಜ್ ಪ್ರತ್ಯಕ್ಷವಾಗಿ ನಿಮ್ಮನ್ನು ಕಾಡಿರಬಹುದು ಇಲ್ಲಿ ವೈರಸ್ ಅಟ್ಯಾಕ್ ಆಗಿದೆ. ತಕ್ಷಣ ವೈರಸ್ ತೆಗೆಸಿ ಎಂಬ ಸಂದೇಶ ಬಂದಾಗ ಸಹಜವಾಗಿ ಸಂದೇಹಕ್ಕೊಳಗಾಗುವುದು ನಿಮ್ಮ ಸರದಿ. ಅದೇ ರೀತಿ ನಿಮ್ಮ ಬ್ರೌಸರ್‌ನ್ನು ಬದಲಿಸಿ ಅಥವಾ ಹೊಸ ಬ್ರೌಸರ್‌ನ್ನು ಅಳವಡಿಸಿ ಎಂಬ ಪುಕ್ಕಟೆ ಸಲಹೆ ಸಿಗಬಹುದು. ಅಂತಹ ಸಂದೇಶವನ್ನು ಕ್ಲೋಸ್ ಮಾಡೋಣವೆಂದರೆ, ಬ್ರೌಸರ್ ವಾಪಸ್ ಹೋಗು ವುದೇ ಇಲ್ಲ! ಈ ರೀತಿ ಅನುಭವ ಆಗಿದ್ದರೆ, ಅಲ್ಲಿ ಪ್ರತ್ಯಕ್ಷವಾದ ಸಂದೇಶವು ಒಂದು ಮಾಲ್‌ವೇರ್ ಬೆದರಿಕೆ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನನ್ನು ಹಾಳುಮಾಡಲು ಅಥವಾ ಡಾಟಾ ಕದಿಯಲೆಂದೇ ರೂಪುಗೊಂಡಿರುವ ಮಾಲ್ವೇರ್ ಅದು. ಆಪರೇಟಿಂಗ್ ಸಿಸ್ಟಂನ್ನು ಹಾಳುಗೆಡಹುವುದು ಅಥವಾ ಡಾಟಾ ಕದಿಯುವುದು ಅದರ ಉದ್ದೇಶ. ಕೆಲವು ಸಂದರ್ಭಗಳಲ್ಲಿ ಹಣವನ್ನು ವಸೂಲಿ ಮಾಡಲು ಸಹ ಇಂತಹ ಖೋಟಾ ಸಂದೇಶ ಗಳು ನಿಮ್ಮ ಸ್ಮಾರ್ಟ್‌ಫೋನಿನ ಮೇಲೆ ದಾಳಿ ಮಾಡಬಹುದು. ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳ ಮೇಲೆ ಸಹ ಇಂತಹ ಮಾಲ್‌ವೇರ್‌ಗಳ ದಾಳಿಯಾಗುವುದುಂಟು.

ಯಾವುದೇ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಫೋನ್‌ನಲ್ಲಿ ಅವಶ್ಯವಾಗಿ ಉತ್ತಮ ಗುಣಮಟ್ಟದ ಆ್ಯಂಟಿವೈರಸ್ ಪ್ರೊಗ್ರಾಂ ಇರಲೇಬೇಕು. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ನಾನಾ ರೀತಿಯ ವೈರಸ್‌ಗಳು, ಮಾಲ್‌ವೇರ್‌ಗಳು, ಆಪರೇಟಿಂಗ್ ಸಿಸ್ಟಂ ಮೇಲೆ ದಾಳಿ ಮಾಡಿ ಅದನ್ನು ಹಾಳುಗೆಡವಲು ಯತ್ನ ಮಾಡುತ್ತಲೇ ಇರುತ್ತವೆ. ಸ್ಮಾರ್ಟ್‌ಫೋನ್‌ನ ಆಪರೇಟಿಂಗ್ ಸಿಸ್ಟಂನ್ನು ಹಾಳುಗೆಡವಲು ಅಥವಾ ನಿಧಾನಗೊಳಿಸಲು ಯತ್ನಿಸುವ ಇಂತಹ ಪ್ರೊಗ್ರಾಂ ಗಳನ್ನು ನಿಯಂತ್ರಿಸಲು ಸೂಕ್ತ ಎನಿಸುವ ಆ್ಯಂಟಿವೈರಸ್ ಪ್ರೊಗ್ರಾಂನ್ನು ಅಗತ್ಯವಾಗಿ ಅಳವಡಿಸಿರಲೇಬೇಕು. ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳ ಆರೋಗ್ಯ ಕಾಪಾಡಲು ಇಂತಹ ಜಾಗ್ರತೆಯನ್ನು ತೆಗೆದುಕೊಳ್ಳಬೇಕಾಗಿ ರುವುದು ಬಳಕೆದಾರರ ಕರ್ತವ್ಯ.

ಮೋಸಗಾರರು ಮತ್ತು ಕುತಂತ್ರಾಂಶಗಳು ಅನುಸರಿಸುವ ಒಂದು ವಾಮಮಾರ್ಗ ಎಂದರೆ ಆ್ಯಂಟಿವೈರಸ್ ಮುಖವಾಡ ದಲ್ಲಿ ಡಾಟಾ ಕದಿಯಲು ಯತ್ನಿಸುವುದು! ನೀವು ಬ್ರೌಸ್ ಮಾಡುತ್ತಿರುವಾಗ ಉಚಿತವಾಗಿ ಆ್ಯಂಟಿವೈರಸ್ ಸ್ಕ್ಯಾನ್ ಮಾಡಲಾಗುವುದು ಎಂದೋ, ಅತ್ಯಂತ ವೇಗವಾಗಿ ಸ್ಕ್ಯಾನ್ ಮಾಡಲು ಇಲ್ಲಿ ಕ್ಲಿಕ್‌ಮಾಡಿ ಎಂದೋ ಸಂದೇಶವು ಸ್ಕ್ರೀನ್ ಮೇಲೆ ಪ್ರತ್ಯಕ್ಷವಾದರೆ, ತಕ್ಷಣ ಸಂಶಯಗೊಂಡು ಜಾಗ್ರತೆ ವಹಿಸಬೇಕಾದುದು ಬಳಕೆದಾರರನ ಚಾಣಾಕ್ಷತನ. ಈ ರೀತಿಯ ಮೋಸಗಾರ ಆ್ಯಂಟಿ ವೈರಸ್‌ಗಳ ಪೈಕಿ, ಕೆಲವು ನಿಜವಾಗಿಯೂ ಸ್ಕ್ಯಾನ್ ಆದರೆ ಅದರ ನಿಜವಾದ ಉದ್ದೇಶ ಡಾಟಾ ಕದಿಯುವಿಕೆ! ತ್ವರಿತವಾಗಿ ಸ್ಕ್ಯಾನ್ ಮಾಡುತ್ತೇವೆ ಎಂಬ ಅವರ ಆಶ್ವಾಸನೆಯನ್ನು ಸ್ವೀಕರಿಸಿದರೆ, ಖಾಸಗಿ ಮಾಹಿತಿಯ ಸೋರಿಕೆಯ ಜತೆಗೆ, ಒಮ್ಮೊಮ್ಮೆ ಗಂಭೀರ ಸಮಸ್ಯೆಯ ಎಚ್ಚರಿಕೆಯೂ ದೊರೆಯುತ್ತದೆ. ಇಲ್ಲದೇ ಇರುವ ಸಮಸ್ಯೆ ಯನ್ನು ಹುಟ್ಟುಹಾಕಿ, ಅದನ್ನು ಸರಿಪಡಿಸಲು ಹಣ ನೀಡಿ ಎಂಬ ಬೆದರಿಕೆಯನ್ನೂ ಆ ಕುತಂತ್ರಾಂಶ ಒಡ್ಡುತ್ತದೆ. ಅಥವಾ ಉಚಿತ ಸ್ಕ್ಯಾನ್ ಮಾಡಿದ ನಂತರ, ತ್ವರಿತವಾಗಿ ಸ್ಕ್ಯಾನ್ ಮಾಡಿದ್ದೇವೆ, ಈ ತಂತ್ರಾಂಶವನ್ನು ಖರೀದಿಸಿ ಎಂಬ ಬೇಡಿಕೆ, ಎಲ್ಲವೂ ಬರಬಹುದು. ಆದರೆ ತ್ವರಿತವಾಗಿ ಸ್ಕ್ಯಾನ್ ಮಾಡುತ್ತೇವೆ ಎಂಬ ಆಶ್ವಾಸನೆಯೇ ಒಂದು ಬೊಗಳೆ. ಏಕೆಂದರೆ, ಅಂತಹ ಕುತಂತ್ರಾಂಶಗಳು ನಿಜವಾದ ಸ್ಕ್ಯಾನ್ ಮಾಡುವುದಿಲ್ಲ, ಬದಲಿಗೆ ಸ್ಕ್ಯಾನ್ ಮಾಡುವಂತೆ ನಟಿಸುತ್ತವೆ! ನಿಜವಾದ ಆ್ಯಂಟಿ ವೈರಸ್ ಪ್ರೊಗ್ರಾಂ ಬರೆಯವುದು ಒಂದು ದೊಡ್ಡ ಮತ್ತು ಕಷ್ಟದ ಕೆಲಸ. ನಿಮ್ಮ ಬ್ರೌಸರ್ ಬದಲಾಯಿಸು ಅಥವಾ ಗಂಭೀರ ತೊಂದರೆ ಇದೆ, ತ್ವರಿತ ಸ್ಕ್ಯಾನ್ ಮಾಡಿ ಎಂಬ ಸಂದೇಶ ಬರು ವಂತೆ ಮಾಡುವ ಪ್ರೋಗ್ರಾಂ ಬರೆಯವುದು ಸುಲಭ. ಇಂತ ಮೂಲಕ ಬಳಕೆದಾರರನ್ನು ಬೆದರಿಸುವವರೇ, ನಂತರ ಹಣ ವಸೂಲಿ ಮಾಡುವಂತಹ ನೀಜಕೆಲಸಕ್ಕೆ ಕೈ ಹಾಕುತ್ತಾರೆ.

ಪತ್ತೆ ಹೇಗೆ?

ನೀವು ಅಳವಡಿಸದೇ ಇರುವ ಅಥವಾ ಖರೀದಿಸದೇ ಇರುವ ಯಾವುದಾದರೂ ಸಾಫ್‌ಟ್ವೇರ್, ಥಟ್ಟಂತ ಸ್ಕ್ರೀನ್ ಮೇಲೆ ಮೂಡಿ ಎಚ್ಚರಿಕೆ, ನಿಮ್ಮ ಬ್ರೌಸರ್ ಕೆಟ್ಟಿದೆ, ತಕ್ಷಣ ಹೊಸ ಬ್ರೌಸರ್ ಅಳವಡಿಸಿ ಎಂಬ ಸಂದೇಶ ಬಂದರೆ ಕೂಡಲೆ ಎಚ್ಚರಿಕೆ ವಹಿಸಬೇಕು. ಕೆಲವು ಬಾರಿ ಇಂತಹ ಸಂದೇಶಗಳು ನಾವು ಮೈಕ್ರೊಸಾಫ್‌ಟ್ನಿಂದ ಎಚ್ಚರಿಕೆ ಕಳುಹಿಸುತ್ತಿದ್ದೇವೆ , ಗೂಗಲ್ ನಿಂದ ಬ್ರೌಸರ್ ಬದಲಿಸಿ ಎಂದೆಲ್ಲಾ ರೀತಿಯ ತಪ್ಪುದಾರಿಗೆಳೆಯುವ ಮಾದರಿಯಲ್ಲಿ ಇರುತ್ತವೆ. ಕೂಡಲೆ ಆ ಸಂದೇಶವನ್ನು ಕ್ಲೋಸ್ ಮಾಡಲು ಯತ್ನಿಸಿ. ಈ ರೀತಿಯ ಹೆಚ್ಚಿನ ಖೋಟಾ ಸಂದೇಶಗಳನ್ನು ಕ್ಲೋಸ್ ಮಾಡಲು ಸಹ ಆಗುವುದಿಲ್ಲ ಅಥವಾ ಕಷ್ಟ. ಆಗ, ಸ್ಮಾರ್ಟ್‌ಫೋನನ್ನು ಸ್ವಿಚ್ ಆಫ್ ಮಾಡುವುದು ಉತ್ತಮ ಉಪಾಯ.

ಈ ರೀತಿಯ ಖೊಟ್ಟಿ ಸಂದೇಶ ಬಂದಿದೆ ಎಂದು ಮನವರಿಕೆ ಆದ ತಕ್ಷಣ, ಉತ್ತಮ ಗುಣಮಟ್ಟದ ಆ್ಯಂಟಿವೈರಸ್‌ನಿಂದ ಸಂಪೂರ್ಣ ಸ್ಕ್ಯಾನ್ ಮಾಡಬೇಕು. ಈ ರೀತಿಯ ಸಣ್ಣ ಎಚ್ಚರಿಕೆಯ ಹೆಜ್ಜೆಗಳನ್ನು ಅನುಸರಿಸುವುದರಿಂದ, ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಆರೋಗ್ಯ ಕಾಪಾಡ ಬಹುದು. ಹೆಸರಾಂತ ಕಂಪೆನಿಗಳ ಆ್ಯಂಟಿವೈರಸ್ ಖರೀದಿಸು ವುದು ಜಾಣತನದ ಲಕ್ಷಣ. ಅದರಲ್ಲೂ ಅವರು ನೀಡುವ ಉಚಿತ ಆ್ಯಂಟಿವೈರಸ್ ಪ್ರೊಗ್ರಾಂ ಖರೀದಿಸುವ ಬದಲು, ಹಣ ಕೊಟ್ಟು ಖರೀದಿಸುವುದು ಇನ್ನೂ ಜಾಣರ ಲಕ್ಷಣ!

Tags

Related Articles

Leave a Reply

Your email address will not be published. Required fields are marked *

Language
Close