ವೇಣುಗೋಪಾಲ ಅತ್ಯಾಚಾರಿ, ಸಿದ್ದರಾಮಯ್ಯ ಭ್ರಷ್ಟಾಚಾರಿ

Posted In : ಉತ್ತರ ಕನ್ನಡ

ಕುಂದಾಪುರ: ಬೆಳಗಾವಿ ಅಧಿವೇಶದನದಲ್ಲಿ ರಾಜ್ಯ ಸರಕಾರದ ಇಬ್ಬರೇ ಸಚಿವರು ಭಾಗವಹಿಸಿದ್ದು, ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕುಂದಾಪುರದಲ್ಲಿ ಬಿಜೆಪಿ ಪರಿವರ್ತನಾ ರ‍್ಯಾಲಿ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಭ್ರಷ್ಟಾಚಾರಿ, ವೇಣುಗೋಪಾಲ ಅತ್ಯಾಚಾರಿ ಎಂದು ಟೀಕಿಸಿದ ಬಿಎಸ್‌ವೈ, ಡಿವೈಎಸ್‌ಪಿ ಗಣಪತಿ ಸಾವಿಗೆ ಕಾರಣರಾದ ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಸಿದ್ದರಾಮಯ್ಯ ಸರಕಾರ ಎಸಿಬಿ ದುರ್ಬಳಕೆ ಮಾಡಿಕೊಂಡಿದೆ. ಹಿಂದುಳಿದ ವರ್ಗಗಳ ಉದ್ಧಾರಕ ಎಂದು ಸ್ವಯಂ ಘೋಷಿಸಿಕೊಂಡಿರುವ ಸಿಎಂ, ಚಾಮರಾಜನಗರದಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್ ಮಕ್ಕಳಿಗೆ ಕಳಪೆ ಬಟ್ಟೆ ಕೊಟ್ಟಿದ್ದಾರೆ. ಇವರದು ಬೋಗಸ್ ಕಾಳಜಿ. ಸರಕಾರಿ ಆಸ್ಪತ್ರೆಗಳನ್ನು ನೆಟ್ಟಗೆ ನೋಡಿಕೊಳ್ಳಲಾಗದ ಸಿದ್ದರಾಮಯ್ಯ, ಖಾಸಗಿ ಆಸ್ಪತ್ರೆ ಮುಚ್ಚಲು ಕರಾಳ ಶಾಸನ ರೂಪಿಸುತ್ತಿದ್ದಾರೆ. ಈ ಕುರಿತು ನನ್ನ ವಿರೋಧ ಇದೆ. ಖಾಸಗಿ ಆಸ್ಪತ್ರೆಗಳ ಹಿತರಕ್ಷಣೆ, ಹಕ್ಕು ಬಾಧ್ಯತೆಗಳ ಜಾರಿಗೆ ವಿಕ್ರಂಜಿತ್ ಸೇನ್ ವರದಿ ಜಾರಿಗೆ ತರಬೇಕು ಎಂದರು.

Leave a Reply

Your email address will not be published. Required fields are marked *

4 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top