ಕೇಂದ್ರ ಸರಕಾರದ ಅನುದಾನದಲ್ಲಿ ಸಿದ್ದರಾಮಯ್ಯ ಬಿಟ್ಟಿ ಪ್ರಚಾರ: ಬಿಎಸ್‌ ವೈ

Posted In : ಚಿಕ್ಕಬಳ್ಳಾಪುರ, ರಾಜ್ಯ

ಚಿಕ್ಕಬಳ್ಳಾಪುರ: ಅನ್ನ ಭಾಗ್ಯ ಅಕ್ಕಿ ಕೇಂದ್ರ ಸರಕಾರ ನೀಡುತ್ತಿರುವುದು 29 ರೂ. ರಾಜ್ಯ ಸರ್ಕಾರ ನೀಡುತ್ತಿರುವುದು ಕೇವಲ 2 ರೂ. ಹೀಗಾಗಿ ಎಲ್ಲ ಪಡಿತರ ಅಂಗಡಿಗಳ ಮುಂದೆ ಮೋದಿ ಭಾವ ಚಿತ್ರ ಅಳವಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒತ್ತಾಯಿಸಿದರು.

ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಅನುದಾನ ಕೇಂದ್ರದ್ದು, ಪೋಟೊ ಬಿಟ್ಟಿ ಪ್ರಚಾರ ರಾಜ್ಯದ ಸಿದ್ದರಾಮಯ್ಯ ಅವರದ್ದು. ಚುನಾವಣೆ ಸಮಯದಲ್ಲಿ ಇದನ್ನು ಸಿದ್ದರಾಮಯ್ಯ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗಿದೆ. ಇದನ್ನು ಹೈಕೋರ್ಟ್ ಗಮನಿಸಿ 2 ದಿನದ ಹಿಂದಷ್ಟೇ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಚೀಮಾರಿ ಹಾಕಿರುವುದೆ ಸಾಕ್ಷಿ.  ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ ಅಗಿದೆ. ಬೆಂಗಳೂರಿನ ಕಾರ್ನರ್ ಸೈಟ್ ಅಡ ಇಟ್ಟು 975 ಕೋಟಿ ಸಾಲ ಪಡೆದಿದೆ.ಮೈಸೂರು ಮಿನರಲ್ಸ್ ಸಂಸ್ಥೆಯಲ್ಲಿದ್ದ 1400 ಕೋಟೆಯನ್ನು ರೈತರ ಸಾಲ ಮನ್ನ ಮಾಡುವುದಾಗಿ ಸುಳ್ಳು ಹೇಳಿ ಹಣ ಬೇಕಾಬಿಟ್ಟಿ ಖರ್ಚು ಮಾಡಿದೆ. ಈಗ ದಿನಕ್ಕೆ 200 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಬರೀ ನಾಟಕ ಎಂದರು. ಅನುದಾನದ ಬಗ್ಗೆ ಅಮಿತ್ ಶಾ, ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರೆ ತಪ್ಪೇನು ಎಂದರು.

Leave a Reply

Your email address will not be published. Required fields are marked *

3 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top