About Us Advertise with us Be a Reporter E-Paper

ಅಂಕಣಗಳು

ಆಡಳಿತಶಾಹಿ ಲಂಚಗುಳಿಯೇ?!

ಆಶಯ: ದಕ್ಷಿಣಾಮೂರ್ತಿ

ಭ್ರಷ್ಟಾಚಾರದ ಹೆಸರನ್ನೆತ್ತಿದರೆ ಥಟ್ಟನೆ ನಮಗೆ ಹೊಳೆಯುವುದು ರಾಜಕಾರಣಿಗಳು ಮತ್ತು ಸರಕಾರಿ ಕಚೇರಿಗಳು. ಆದರೆ ಭ್ರಷ್ಟಾಚಾರದ ವಿಷಯ ಬಂದಾಗಲೆಲ್ಲ, ರಾಜಕಾರಣಿಗಳು, ಅಧಿಕಾರಶಾಹಿ ಮತ್ತು ಸರಕಾರಿ ನೌಕರರ ಮೇಲೆ ಗೂಬೆ ಕೂರಿಸುವುದು ಅನೂಚಾನವಾಗಿ ನಡೆದುಬಂದದ್ದೆ.

ಲಖನೌದ ಪ್ರಕರಣ ಹೀಗಿದೆ: ‘ಸರ್ ಲಂಚ್ ಕೊಡಲಿಲ್ಲ ಎಂದರೆ ಯಾವ ಕೆಲಸವೂ ಆಗುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಹೀಗಾಗಿ ನಾನು ಉಳಿಸಿರುವ ಹುಂಡಿಯ ಹಣವನ್ನು ತಂದಿದ್ದೇನೆ. ಇದನ್ನು  ನನ್ನ ತಾಯಿಯ ಆತ್ಮತ್ಯೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸಿ, ನಮಗೆ ನ್ಯಾಯ ಕೊಡಿಸಿ’ ಹೀಗೆಂದು ಉತ್ತರ ಪ್ರದೇಶದ ಮೀರತ್‌ನ ಐದು ರ್ಷದ ಬಾಲಕಿ ಮಾನ್ವಿ ಪೊಲೀಸ್ ಅಧಿಕಾರಿಗಳಿಗೆ ಮಾಡಿರುವ ಮನವಿ ಇದು. ಮಾನ್ವಿ ತಾಯಿ ಸೀಮಾ ಕೌಶಿಕ್ ಎಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ತಾಯಿಯ ಸಾವಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಲು ಮಾನ್ವಿ ತನ್ನ ಅಜ್ಜ ಶಾಂತಿ ಸ್ವರೂಪ್ ಅವರೊಂದಿಗೆ ಮೀರತ್ ವಲಯದ ಐಜಿಪಿ ರಾಮ್ ಕುಮಾರ್  ಕಚೇರಿಗೆ ಹೋಗಿದ್ದಳು. ಜತೆಗೆ ಮಣ್ಣಿನ ಹುಂಡಿಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿದ್ದಳು. ಭ್ರಷ್ಟಾಚಾರದ ಬಗ್ಗೆ ಹೀಗಿದೆ ಸಾರ್ವಜನಿಕರ ಮನಸ್ಥಿತಿ.

ಸರಕಾರಿ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ದಂಧೆಗೆ ಕಡಿವಾಣ ಹಾಕಿದ ಎರಡೇ ನಿಮಿಷದಲ್ಲಿ ಮುಖ್ಯಮಂತ್ರಿ ಸ್ಥಾನವೇ ಹೋಗುತ್ತದೆ! ಶಕ್ತಿ ಕೇಂದ್ರ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಆರಂಭವಾಗುವ ಭ್ರಷ್ಟಾಚಾರದ  ಕರಾಳ ದಂಧೆ ಹಳ್ಳಿಗಳನ್ನೂ ವ್ಯಾಪಿಸಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಟೀಕೆಗೆ ಗುರಿಯಾಗಿರುವುದೇ ಭ್ರಷ್ಟಾಚಾರ. ಆದರೆ ಇದು ನೂರಾರು ವಿಧಗಳಲ್ಲಿ ಕಂಡುಬರುತ್ತದೆ. ಭ್ರಷ್ಟಾಚಾರ  ಇದ್ದಂತೆ. ಅವರವರಿಗೆ ತಕ್ಕಂತೆ ಚಪ್ಪರಿಸುವವರೇ ಆಗಿರುತ್ತಾರೆ. ಮಂತ್ರಿ ಕಂಡ ರುಚಿ, ಅಧಿಕಾರಿಗೆ. ಅಧಿಕಾರಿ ಚಪ್ಪರಿಸಿದ್ದು, ನೌಕರರಿಗೆ. ಎಲ್ಲರೂ ಸವಿದ ರುಚಿ ಪತ್ರಕರ್ತರಿಗೆ ಗೊತ್ತಾಗಿರುತ್ತದೆ. ಇದನ್ನು ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುತ್ತಾರೆ.

ಟ್ರಾನ್‌ಸ್ಪರೆನ್ಸಿ ಇಂಟರ್‌ನ್ಯಾಷನಲ್‌ನ ಇತ್ತೀಚಿನ ವರದಿ ಪ್ರಕಾರ, ‘ದಿನನಿತ್ಯ ಸಾಮಾನ್ಯ ಸರಕಾರಿ ಸೇವೆಗಳಿಗಾಗಿ ಭಾರತೀಯರು ತೆತ್ತ ಲಂಚದ ಮೊತ್ತ ಬರೋಬ್ಬರಿ 21 ಸಾವಿರ ಕೋಟಿ ಅಂದರೆ, ನೀವು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಒಂದು ವಿಲ್ ಅಥವಾ ಟ್ರಸ್‌ಟ್  ಪ್ರಯತ್ನಿಸಿ ಲಂಚದ ಸ್ವರೂಪ ಗೊತ್ತಾಗುತ್ತದೆ ಎಂದಿದೆ.

ಭ್ರಷ್ಟಾಚಾರವನ್ನು ಹತ್ತಿಕ್ಕುವ ದಿಸೆಯಲ್ಲಿ ಇತ್ತೀಚೆಗೆ ಆಂಧ್ರಪ್ರದೇಶ ಸರಕಾರದ ನಡೆ ಹೀಗಿದೆ; ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ನೌಕರಶಾಹಿಯಲ್ಲಿ ಚುರುಕುತನ ಮೂಡಿಸಲು ವಿನೂತನ ಉಪಕ್ರಮವನ್ನು ಆಂಧ್ರಪ್ರದೇಶ ಸರಕಾರ ಜಾರಿಗೊಳಿಸಿದೆ, ‘ಪ್ರಜಲೇ ಫಸ್‌ಟ್’ ಎನ್ನುವ ಸಹಾಯವಾಣಿಯನ್ನು ಅದು ಪ್ರಾರಂಭಿಸಿದೆ. ಆ ರಾಜ್ಯದ 1100 ಸಂಖ್ಯೆಗೆ  ಕರೆಮಾಡಿ ಸಾರ್ವಜನಿಕರು ತಮ್ಮ ದೂರುದುಮ್ಮಾನಗಳನ್ನು ಹೇಳಿಕೊಳ್ಳಬಹುದು. ಒಂದು ವೇಳೆ ಸರಕಾರಿ ಸಿಬ್ಬಂದಿಗೆ ಲಂಚ ಕೊಟ್ಟಿದ್ದರೆ, ಆ ವಿಷಯವನ್ನು ಸಹಾಯವಾಣಿಗೆ ತಿಳಿಸಿದರೆ,  ಮೂರು ದಿನಗಳಲ್ಲಿ ಲಂಚ ಪಡೆದವರೇ ಸಾಕ್ಷಾತ್ ದೂರುದಾರರ ಮನೆ ಕದ ಬಡಿದು, ಅವನು ಕೊಟ್ಟಿದ್ದ ಹಣವನ್ನು ವಾಪಸು ಕೊಡುವ ಪದ್ಧತಿ ಜಾರಿಗೊಳಿಸಿದೆ.

ಭ್ರಷ್ಟತೆಯ ವಿರುದ್ಧ ದನಿಯೆತ್ತಿದ ಸರಕಾರಿ ನೌಕರರ ಉದಾಹರಣೆ ಹೀಗಿದೆ; ‘ಇಲ್ಲಿ ಲಂಚದ ಅವಶ್ಯಕತೆ ಇಲ್ಲ’ ಎನ್ನುವ ಒಂದು ಫಲಕವಿರುವ ಸರಕಾರಿ ಕಚೇರಿಯ ಟೇಬಲ್ ಇದೆ; ಅಲ್ಲಿ ಕುಳಿತಿರುವರು ‘ಅಬ್ದುಲ್ ಸಲೀಮ್ ಪಲ್ಲಿಯಾಲ್ತೊಂಡಿ’ ಈತ ಇರುವುದು ಕೇರಳ ಸರಕಾರದ ಅಂಗಡಿಪುರಂ ಗ್ರಾಮ ಪಂಚಾಯಿತಿಯಲ್ಲಿ. ಈ ಗ್ರಾಮ ಪಂಚಾಯಿತಿಗೆ  ಕೊಡುವ ಎಲ್ಲರಿಗೂ ಈತ ಚಿರಪರಿಚಿತ. ಅಷ್ಟೇ ಏಕೆ ಇಲ್ಲಿರುವ 17 ಮಂದಿ ಸಿಬ್ಬಂದಿಗೂ ಅಚ್ಚುಮೆಚ್ಚು. 42ವಯಸ್ಸಿನ ಈತನನ್ನು ಗ್ರಾಮ ಪಂಚಾಯಿತಿ ನೇಮಿಸಿಕೊಂಡಿದೆ. ನೇರ ಸ್ವಭಾವ, ಸದಾ ನಗುಮೊಗದ ಸಲೀಮ್ ತನ್ನ ಮೇಜಿನ ಮೇಲೆ ಮಲೆಯಾಳಿ ಭಾಷೆಯಲ್ಲಿ ಬರೆದಿರುವ, ‘ನಿಮಗೆ ಸೇವೆ ಸಲ್ಲಿಸಲು ಸರಕಾರ ನನಗೆ ದಿನವೊಂದಕ್ಕೆ 811ರುಪಾಯಿಗಳನ್ನು ನೀಡುತ್ತಿದೆ(24,340ರುಪಾಯಿಗಳು). ನನ್ನ ಸೇವೆಯಿಂದ ನಿಮಗೆ ಸಂತೋಷ ಆಗದಿದ್ದರೆ, ಅದನ್ನು ತಿಳಿಸಿ’ ಎನ್ನುವ ಫಲಕ ಆತನ ಮೇಜಿನ ಮೇಲಿರುತ್ತದೆ. ಸಂಬಳ ಬದಲಾವಣೆಯಾಗುತ್ತಿದ್ದಂತೆ  ಮೇಲೂ ಬದಲಾವಣೆಯ ಮೊತ್ತ ಕಂಡುಬರುತ್ತದೆ.

ಈ ಫಲಕದ ವಿಚಾರ, ‘ಸರಕಾರಿ ನೌಕರರ ಜೀವಾಳ ಎಂದರೆ ಸೇವೆಯೇ ಆಗಿದೆ’ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ. ಈತನಲ್ಲಿಗೆ ಕೆಲಸಕ್ಕೆ ಬಂದವರೊಬ್ಬರೂ ಇದುವರೆಗೂ ಬರಿಗೈಯಲ್ಲಿ ಹಿಂದಿರುಗಿದ್ದೇ ಇಲ್ಲ

ಎನ್ನುತ್ತಾರೆ ಸಹೋದ್ಯೋಗಿಗಳು. ಸಾರ್ವಜನಿಕರಿಗೆ ಅವರ ಹಕ್ಕುಗಳನ್ನು ತಕ್ಕ ಕೆಲಸದ ಮೂಲಕ ಮನವರಿಕೆ ಮಾಡಿಕೊಡುವುದೇ ಈತನ ವಿಶೇಷತೆ ಎನ್ನುತ್ತಾರೆ ಅಲ್ಲಿನ ಅಧೀಕ್ಷಕ ಪೀತಾಂಬರಂ.

ಇನ್ನು 2011-12ನೇ ಸಾಲಿನಲ್ಲಿ ಕೇರಳ ಸರಕಾರದಿಂದ ರಾಜ್ಯದ ಅತ್ಯುತ್ತಮ ಗ್ರಾಮ  ಕಾರ್ಯದರ್ಶಿ ಎಂಬ ಪ್ರಶಸ್ತಿ ಪಡೆದ ಕೆ.ಸಿದ್ದಿಕ್ ಸಲೀಮ್ ಒಬ್ಬ ನೇರ ನಡೆನುಡಿಯ ನೌಕರ ಎಂದು ಮೆಚ್ಚುಗೆ ಸೂಚಿಸುತ್ತಾರೆ. ಸಲೀಮ್‌ನ ಪ್ರೇರಣಾದಾಯಿ ನಡತೆಯನ್ನು ತುಂಬು ಮನಸ್ಸಿನಿಂದ ಹೇಳಿಕೊಳ್ಳುತ್ತಾರೆ. ಸಲೀಂ ವಿದೇಶದಲ್ಲಿ ಕೆಲಸ ಮಾಡಿದ ಅನುಭವಿಯೂ ಹೌದು, ಆದರೆ  ತನ್ನ ಊರಿನಲ್ಲಿಯೇ ಕೆಲಸ ಮಾಡುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ. ಶೇ.40ರಷ್ಟು ಪೋಲಿಯೋ ನ್ಯೂನತೆಯಿಂದರೂ, ತಮ್ಮ ಸ್ಕೂಟರಿನಲ್ಲಿ ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುತ್ತಾರೆ ಎನ್ನುವುದನ್ನು ಎಲ್ಲರೂ ಖಚಿತಪಡಿಸುತ್ತಾರೆ. ಕಚೇರಿ ವೇಳೆಯಲ್ಲಿ ತನ್ನ ಕಡೆಯಿಂದ ಆಗುವ  ಮುತುರ್ಜಿಯಿಂದ ಮಾಡಿಕೊಡುವುದಲ್ಲದೇ, ಇತರರ ಕಡೆಯಿಂದ ಆಗಬೇಕಾದ ಕೆಲಸದಲ್ಲಿಯೂ ಸಹ ನೆರವನ್ನು ನೀಡುವುದು ಅವರ ವಿಶೇಷತೆ.

ಅಧಿಕಾರ ಮತ್ತು ಭ್ರಷ್ಟಾಚಾರ ನಾಣ್ಯದ ಒಂದೊಂದು ಮುಖ. ಸರಕಾರಿ ನೌಕರರೂ ಹಾಗೂ ಅಧಿಕಾರಿಶಾಹಿ. ಸರಕಾರಿ ಅಧಿಕಾರಿಯೊಬ್ಬ ವರ್ಗವಾಗಿ ಕಚೇರಿಗೆ ಹಾಜರಾದ ಕೆಲವೇ ದಿನಗಳಲ್ಲಿ ಅವನ ಪೂವೇತಿಹಾಸವನ್ನೇ ಜಾಲಾಡಿರುತ್ತಾರೆ. ಸರಕಾರಿ ನೌಕರರು. ರಾಜಕಾರಣಿಗಳೂ ಅಷ್ಟೇ. ಅಧಿಕಾರಿಯ ಇತಿಹಾಸವನ್ನೇ ತಿಳಿದಿರುತ್ತಾರೆ. ಇತ್ತ ನೌಕರರು ಸಮಯ ಬಂದಾಗ ಗುಸುಗುಟ್ಟಿದರೆ, ಅದು ಅಧಿಕಾರಿಗೆ ತಿಳಿದುಹೋಗುತ್ತದೆ. ಮತ್ತೆ ರಾಜಕಾರಣಿ ಪರವಾಗಿ  ಹೋಗದಿದ್ದರೆ, ಅಧಿಕಾರಿ ಇತಿಹಾಸದ ರುಚಿ ತೋರಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವುದೂ ಉಂಟು. ಇದರಿಂದಾಗಿ ಆಡಳಿತ ವ್ಯವಸ್ಥೆ ಇದ್ದಲ್ಲಿಯೇ ಇರುತ್ತದೆ.

ಕರ್ನಾಟಕದಲ್ಲಿ ಭ್ರಷ್ಟಾಚಾರದ ನಿಯಂತ್ರಣದ ಬಗ್ಗೆ ಯಾವುದೇ ಉಪಕ್ರಮಗಳು ಪರಿಣಾಮಕಾರಿಯಾಗಿ ನಡೆದಿಲ್ಲ. ಭ್ರಷ್ಟತೆ ಅಥವಾ ಲಂಚ ಪಡೆಯುವುದು ಪ್ರತಿ ಸರಕಾರಿ ನೌಕರನ, ಅಧಿಕಾರಿಯ, ಶಾಸಕ ಹಾಗೂ ಸಚಿವರ ಮನಸ್ಥಿತಿಯನ್ನು ಅವಲಂಭಿಸಿರುತ್ತದೆ. ಲಂಚ ಪಡೆಯುವುದು ಪಾಪ ಎಂದು ಎಲ್ಲರಿಗೂ ಗೊತ್ತು. ಆದರೆ ಲಂಚ ತೆಗೆದುಕೊಳ್ಳಬಾರದು ಎನ್ನುವ ಅವನ ಮನಸ್ಥಿತಿಯನ್ನು ಬದಲಾಯಿಸುವುದು  ಏಕೆಂದರೆ ಲಂಚವೆನ್ನುವುದು ರಾಕ್ಷಸ ಮನಸ್ಸನ್ನು ಆವರಿಸಿಕೊಂಡುಬಿಟ್ಟಿರುತ್ತಾನೆ.

ಭ್ರಷ್ಟತೆಗೆ ಕಡಿವಾಣ ಹಾಕುವುದು ಸರಕಾರದಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರಿಂದ ಸಾಧ್ಯವಿದೆ. ಇವರು ಮನಸ್ಸು ಮಾಡಿದ್ದಲ್ಲಿ  ಆಡಳಿತದಲ್ಲಿ ಅಲ್ಲೋಲ ಕಲ್ಲೋಲ ಮಾಡಬಲ್ಲರು. ಈ ಭ್ರಷ್ಟಾಚಾರವನ್ನು ನಿಯಂತ್ರಿಸಲು ನವನವೀನ ಉಪಕ್ರಮವನ್ನು ಪ್ರಾರಂಭಿಸಬೇಕು ಅಷ್ಟೆ. ಅದೇನೆಂದರೆ, ನಿಮ್ಮ ಟೇಬಲ್ ಮೇಲೆ, ‘ನಾನು ಲಂಚ ತೆಗೆದುಕೊಳ್ಳುವುದಿಲ್ಲ’ ಎನ್ನುವ ಫಲಕ ಇಟ್ಟು ಎದೆಯ ಮೇಲೆ, ‘ನಾನು ಲಂಚ ತೆಗೆದುಕೊಳ್ಳುವುದಿಲ್ಲ ’ ಎನ್ನುವ ಚಿಕ್ಕ ಬಿಲ್ಲೆಯನ್ನು ಅಂಟಿಸಿಕೊಂಡು, ಕೆಲಸ  ಸಾಕು. ನೀವು ಹಚ್ಚುವ ಒಂದು ಫಲಕ ನಾಳೆ, ನಾಡಿದ್ದು ಇಲ್ಲವೇ ಒಂದು ವಾರದ ನಂತರ ಹತ್ತು ಸಾವಿರ, ಲಕ್ಷ ಆಗುತ್ತದೆ. ಲಂಚ ನಿರ್ಮೂಲನೆ ಮಾಡಬೇಕೆಂಬ ಸಮಾನ ಮನಸ್ಕರ ಸರಕಾರಿ ನೌಕರರು ನಿಮ್ಮನ್ನು ಅನುಸರಿಸುತ್ತಾರೆ. ಬದಲಾವಣೆಗಳಾಗುವುದು ದೊಡ್ಡ ದೊಡ್ಡ ಘೋಷಣೆಗಳಿಂದಲ್ಲ, ದೊಡ್ಡದೊಡ್ಡ ವ್ಯಕ್ತಿಗಳಿಂದಲೂ ಅಲ್ಲ, ಸಣ್ಣ ಸಣ್ಣ ಆಲೋಚನೆಗಳಿಂದ, ಸಂಕಲ್ಪಗಳಿಂದಲೇ ಎನ್ನುವುದನ್ನು ಇತಿಹಾಸ ಹೇಳಿದೆ. ಅಪಹಾಸ್ಯ ಮಾಡುವವರು, ಕೆಣಕುವವರು, ವ್ಯಂಗ್ಯವಾಡುವವರು, ಹಂಗಿಸುವವರು, ಕಾಲೆಳೆಯುವವರು ನಿಮ್ಮ ಹಿಂದೆ ಇರುತ್ತಾರೆ. ಎಲ್ಲ ಕಡೆ  ಕೇಂದ್ರ ಬಿಂದುವಾಗಿಬಿಡುತ್ತೀರಿ. ಕೆಲವೇ ದಿನಗಳಲ್ಲಿ ನಿಮಗೊಬ್ಬ ಹಿಂಬಾಲಕ ಸಿಗುತ್ತಾನೆ. ಅವನ ಟೇಬಲ್ ಮೇಲೆಯೂ, ‘ನಾನು ಲಂಚ ತೆಗೆದುಕೊಳ್ಳುವುದಿಲ್ಲ’ ಎನ್ನುವ ಫಲಕ ಕಾಣಿಸುತ್ತದೆ.

ಒಮ್ಮೆ ನೀವು ಲಂಚಕ್ಕೆ ಕೈಯೊಡ್ಡುವುದಿಲ್ಲ ಎಂಬುದು ಸಾಬೀತಾದರೆ ಸಾಕು, ನಿಮ್ಮ ಸೆಕ್ಷನ್‌ನ ಸಿಬ್ಬಂದಿ ಅಲರ್ಟ್ ಆಗುತ್ತಾರೆ. ಜತೆಗೆ ಅಧಿಕಾರಿಗಳು ಸಹ. ತಪ್ಪಾಗಿ ಕಡತ ಸಲ್ಲಿಸಲು ನಿಮಗೆ ಹೇಳುವುದಕ್ಕೆ ಹಿಂಜರಿಯುತ್ತಾರೆ. ಈ ಕೆಲಸವಾದರೆ ಸಾಕು ನಿಮ್ಮಲ್ಲಿ, ನಿಮಗರಿವಿಲ್ಲದೇ ಸರಳತೆ, ಧೈರ್ಯ, ಪ್ರಾಮಾಣಿಕತೆ, ನೇರ ನುಡಿ, ನಿಯಮ ಪಾಲನೆ,  ನ್ಯಾಯ ಒದಗಿಸುವ ನಿರ್ಧಾರ ನಿಮ್ಮ ಕಡತಗಳಲ್ಲಿ ಬರೆಯುವ ಟಿಪ್ಪಣಿಗಳಲ್ಲಿ ಮೂಡಿ ಬರುತ್ತದೆ. ಒಂದು ಬಗೆಯ ಸಂತೃಪ್ತ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೆ. ನೀವೇ ನಂಬಲಾರದಂತಹ ಪರಿವರ್ತನೆ ನಿಮ್ಮಲ್ಲುಂಟಾಗುತ್ತದೆ. ಸದಾ ನಿಮ್ಮ ಎದೆ ಸೆಟೆದು ನಿಲ್ಲುತ್ತದೆ.

ಆಡಳಿತದ ಏಣಿಯಲ್ಲಿ ಮೊತ್ತ ಮೊದಲ ಮೆಟ್ಟಿಲು ನೀವು. ನೀವು ಕೈಗೊಳ್ಳುವ ಈ ಉಪಕ್ರಮ ಎಲ್ಲರ ಮೇಲೂ ವಿಶಿಷ್ಟ ಪ್ರಭಾವ ಮೂಡಿಸುತ್ತದೆ. ನಿಮ್ಮ ಸೇವೆ ಪಡೆಯಲು ಮೇಲಿನವರು ಹಾತೊರೆಯುತ್ತಾರೆ. ತಮ್ಮ ಕೈ ಕೆಳಗೆ ಇಲ್ಲವೇ  ಕಚೇರಿಯಲ್ಲಿ ಲಂಚ ತೆಗೆದುಕೊಳ್ಳದ ಒಬ್ಬ ವ್ಯಕ್ತಿ ಇದ್ದಾನೆ ಎಂದು ಹೇಳಿಕೊಳ್ಳುತ್ತಾರೆ. ಅಂದರೆ ಅಷ್ಟರ ಮಟ್ಟಿಗೆ ತಾನೂ ಇದ್ದೇನೆ ಎನ್ನುವ ಭಾವನೆ ಅವರದ್ದಾಗಿರುತ್ತದೆ. ಆದರೆ ಆತ ಲಂಚಬಾಕ ಅನ್ನುವುದು ಸತ್ಯಸ್ಯ ಸತ್ಯ ಜನರಿಗೂ ಗೊತ್ತಿರುತ್ತದೆ. ಆದರೆ ನಿಮ್ಮನ್ನು ಮಾತ್ರ ಯಾರೂ ಅಲ್ಲಗಳೆಯಲಾರರು.

Tags

Related Articles

Leave a Reply

Your email address will not be published. Required fields are marked *

Language
Close