lakshmi-electricals

ಶಿಕ್ಷಕನಿಗೆ ಡಿಕ್ಕಿ ಹೊಡೆದ ಬಸ್ ಪತ್ತೆ

Posted In : ಜಿಲ್ಲೆ, ದಕ್ಷಿಣ ಕನ್ನಡ, ರಾಜ್ಯ

ಬೆಳ್ತಂಗಡಿ: ಗುರವಾಯನಕೆರೆ ಸಮೀಪ ಬೆಳಗ್ಗೆೆ ವಾಯು ವಿಹಾರಕ್ಕೆೆ ಹೊರಟಿದ್ದ ಶಿಕ್ಷಕನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಸ್ಸನ್ನು ಉಡುಪಿಯಲ್ಲಿ ಪತ್ತೆಯಾಗಿದೆ.
ಇಂದು ಬೆಳಗಿನ ಜಾವ ಗುರುವಾಯನಕೆರೆ ಸಮೀಪ ಶಿಕ್ಷಕ ದಿನಕರ ಹೆಗ್ಡೆ ಎಂಬವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತ ಪಟ್ಟಿದ್ದರು. ರಸ್ತೆ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಕೋಲಾರದಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್ ಶಿಕ್ಷಕನಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು.
ಬೆಳ್ತಂಗಡಿ ಪೋಲೀಸರು ನೀಡಿದ ಮಾಹಿತಿ ಮೇರೆಗೆ ಬಸ್ ಅನ್ನು ಪತ್ತೆ ಹಚ್ಚಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

four + 10 =

 
Back To Top