About Us Advertise with us Be a Reporter E-Paper

Breaking Newsದೇಶಪ್ರಚಲಿತ

ಶಿಕ್ಷಣ ಸಚಿವ ಎನ್.ಮಹೇಶ್ ವಿರುದ್ಧ ಸಿ‌.ಪುಟ್ಟರಂಗಶೆಟ್ಟಿ ಗರಂ

ಚಾಮರಾಜನಗರ: ಸ್ವಚ್ಛತಾ ಕಾರ್ಯದಲ್ಲಿ ಕಾಂಗ್ರೆಸ್ ಗಿಡಗಳನ್ನು ಕಿತ್ತು ಹಾಕುತ್ತೇನೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಶಿಕ್ಷಣ ಸಚಿವ ಎನ್.ಮಹೇಶ್ ವಿರುದ್ಧ ಮೈತ್ರಿ ಸರ್ಕಾರದ ಮತ್ತೋರ್ವ ಸಚಿವ ಸಿ‌.ಪುಟ್ಟರಂಗಶೆಟ್ಟಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್. ಮಹೇಶ್ ಒಂದು ಥರಾ ಕನಸ್ಸು ಕಾಣ್ತಾ ಇದಾನೆ, ಈಗ ತಾನೇ ಕಣ್ಣು ಬಿಟ್ಟಿದ್ದೀನಿ ಅಂತ ಅವನಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಥರಾ ಅಸಂಬದ್ಧ ಹೇಳಿಕೆ ಎಲ್ಲಾ ಕೊಡಬಾರದು, ಈ ಥರಾ ಮಾಡಿದ್ರೆ ಅವನೇ ಕಿತ್ತು ಹೋಗುತ್ತಾನೆ, ಇವನ್ಯಾವ ದೊಡ್ಡ ಲೀಡರ್? ಮನಸ್ಸು ಮಾಡಿದರೆ ನಾಳೆನೇ ಸಚಿವ ಸಂಪುಟದಿಂದ ಕಿತ್ತಾಕಿಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಪ್ಪಿ ತಪ್ಪಿ ಅವನ ಪುಣ್ಯಕ್ಕೆ ಸಚಿವ ಸ್ಥಾನ ಸಿಕ್ಕಿದೆ, ಕಾಂಗ್ರೆಸ್ ಹೆಮ್ಮರ ಅದನ್ನು ಕೀಳಲು ಯಾರಿಂದಲೂ ಸಾಧ್ಯವಿಲ್ಲ, ಒಂದು ಬೇರು ಕೀತ್ತರೆ ನೂರು ಬೇರು ಹುಟ್ಟಕೊಳ್ಳುತ್ತವೆ, ಈ ಥರಾ ಹೇಳಿಕೆ ಕೊಟ್ಟರೆ  ಅವನಿಗೆ ಗತಿ ಕಾದಿದೆ ಎಂದು ಆಕ್ರೋಶ ಹೊರಹಾಕಿದರು.
ಇತ್ತೀಚೆಗಷ್ಟೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗಿಡವನ್ನು ಕಿತ್ತಿದ್ದೇವೆ ಎಂಬ ಹೇಳಿಕೆ ಕಾಂಗ್ರೆಸ್ ಪಕ್ಷವನ್ನು ಕಿತ್ತಿದ್ದೇವೆ ಎಂದು ಧ್ವನಿಸಿ ವಿವಾದಕ್ಕೆ ಕಾರಣವಾಗಿದೆ.
Tags

Related Articles

Leave a Reply

Your email address will not be published. Required fields are marked *

Language
Close