About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೇಂದ್ರ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮೋದಿ ಸರಕಾರ

ದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೇಂದ್ರ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಹೆಚ್ಚುವರಿಯಾಗಿ ಶೇ. 2 ತುಟ್ಟಿ ಭತ್ಯೆ  (Dearness Allowance) ಹೆಚ್ಚಳ ಘೋಷಿಸಿದೆ. 2018 ಜುಲೈ 1 ರಿಂದ ಇದು ಜಾರಿಗೆ ಬರಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ತುಟ್ಟು ಭತ್ಯೆ ಜತೆಗೆ ನಿವೃತ್ತ ನೌಕರರಿಗೆ ಕಂತು ತುಟ್ಟಿ ಭತ್ಯೆಯನ್ನೂ ಹೆಚ್ಚಿಸಲಾಗಿದೆ. ಸದ್ಯ ತುಟ್ಟಿ ಭತ್ಯೆ ಶೇ. 7 ರಷ್ಟು ಇದ್ದು ಇದರ ಮೇಲೆ ಶೇ. 2 ರಷ್ಟು ಹೆಚ್ಚಳವಾಗಿದೆ. ಸಂಬಳದಾರರಿಗೆ ಹಾಗೂ ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ.

ಇದರಿಂದ 48.41 ಲಕ್ಷ ಕೇಂದ್ರ ನೌಕರರು ಹಾಗೂ 62.03 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದ್ದು, ಸರಕಾರಕ್ಕೆ ವಾರ್ಷಿಕವಾಗಿ 6112.20 ಕೋಟಿ ರು. ಹೊರೆ ಬೀಳಲಿದೆ. ಏಳನೇ ವೇತನ ಆಯೋಗದ ವರದಿಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close