About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮೂಲ ಸೌಕರ್ಯಗಳ ಕೊರತೆಯತ್ತ ಗಮನಹರಿಸಿ: ರೈಲ್ವೇ ಇಲಾಖೆಗೆ ಸಿಎಜಿ ಸೂಚನೆ

ದೆಹಲಿ: ಪ್ರಯಾಣಿಕ ಸೌಲಭ್ಯಗಳು ಹಾಗು ನಿಲ್ದಾಣಗಳನ್ನು ಮೇಲ್ದರ್ಜೆ ಕುರಿತಾಗಿ ಅತಿಯಾದ ಗಮನಹರಿಸಿ, ಸಮಯಪಾಲನೆಗೆ ಮಹತ್ವ ನೀಡುತ್ತಿಲ್ಲ ಎಂದು ರೈಲ್ವೇ ಇಲಾಖೆಯನ್ನು ಸಾರ್ವಜನಿಕ ಲೆಕ್ಕ ಮಹಾಪರಿಶೋಧಕರು(ಸಿಎಜಿ) ತರಾಟೆಗೆ ತೆಗೆದುಕೊಂಡಿದೆ.

ಸಂಸತ್ತಿನ ಮುಂದೆ ತನ್ನ ವರದಿ ಇಟ್ಟ ಸಿಎಜಿ, ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ವಿಚಾರವಾಗಿ, ಮೂಲ ಸೌಕರ್ಯದ ಇತಿಮಿತಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

“ನಿಲ್ದಾಣ ಅಭಿವೃದ್ಧಿ ಹಾಗು ಮೇಲ್ದರ್ಜೆಗೇರಿಸುವ ಕಾರ್ಯಕ್ರಮಗಳ ಮೂಲಕ ಕೇವಲ ನಿಲ್ದಾಣಗಳಲ್ಲಿರುವ ಪ್ರಯಾಣಿಕರಿಗೆ  ಮಾತ್ರ ಗಮನ ನೀಡಲಾಗುತ್ತಿದೆ. ಆದರೆ ರೈಲುಗಳ ಸಮಯಪಾಲನೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮಹತ್ವ ನೀಡಿಲ್ಲ”  ಎಂದು ಸಿಎಜಿ ತಿಳಿಸಿದೆ.

15 ಆಯ್ದ ನಿಲ್ದಾಣಗಳಲ್ಲಿ ಮಾಡಲಾದ ಅಧ್ಯಯನದಲ್ಲಿ, ಹೆಚ್ಚಿನ ರೈಲುಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯದಲ್ಲಿ ಸಾಕಷ್ಟು ಏರಿಕೆ ಕಂಡುಬಂದಿರುವುದಾಗಿ ಸಿಎಜಿ ತಿಳಿಸಿದೆ.

“ಆದರೆ, ‌ಪ್ಲಾಟ್‌ಫಾರಂ, ವಾಷಿಂಗ್‌ ಯಾರ್ಡ್‌‌ಗಳು ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಇನ್ನಷ್ಟು ವೃದ್ಧಿಸಬೇಕಾಗಿದೆ” ಎಂದು ವರದಿಯಲ್ಲಿ ತಿಳಿಸಲಾಗಿದೆ. ಸೂಕ್ತ ಸಂಖ್ಯೆಯಲ್ಲಿ ಪ್ಲಾಟ್‌ಫಾರಂಗಳ ಲಭ್ಯತೆ ಇರದ ಕಾರಣ ರೈಲುಗಳನ್ನು ಹಿಂದಿನ ನಿಲ್ದಾಣಗಳಲ್ಲೇ ಹಿಡಿದಿಡುವ ಪರಿಪಾಠವೂ ಬೆಳೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ತೊಡಕುಗಳನ್ನು ಶೀಘ್ರ ಪರಿಹರಿಸಿಕೊಳ್ಳಲು ಇಲಾಖೆಯ ಆಯಾ ವಲಯಗಳು ನೀಲನಕ್ಷೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಸಿಎಜಿ ಸೂಚನೆ ನೀಡಿದೆ. ನಿಲ್ದಾಣಗಳ ಆಧುನೀಕರಣ ಹಾಗು ಮೇಲ್ದರ್ಜೆಗೇರಿಸುವ ಕೆಲಸಕ್ಕಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ನಿಲ್ದಾಣಗಳ ವಿಸ್ತರಣೆ ಮೂಲಕ ಹೆಚ್ಚಿನ ಪ್ಲಾಟ್‌ಫಾರಂಗಳನ್ನು ತರುವತ್ತ ನೀಡಬೇಕಿದೆ ಎಂದು ಸಿಎಜಿ ತಿಳಿಸಿದೆ.

 

 

Tags

Related Articles

Leave a Reply

Your email address will not be published. Required fields are marked *

Language
Close