About Us Advertise with us Be a Reporter E-Paper

Breaking Newsದೇಶಪ್ರಚಲಿತ

ನಿನ್ನ ಕಾಲು ಮುರಿದು, ನಿನಗೂ ಊರುಗೋಲು ಕೊಡಬಲ್ಲೆ ಎಂದು ಧಮಕಿ ಹಾಕಿದ ಸಚಿವ

ಕೋಲ್ಕತ್ತಾ: ತಮ್ಮ ಭಾಷಣಕ್ಕೆ ಅಡ್ಡಿ ಮಾಡುತ್ತಿದ್ದಾನೆ ಎಂದು ಆಕ್ರೋಶಗೊಂಡ ಕೇಂದ್ರ  ಸಚಿವ ಬಬುಲ್ ಸುಪ್ರಿಯೋ ಅವರು ನಿನ್ನ ಕಾಲು ಮುರಿದು ವೀಲ್ ಚೇರ್ ಕೊಡುತ್ತೇನೆ ಹುಷಾರ್ ಎಂದು ಬೆದರಿಕೆ ಹಾಕಿ ವಿವಾದಕ್ಕೆ ಗುರಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‍ನಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಒಂದು ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡಿದ್ದರು. ಅಂಗವಿಕಲರಿಗೆ ಗಾಲಿಕುರ್ಚಿ ಮತ್ತು ಇತರ ಪರಿಕರ ವಿತರಿಸುವ ಸಮಾರಂಭಕ್ಕೆ ಸುಪ್ರಿಯೊ ಅವರನ್ನು ಆಹ್ವಾನಿಸಲಾಗಿತ್ತು.

ಸಭೆಯಲ್ಲಿ ಒರ್ವ ವ್ಯಕ್ತಿ ಪದೆ ಪದೆ ಓಡಾಡುತ್ತಿದ್ದುದನ್ನು ಕಂಡ ಸಚಿವರು, ಕೋಪಗೊಂಡು ಯಾಕೆ ಓಡಾಡುತ್ತಿದ್ದಿ ? ಒಂದು ಕಡೆ ಕುಳಿತುಕೊ ಎಂದು ಹೇಳಿದರು. ಆದರೂ ಆತ ಅತ್ತಿಂದಿತ್ತ ಓಡುತ್ತಿದ್ದುದು ಸಚಿವರ ತಾಳ್ಮೆಗೆಡಿಸಿತು. ಸಚಿವರು ಸಿಟ್ಟಿನಿಂದ ನಿನಗೇನಾಗಿದೆ? ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರಲ್ಲದೆ, ನಾನು ನಿನ್ನ ಕಾಲು ಮುರಿದು, ನಿನಗೂ ಊರುಗೋಲು ಕೊಡಬಲ್ಲೆ ಎಂದು ಅಬ್ಬರಿಸಿದರು.

ಬಳಿಕ ಭದ್ರತಾ ಸಿಬ್ಬಂದಿಯನ್ನು ಕುರಿತು, ಇನ್ನೂ ಆತ ತನ್ನ ಜಾಗದಿಂದ ಎದ್ದು ಓಡಾಡಿದರೆ ಆತನ ಕಾಲು ಮುರಿದು ಊರುಗೋಲು ಕೊಡಿ ಎಂದು ಆದೇಶಿಸಿದರು.

ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close