ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಬಳಕೆಗೆ ಹಸಿರು ನಿಶಾನೆ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಬಳಕೆಯಿಲ್ಲವೆಂದು ಹೇಳಿದ್ದ ಬಂಕ್ ಮಾಲೀಕರು, ನಿರ್ಧಾರ ಹಿಂಪಡೆದಿದ್ದಾರೆ. ಬಂಕ್ಗಳಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಬಳಕೆಗೆ ಶೇ.1 ರಷ್ಟು ವಹಿವಾಟು ಶುಲ್ಕ ವಿಧಿಸುತ್ತಿದ್ದುದನ್ನು ವಿರೋಧಿಸಿ ಬಂಕ್ ಮಾಲೀಕರು ನೀಡಲಾಗಿದ್ದ ಬಂದ್ ಗೆ ಬ್ಯಾಂಕ್ ಗಳು ಮಣಿದಿವೆ.

ಇನ್ನು ಎಂದಿನಂತೆ ಬಂಕ್ ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೈಪ್ ಮಾಡುವ ಮೂಲಕ ದರ ಪಾವತಿಸಬಹುದಾಗಿದೆ. ವಹಿವಾಟು ಶುಲ್ಕದ ಹೇರಿಕೆ ಬಗೆಗಿನ ತೀರ್ಮಾನವನ್ನು ಸದ್ಯಕ್ಕೆ ಕೈ ಬಿಡಲಾಗಿದ್ದು, ಸದ್ಯಕ್ಕೆ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನು ಬಳಸಬಹುದು ಎಂದು ಮೂಲಗಳು ತಿಳಿಸಿವೆ.

ಸ್ವೈಪ್ ಮೆಷಿನ್ ಅನ್ನು ವರ್ತಕರಿಗೆ ಒದಗಿಸುತ್ತಿರುವ ಖಾಸಗಿ ಕ್ಷೇತ್ರದ ಬ್ಯಾಂಕುಗಳಾದ ಎಹ್.ಡಿ.ಎಫ್.ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಗಳು ಭಾನುವಾರ ರಾತ್ರಿಯಿಂದ ಶೇ.1ರಷ್ಟು ಸೇವಾ ಶುಲ್ಕವನ್ನು ಪೆಟ್ರೋಲ್ ಬಂಕ್ಗಳಿಂದ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಬಂಕ್ ಮಾಲೀಕರು ಮುಷ್ಕರಕ್ಕೆ ಮುಂದಾಗಿದ್ದರು. ನಗದು ರಹಿತ ವ್ಯವಸ್ಥೆಗೆ ನಮ್ಮ ಆಕ್ಷೇಪವಿಲ್ಲ ಎಂದು ಬಂಕ್ಗಳ ಅಧ್ಯಕ್ಷ ರವೀಂದ್ರನಾಥ್ ಸ್ಪಷ್ಟ ಪಡಿಸಿದ್ದಾರೆ.

Leave a Reply

Your email address will not be published. Required fields are marked *

six + seventeen =

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top