ಕಾರಂತ ನನ್ನ ಅಜ್ಜ, ಅವರ ಭೇಟಿಯನ್ನು ತಡೆಯಲು ಸಾಧ್ಯವಿಲ್ಲ; ರೈ

Posted In : ದಕ್ಷಿಣ ಕನ್ನಡ, ರಾಜ್ಯ

ಮಂಗಳೂರು: ನಾನು ಶಿವರಾಮ ಕಾರಂತರ ಮೊಮ್ಮಗ, ನನ್ನ ಅಜ್ಜನ ಭೇಟಿಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯ ವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಮಂಗಳೂರಿನ ಕೂಳೂರು, ಸುರತ್ಕಲ್, ಉಡುಪಿಯ ಗಡಿ ಪಡುಬಿದ್ರೆಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕಾರಕ್ಕೆ ಆಗಮಿಸಿದ ಪ್ರಕಾಶ್ ರೈ ಅವರಿಗೆ ಹೃದಯ ಸ್ಪರ್ಶಿ ಸ್ವಾಗತ ನೀಡಲಾಯಿತು. ವಿವಿಧ ಜನಪರ ಸಂಘಟನೆಯ ಪ್ರಮುಖರು, ಬರಹಗಾರರ ಜೊತೆಗೆ ಜನಸಾಮಾನ್ಯರು ನಟನನ್ನು ಅಭಿನಂದಿಸಿ ದರು. ನಂತರ ಉಡುಪಿಗೆ ಬೀಳ್ಕೊಟ್ಟರು.

ನಾನು ಶಿವರಾಮ ಕಾರಂತರ ಮೊಮ್ಮಗ, ನನ್ನ ಅಜ್ಜನ ಭೇಟಿಗೆ ಬರುವುದನ್ನು ಯಾರೂ ತಡೆಯಲಾಗದು ಎಂದು ತುಳುನಾಡಿನ ಹೆಮ್ಮೆಯ ಪುತ್ರ ಪ್ರಕಾಶ್ ರೈ ಬಿಜೆಪಿಗೆ ದಿಟ್ಟ ಉತ್ತರ ನೀಡಿದ್ದಾರೆ.

Leave a Reply

Your email address will not be published. Required fields are marked *

eighteen − 4 =

 
Back To Top