About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಜೀವ್‌ ಕೊಲೆಗಾರರನ್ನು ಕ್ಷಮಿಸಲಾಗದು: ಕೇಂದ್ರ

ದೆಹಲಿ: ಮಾಜಿ ಪ್ರಧಾನ ಮಂತ್ರಿ ರಾಜೀವ್‌ ಗಾಂಧಿರನ್ನು ಕೊಂದ ಏಳು ಕೊಲೆಗಾರರನ್ನು ಬಿಡುಗಡೆ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ.

ಅಪರಾಧಿಗಳನ್ನು ಬಿಡುಗಡೆ ಮಾಡುವುದು ದೇಶ ಹಾಗು ಜಗತ್ತಿಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದ ಕೇಂದ್ರ, ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದೆ.

ಏಳು ಕೊಲೆಗಾರರನ್ನು ಬಿಡುಗಡೆ ಮಾಡಬೇಕೆಂದು ಈ ಮುನ್ನ ತಮಿಳುನಾಡು ಸರಕಾರ ಪ್ರಸ್ತಾವನೆ ಮುಂದಿಟ್ಟಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಕೂಡ ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿತ್ತು.

ಏಳು ಅಪರಾಧಿಗಳು ಕಳೆದ 27 ವರ್ಷಗಳಿಂದ ಕಾರಾಗೃಹದಲ್ಲಿದ್ದಾರೆ.

ಭಯೋತ್ಪಾದಕರು ನಡೆಸಿದ ಅತ್ಯಂತ ಕ್ರೂರ ಅಪರಾಧಗಳಲ್ಲಿ ರಾಜೀವ್‌ ಗಾಂಧಿ ಹತ್ಯೆಯೂ ಒಂದಾಗಿದ್ದು, 16 ಹೆಚ್ಚು ಅಮಾಯಕ ಮಂದಿ ಇದೇ ವೇಳೆ ಜೀವ ಕಳೆದುಕೊಂಡಿದ್ದು ಅನೇಕರು ಗಾಯಾಳುಗಳಾಗಿದ್ದಾರೆ ಎಂದು ಕೇಂದ್ರ ಗೃಹಸಚಿವಾಲಯ ಈ ಕುರಿತ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

“ರಾಜೀವ್‌ ಗಾಂಧಿ  ಹತ್ಯೆ ಸಂಬಂಧ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವ ಮನವಿಯನ್ನು ರಾಷ್ಟ್ರಪತಿಗಳು ನಿರಾಕರಿಸಿದ್ದರು. ಲೋಕಸಭೆಯ ಚುನಾವಣಾ ಪ್ರಕ್ರಿಯೆಗೇ ಅಡ್ಡಿತರುವ ಮೂಲಕ ಪ್ರಜಾಪ್ರಭುತ್ವಕ್ಕೇ ದೊಡ್ಡ ಹೊಡೆತ ನೀಡಿದ ರಾಜೀವ್‌ ಹತ್ಯೆ ಅತ್ಯಂತ ಕ್ರೂರ ಕೃತ್ಯವಾಗಿದೆ. ಅಪರಾಧಿಗಳಿಗೆ ಯಾವುದೇ ಕ್ಷಮೆ ನೀಡಬಾರದು” ಎಂದು ಕೇಂದ್ರ ತಿಳಿಸಿದೆ.

ಹತ್ಯೆಗೆಂದು ಮಹಿಳೆಯನ್ನು ಮಾನವ ಬಾಂಬ್‌ ಆಗಿ ಬಳಕೆ ಮಾಡಿದ್ದನ್ನು ಹೈ ಕೊರ್ಟ್ ಹಾಗು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಎತ್ತಿ ಹಿಡಿಯಲಾಗಿತ್ತು.

ರಾಜೀವ್‌ ಹಂತಕರನ್ನು ಕ್ಷಮಿಸಿರುವುದಾಗಿ ಅವರ ಪುತ್ರ ಹಾಗು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಐಐಎಂನ ದೊಡ್ಡ ಸಭೆಯೊಂದರಲ್ಲಿ ಮಾತನಾಡಿದ್ದ ರಾಹುಲ್‌, “ನಮ್ಮ ತಂದೆಯ ಕೊಲೆಗಾರರನ್ನು ನಾನು, ನನ್ನ ಸಹೋದರಿ ಪ್ರಿಯಾಂಕಾ ಹಾಗು ಭಾವ ರಾಬರ್ಟ್ ವಾದ್ರಾ ಕ್ಷಮಿಸಿದ್ದೇವೆ. ಕಾರಣ ಏನೇ ಇರಲಿ, ಯಾವುದೇ ರೀತಿಯ ಹಿಂಸಾಚಾರವನ್ನು ನಾವು ಸಹಿಸಲಾರೆವು” ಎಂದು ಹೇಳಿದ್ದರು.

ಎಲ್‌ಟಿಟಿಇನ ಮಹಿಳಾ ಬಾಂಬರ್‌ಅನ್ನು ಬಳಸಿ, ಮೇ 21, 1991ರಲ್ಲಿ ತಮಿಳುನಾಡಿದ ಚುನಾವಣಾ ಪ್ರಚಾರ ರ‍್ಯಾಲಿಯೊಂದರಲ್ಲಿ ರಾಜೀವ್‌ ಗಾಂಧಿಯನ್ನು ಹತ್ಯೆಗೈಯ್ಯಲಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close