About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಅರ್ಹತೆ ಇರುವಾಗ ನಾನ್ಯಾಕೆ ಸಚಿವ ಸ್ಥಾನಕ್ಕೆ ಲಾಬಿ ಮಾಡಲಿ?: ಹೊರಟ್ಟಿ

ಶಿರಸಿ: ”ಸಚಿವನಾಗುವ ಅರ್ಹತೆ ಹೊಂದಿರುವಾಗ ನಾನೇಕೆ ಲಾಬಿ ಮಾಡಲಿ” ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾತನಾಡಿದ ಅವರು, “ನಾನ್ಯಾಕೆ ಲಾಬಿ ಮಾಡಿ ಮಂತ್ರಿಯಾಗಬೇಕು? ನನ್ನಲ್ಲೇನು ಕೆಪ್ಯಾಸಿಟಿ ಇಲ್ಲವೇನು? ಅದನ್ನು ನೋಡಿ ನೀಡುವುದಾದರೆ ನೀಡಲಿ” ಎಂದು ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.  “ನಾನು ಈವರೆಗೂ ಯಾವುದೇ ಸ್ಥಾನಕ್ಕೂ ಲಾಬಿ ಮಾಡಿಲ್ಲ. ಸತ್ತರೂ ನಾನು ಸಚಿವ ಸ್ಥಾನಕ್ಕೆ ಲಾಭಿ ಮಾಡುವುದಿಲ್ಲ” ಎಂದು ಹೇಳಿದರು.

“ಸಭಾಪತಿ ಸ್ಥಾನದಲ್ಲಿದ್ದು ರಾಜಕೀಯ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಅದರದೇ ಆದ ಸಮಸ್ಯೆಗಳಿರುತ್ತವೆ. ಸಾಕಷ್ಟು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿರುತ್ತಾರೆ. ಲಾಬಿ ಮಾಡುವುದರಲ್ಲಿ ಅರ್ಥವಿಲ್ಲ ಎಂದರು. ಉತ್ತರ ಕರ್ನಾಟಕ ಭಾಗದಿಂದ 96ಕ್ಕೂ ಹೆಚ್ಚು ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಇದನ್ನು ಗಮನಿಸಿ ಉತ್ತರ ಕರ್ನಾಟಕದ ಮಂದಿಗೆ ಆದ್ಯತೆ ನೀಡುವ ವಿಶ್ವಾಸವಿದೆ” ಎಂದರು.

“ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಪುಸ್ತಕ,  ಸೈಕಲ್ ವಿತರಣೆ ಯಾವುದೂ ಸರಿಯಾಗಿ ಆಗ್ತಿಲ್ಲ. ಆಸಕ್ತ ಹಾಗೂ ಅರಿವಿರುವ ಜನಪ್ರತಿನಿಧಿ ಸಚಿವರಾದರೆ ಎಲ್ಲ ಸರಿಪಡಿಸಬಹುದು‌” ಎಂದರು.

Tags

Related Articles

One Comment

  1. ನಿನಗೆ ಅರ್ಹತೆ ಇದೆ. ಅದಕ್ಕೆ ನಿನ್ನನ್ನು ಮುದಿ ಗುಳ್ಳೆ ನರಿ ಮತ್ತು ಅವನ ಮಗ ಕರಿ ಹೆಗ್ಗಣ ಮಂತ್ರಿ ಮಾಡಿಲ್ಲ. ಅಲ್ಲದೆ, ನಿನಗೂ ಈ ಕಾಯಿಲೆ ಬಂತಾ? ಅಧಿಕಾರ ಮಂತ್ರಿ ಪದವಿ ಇಲ್ಲದಿದ್ದರೆ ಜನಸೇವೆ ಮಾಡುವುದಕ್ಕೆ ಆಗುವುದಿಲ್ಲ ಎಂಬ ಕಾಯಿಲೆ.

Leave a Reply

Your email address will not be published. Required fields are marked *

Language
Close