About Us Advertise with us Be a Reporter E-Paper

Breaking Newsರಾಜ್ಯ

ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ

ಉಡುಪಿ: ಮನೆಯೊಂದರಲ್ಲಿ ಸೇರಿಕೊಂಡಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯುವಲ್ಲಿ ಶಂಕರ ಪೂಜಾರಿ ಎಂಬುವವರು ಯಶಸ್ವಿಯಾಗಿದ್ದಾರೆ.

ಕುಂದಾಪುರ ತಾಲೂಕಿನ ಇಡೂರು ಕುಜ್ಞಾಡಿ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ತಡರಾತ್ರಿ ಸ್ಥಳೀಯ ಗೋಪಾಲ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ ಎಲ್ಲರಲ್ಲೂ ಭಯ ಹುಟ್ಟಿಸಿತ್ತು. ಹೀಗಾಗಿ  ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿದ್ದ ಶಂಕರ ಪೂಜಾರಿ ಎಂಬವವರನ್ನು ಕರೆಸಿದ್ದರು.

ಕೆಲ ಯುವಕರ ಜತೆ ಬಂದ ಶಂಕರ ಪೂಜಾರಿಯವರು ಬಿಲದೊಳಗೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಧೈರ್ಯದಿಂದ ಹಿಡಿದಿದ್ದಾರೆ. ಬಳಿಕ ಅರಣ್ಯ ಅಧಿಕಾರಿಗಳಿಗೆ ಕಾಳಿಂಗ ಸರ್ಪವನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಗ್ರಾಮಸ್ಥರ ಆತಂಕವನ್ನು ದೂರ ಮಾಡಿದರು.

Tags

Related Articles

Leave a Reply

Your email address will not be published. Required fields are marked *

Language
Close