About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕರಾಳ ಸಂಕ್ರಾಂತಿ: ಕಾಲುವೆಗೆ ಕಾರು ಬಿದ್ದು ಒಂದೇ ಕುಟುಂಬದ ಐವರ ದುರ್ಮರಣ

ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಎಡದಂಡೆ ಕಾಲುವೆಗೆ ಕಾರು ಬಿದ್ದು ಅದರಲ್ಲಿದ್ದ ಐದೂ ಜನ ದುರ್ಮರಣ ಹೊಂದಿದ್ದಾರೆ.

ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಬಳಿಯ ಕಾಲುವೆಗೆ ಈ ಕಾರು ಬಿದ್ದಿದೆ. ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ, ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲಕ ಅಡಿವಪ್ಪ ಮಾಳಗಿ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಒಂದೇ ಕುಟುಂಬದ ಐದು ಜನ ಕಾರಿನಲ್ಲೇ ಜಲಸಮಾಧಿಯಾಗಿದ್ದು, ಅವರ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ. ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಪೂಜೇರಿ(38), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು.

ಸೋಮವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ಮೂವರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಮತ್ತಿಬ್ಬರಿಗಾಗಿ ಶೋಧ ನಡೆದಿದ್ದು ಇಷ್ಟರಲ್ಲೇ ಅವರನ್ನು ಮೇಲೆತ್ತಲಾಗುತ್ತದೆ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಳಗ್ಗೆ ಮತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60) ಅವರ ಮೃತ ದೇಹಗಳಿಗಾಗಿ ಶೋಧ ನಡೆದಿದೆ. ಮುರಗೋಡ ಪೊಲೀಸರು ಸ್ಥಳದಲ್ಲೇ ಬೀಡು

Tags

Related Articles

Leave a Reply

Your email address will not be published. Required fields are marked *

Language
Close