About Us Advertise with us Be a Reporter E-Paper

ಗೆಜೆಟಿಯರ್

ಕಾರು ಹಳೆಯದಾದರೇನು ವರ್ಶನ್ ನವನವೀನ

- ಬಡೆಕ್ಕಿಲ ಪ್ರದೀಪ್

ಮೊನ್ನೆ ಮೊನ್ನೆಯಷ್ಟೇ ಹ್ಯೂಂಡೈ ತನ್ನ ಸ್ಯಾಂಟ್ರೋ ಬ್ರಾಂಡನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ಕೆಲ ವರ್ಷಗಳ ಹಿಂದೆ ಕಾರ್ ಖರೀದಿಸುವವರ ಹಾಟ್ ಫೇವರಿಟ್ ಎನಿಸಿದ್ದ ಈ ಬ್ರಾಂಡ್ ಮತ್ತೆ ಎಂಟ್ರಿ ಕೊಟ್ಟಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅದು ಖರೀದಿದಾರರ ಮನೆಗಳನ್ನು ಸೇರಲಿದೆ. ಟಿವಿಯಲ್ಲಿ ಟೀಸರ್‌ಗಳನ್ನು ಹ್ಯೂಂಡೈ ಲಾಂಚ್ ಮಾಡಿದ್ದು ಹಬ್ಬದ ಸೀಜನ್‌ನ ಹವಾವನ್ನು ಸರಿಯಾಗಿ ಉಪಯೋಗಿಸುತ್ತಿದೆ.

ಸ್ಯಾಂಟ್ರೋ ಇದ್ದಾಗ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸ ಇದೆ. ಅಂದು ಕೇವಲ ಬೆರಳೆಣಿಕೆಯಷ್ಟು ಬ್ರ್ಯಾಂಡ್‌ಗಳು ಹಾಗೂ ಕಾರ್‌ಗಳು ಭಾರತದ ರೋಡ್‌ಗಿಳಿದಿದ್ದವು, ಆದರೆ ಇಂದು ಪ್ರತಿಯೊಂದು ಬ್ರ್ಯಾಂಡ್‌ನದೂ ಹಲವಾರು ಕಾರ್‌ಗಳ ಸಾಲೇ, ಕಾರ್ ಪ್ರಿಯರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ನಡೆದಿದೆ. ಹಾಗಾಗಿ ಅಂದಿನ ಸೂಪರ್‌ಹಿಟ್ ಬ್ರ್ಯಾಂಡ್ ಇಂದು ಮತ್ತೆ ಅದೇ ಶೈನ್ ಅನ್ನು ಗಳಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆಯಾದರೂ ಸಧ್ಯ ನಾವು ಗಮನಿಸಿದರೆ ಹೆಚ್ಚಿನೆಲ್ಲಾ ಕಾರ್ ಕಂಪೆನಿಗಳೂ ಹಳೆಯ ಬ್ರ್ಯಾಂಡ್ ನೇಮ್‌ಗಳನ್ನು ಉಪಯೋಗಿಸಿಕೊಳ್ಳುವ ಪ್ರಯತ್ನವನ್ನು ಅಥವಾ ಅದೇ ಹಿಟ್ ಬ್ರ್ಯಾಂಡ್‌ನ ಹೆಸರನ್ನು ಹೇಗೆ ಮುಂದುವರೆಸುತ್ತಾರೆ ಅನ್ನುವುದನ್ನು ಗಮನಿಸಿದರೆ ಈ ರೀತಿಯ ಕಾರ್‌ಗಳ ಸಾಲು ಸಾಲೇ ನಮ್ಮ ಮುಂದೆ ಬಂದು ನಿಂತುಕೊಳ್ಳುತ್ತವೆ.

ಮೊದಲನೆಯದು ಮಾರುತಿಯ 800. ಆ 800 ಬ್ರ್ಯಾಂಡ್ ಎಷ್ಟು ಜನಪ್ರಿಯವಾಗಿತ್ತೆಂದರೆ ಕಾರ್ ಎಂದರೆ 800 ಅನ್ನೋ ಮಟ್ಟಿಗೆ ಕೆಲ ದಶಕಗಳ ಹಿಂದೆ ಜನರ ಮನಸ್ಸಿಗೆ ಹತ್ತಿರವಾಗಿತ್ತು. ಅಂದಿನ ಕಾಲದ ಲಕ್ಷುರಿಯೇ ಅದಾಗಿತ್ತು. ಅದನ್ನೆ ಉಪಯೋಗಿಸಿ ಕೆಲ ಹಿಂದೆ ಮಾರುತಿ ಆಲ್ಟೋ800 ಅನ್ನೋ ಕಾರ್‌ನ ಲಾಂಚ್ ಮಾಡಿತ್ತು. ಖಂಡಿತಾ ಮಾರುತಿ800ನ ಜನಪ್ರಿಯತೆಯನ್ನು ಮ್ಯಾಚ್ ಮಾಡೋದಕ್ಕೆ ಸಾಧ್ಯವಾಗದಿದ್ದರೂ ಮಾರುತಿಯ ಬ್ರ್ಯಾಂಡ್‌ನೇಮ್ ನಿಂದಾಗ ಸಾವಿರಾರು ಆಲ್ಟೋ800ಗಳು ರೋಡಿಗಿಳಿದವು.

ಸ್ಯಾಂಟ್ರೋ: ಬುಕಿಂಗ್ ಓಪನ್
ಹಬ್ಬದ ಸೀಜನ್‌ಗೆ ಸರಿಯಾಗಿ ಹೊಸ ಸ್ಯಾಂಟ್ರೋದ ಬುಕಿಂಗ್ ಓಪನ್ ಆಗಿದ್ದು ಹ್ಯೂಂಡೈ ಐ10ನ ಇಂಜಿನ್ ಹಾಗೂ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಇದನ್ನು ತಯಾರಿಸಲಾಗಿದೆ. ಪೆಟ್ರೋಲ್ ಡೀಸಲ್ ಅಲ್ಲದೇ ಎಲ್‌ಪಿಜಿ ವರ್ಶನ್ ಕೂಡ ಆಯ್ಕೆಯಲ್ಲಿರಲಿದೆ. ಇದಲ್ಲದೇ ಭಾರತದಲ್ಲಿ ಇದು ಮೊದಲ ಆಟೋಮ್ಯಾಟಿಕ್ ಟ್ರಾನ್‌ಸ್ಮಿಶನ್ ಇರುವ ಕಾರ್ ಆಗಿರಲಿದ್ದು ಇನ್ನು ಮುಂದೆ ಬೇರೆಯ ಸಬ್-4 ಮೀಟರ್ ಕಾರ್‌ಗಳಲ್ಲಿ ಅದನ್ನು ಅಳವಡಿಸಲಾಗುವುದು ಎನ್ನಲಾಗಿದೆ. ಈಗಾಗಲೇ ಹೇಳಿರುವಂತೆ ಕಾರ್‌ನ ಬೇಸ್ ವರ್ಷನ್ ಅಂದಾಜು 4 ಲಕ್ಷ ಬೆಲೆಯದ್ದಾಗಲಿದ್ದು 11100 ನೀಡಿ ಬುಕಿಂಗ್ ಮಾಡಬಹುದಾಗಿದೆ.

ಅಂದಹಾಗೆ ಈ ಕಾರ್ ಅನ್ನು ಲಾಂಚ್ ಮಾಡುವ ಮೊದಲು ಹ್ಯೂಂಡೈ ಈ ಹ್ಯಾಚ್‌ಬ್ಯಾಕ್ ಅನ್ನು ಎಎಚ್2 ಅನ್ನೋ ಕೋಡ್ ನೇಮ್‌ನಿಂದ ಕರೆಯುತ್ತಿತ್ತು ಹಾಗೂ ದೇಶಾದ್ಯಂತ ಮಾಡಿದ ವೋಟಿಂಗ್‌ನಲ್ಲಿ ಎಲ್ಲರೂ ಹ್ಯಾಚ್‌ಬ್ಯಾಕ್‌ಗೆ ಸ್ಯಾಂಟ್ರೋ ಎಂದೇ ಹೆಸರಿಡಬೇಕು ಎಂದು ಅತಿ ಹೆಚ್ಚು ವೋಟ್ ಮಾಡಿದ್ದರು ಎನ್ನಲಾಗಿದೆ.

ಹೋಂಡಾದ ಮೊದಲ ಹೈಬ್ರಿಡ್: ಸಿಟಿ 5ನೇ ಜನರೇಶನ್
ಇದರ ಜೊತೆಗೇ ಹೋಂಡಾ ಕಳೆದ 20 ವರ್ಷಗಳಿಂದ ತನ್ನ ಹೋಂಡಾ ಸಿಟಿ ಅನ್ನೋ ಬ್ರ್ಯಾಂಡ್ ನೇಮ್‌ಗೇ ಅಂಟಿಕೊಂಡಿದೆ ಹಾಗೂ ಅದರ ಬೇರೆ ಬೇರೆ ವರ್ಷನ್‌ಗಳನ್ನು ಲಾಂಚ್ ಮಾಡ್ತಾನೇ ಇದೆ.

ಪ್ರತಿಯೊಂದು ಹೊಸ ಟೆಕ್ನಾಲಜಿಯನ್ನು ಹಾಗೂ ಹೊಸ ಫೀಚರ್‌ಗಳನ್ನು ಹೋಂಡಾ ತನ್ನ ಸಿಟಿ ಬ್ರ್ಯಾಂಡ್‌ನ ಮೂಲಕ ಭಾರತದಲ್ಲಿ ಕಂಪೆನಿಯು ಇನ್ನು ಮೂರು ವರ್ಷಗಳಲ್ಲಿ ತನ್ನ ಮೊದಲ ಹೈಬ್ರಿಡ್ ಕಾರನ್ನು ಲಾಂಚ್ ಮಾಡುವುದಾಗಿ ಘೋಷಿಸಿದ್ದು ಅದು ಯಾವ ಬ್ರ್ಯಾಂಡ್ ಆಗಿರಲಿದೆ ಅನ್ನುವ ಬಗ್ಗೆ ಮಾಹಿತಿ ಹೊರ ಬಿಟ್ಟಿಲ್ಲ. ಆದರೂ ಅದು ಮಾಸ್ ಮಾರ್ಕೆಟ್‌ಗೆ ಅನುಗುಣವಾಗಿ ಈ ಲಾಂಚ್ ಆಗಲಿದ್ದು ಅದು ಸದ್ಯದ ಮಾರುಕಟ್ಟೆಯ ಅವಶ್ಯಕತೆಗೆ ಅನುಗುಣವಾಗಿರಲಿದೆ ಅಂದಿರುವ ಕಾರಣ ಖಂಡಿತಾ ಐದನೇ ಜನರೇಶನ್‌ನ ಹೋಂಡಾ ಸಿಟಿ ಆಗಿರಲಿದೆ ಅನ್ನುವುದು ಮಾರುಕಟ್ಟೆಯಲ್ಲಿ ನಡೆದಿರುವ ಮಾತು.

ಇವು ನಮ್ಮ ಮುಂದಿರುವ ಕೇವಲ ಮೂರೋ ಉದಾಹರಣೆಗಳು ಇದಲ್ಲದೆ ಟಾಟಾದ ಸುಮೋ, ಮಾರುತಿ ಓಮ್ನಿ, ಟಾಟಾ ಸಫಾರಿ, ಮಹೀಂದ್ರಾ ಸ್ಕಾರ್ಪಿಯೋ, ಟೊಯೋಟಾ ಇನ್ನೋವಾ ಹೀಗೇ ಹಲವಾರು ಕಾರ್‌ಗಳು, ಎಸ್‌ಯುವಿ, ಎಮ್‌ಯುವಿಗಳು ಮತ್ತೆ ಮತ್ತೆ ಹೊಸ ವರ್ಶನ್‌ಗಳಾಗಿ ಮಾರುಕಟ್ಟೆಗೆ ದಾಳಿಯಿಡುತ್ತಲೇ ಇವೆ. ಇದು ಇನ್ನು ಮುಂದೆಯೂ ಮುಂದುವರೆಯಲಿದೆ. ಯಾಕೆಂದರೆ ಕಂಪೆನಿಯೊಂದಕ್ಕೆ ಬ್ರ್ಯಾಂಡ್ ಹೆಸರನ್ನು ಬೆಳೆಸುವುದು ದೊಡ್ಡ ಸವಾಲು, ಒಂದು ಹಂತಕ್ಕೆ ಆ ಹೆಸರು ಬೆಳೆದ ನಂತರ ಅದನ್ನು ಸಂಪೂರ್ಣವಾಗಿ ಉಪಯೋಗಿಸುವ ಇರಾದೆ ಅವರದಾಗಿರುತ್ತದೆ.

ಹೊಸ ಕಾರ್: ವೈ400
ಭಾರತದ ಹೆಮ್ಮೆಯ ಕಾರ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ಮಹೀಂದ್ರಾ ಕಂಪೆನಿಯು ಸಾಂಗ್ಯಾಂಗ್ ಅನ್ನು ಖರೀದಿ ಮಾಡಿದ ನಂತರ ಮೊನ್ನೆ ಮೊನ್ನೆಯಷ್ಟೇ ರೆಕ್ಸ್ಟನ್ ಆಧಾರದಲ್ಲಿ ತಯಾರಾದ ಮಹೀಂದ್ರಾ ಎಕ್‌ಸ್ಯುವಿ700 ಅನ್ನು ಲಾಂಚ್ ಮಾಡಿತ್ತು. ಇದೀಗ ಮಹೀಂದ್ರಾ ಇದೇ ರೆಕ್ಸ್ಟನ್ ಆಧಾರದ ಇನ್ನೊಂದು ಕಾರ್‌ನ ತಯಾರಿಯಲ್ಲಿದ್ದು ಅದರ ಕೋಡ್‌ನೇಮ್ ಸದ್ಯಕ್ಕೆ ವೈ400 ಎಂದಾಗಿದೆ.

ಇನ್ನೂ ಹೆಸರಿಟ್ಟಿಲ್ಲವಾದರೂ ಈ ಕಾರ್ ಅನ್ನು ಮಹೀಂದ್ರಾ ನವೆಂಬರ್ 19ರಂದು ಅನಾವರಣಗೊಳಿಸಲಿದೆ ಎನ್ನುವ ಮಾಹಿತಿ ಬಂದಿದೆ. ಕಾರ್‌ಗಳಿಗಿಂತ ಹೆಚ್ಚು ಈ ರೀತಿಯ ಎಸ್‌ಯುವಿ ಅಥವಾ ಎಮ್‌ಯುವಿಗಳಿಂದಲೇ ಜನರಿಗೆ ಹತ್ತಿರವಾಗಿರುವ ಬ್ರ್ಯಾಂಡ್ ಮಹೀಂದ್ರಾ ಹಾಗೂ ಈ ಬಾರಿಯ ಅಟೋ ಎಕ್‌ಸ್ಪೋದಲ್ಲಿ ಈ ವೈ400 ಅನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು.

ವೈ400 ಒಂದು ಸಂಪೂರ್ಣ ಎಸ್‌ಯುವಿ ಆಗಿದ್ದು 9 ಏರ್‌ಬ್ಯಾಗ್, ಏಬಿಎಸ್, ಇಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ಹೊಂದಲಿದೆ. 183 ಬಿಎಚ್‌ಪಿಯ 2.2 ಲೀಟರ್ ಡೀಸಲ್ ಇಂಜಿನ್‌ನೊಂದಿಗೆ ಬರಲಿರುವ ಈ ಎಸ್‌ಯುವಿಯ ಪೆಟ್ರೋಲ್ ವರ್ಶನ್ ಅನುಮಾನ ಎನ್ನಲಾಗಿದೆ.

ಡ್ರೈವರ್‌ಲೆಸ್ ಕಾರ್: ಹ್ಯೂಂಡೈ-ಟಾಟಾ ಎಲೆಕ್ಸಿ ಒಪ್ಪಂದ
ಹ್ಯೂಂಡೈ ಮೊಬಿಸ್ ಹಾಗೂ ಟಾಟಾ ಎಲೆಕ್ಸಿ ಎರಡೂ ಸೇರಿ ಡ್ರೈವರ್‌ಲೆಸ್ ಕಾರ್‌ಗಳನ್ನು ತಯಾರು ಮಾಡುವತ್ತ ಒಟ್ಟಾಗಿ ಹೆಜ್ಜೆ ಹಾಕಲಿವೆ. ಹ್ಯೂಂಡೈಯ ಸ್ಪೇರ್ ಪಾರ್ಟ್‌ಗಳನ್ನು ತಯಾರಿಸುವ ಅಂಗ ಸಂಸ್ಥೆಯಾಗಿರುವ ಹ್ಯೂಂಡೈ ಮೊಬಿಸ್ ಹಾಗೂ ಟಾಟಾದ ಅಂಗಸಂಸ್ಥೆಯಾಗಿರುವ ಎಲೆಕ್ಸಿ ಎರಡೂ ಸೇರಿ ಕಾರ್ ಡ್ರೈವಿಂಗ್ ಮಾಡುವಾಗ ಎದುರಾಗುವ ಎಲ್ಲಾ ರೀತಿಯ ಪರಿಸ್ಥಿತಿಗಳನ್ನೂ ಅವಲೋಕಿಸುವ ಸೀನ್ ಜನರೇಶನ್ ಟೂಲ್ ಒಂದನ್ನು ಡೆವಲಪ್ ಮಾಡಲಿವೆ. ಟೂಲ್ ಡ್ರೈವರ್ ಇಲ್ಲದೇ ಚಲಿಸುವ ಕಾರ್ ಅನ್ನು ತಯಾರು ಮಾಡುವಲ್ಲಿ ಸಹಾಯಕವಾಗಲಿದೆ ಎನ್ನಲಾಗಿದೆ.

ಟಾಟಾ ಎಲೆಕ್ಸಿಯು ತನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಕ್‌ಸ್ಟೆಂಡೆಡ್ ರಿಯಾಲಿಟಿ ಮತ್ತು ಗೇಮಿಂಗ್‌ನಲ್ಲಲಿನ ಪರಿಣತಿಯನ್ನು ಈ ಹೊಸ ಟೂಲ್‌ನ ಬೆಳವಣಿಗೆಯ ಮೇಲೆ ಉಪಯೋಗಿಸಲಿದೆ. ಹೈದರಾಬಾದ್‌ನಲ್ಲಿರುವ ಹ್ಯೂಂಡೈ ಮೋಬಿಸ್‌ನ ಸೆಂಟರ್‌ನಲ್ಲಿ ಹ್ಯೂಂಡೈ ಹಾಗೂ ಅದರ ಒಡೆತನದಲ್ಲಿರುವ ಕಿಯಾ ಮತ್ತು ಜೆನೆಸಿಸ್ ಮೋಟಾರ್ಸ್‌ನ ಡ್ರೈವರ್‌ಲೆಸ್ ಕಾರ್‌ಗಳ ಡೆವೆಲಪ್‌ಮೆಂಟ್ ಕುರಿತು ಕೆಲಸ ಮಾಡುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close