About Us Advertise with us Be a Reporter E-Paper

ರಾಜ್ಯ

ಮೇಕೆದಾಟು ಯೋಜನೆ: ಜಲಸಂಪನ್ಮೂಲ ಸಚಿವರಾಗಲು ಡಿಕೆಶಿ ಯೋಗ್ಯರಲ್ಲ

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ನಮ್ಮ ಯೋಜನೆಗೆ ತಮಿಳುನಾಡು ಜತೆ ಮಾತನಾಡುವುದಕ್ಕೆ ಕಾರಣ ಏನು?. ತಮಿಳುನಾಡಿಗೂ ಮೇಕೆದಾಟಿಗೂ ಏನು ಸಂಬಂಧ ಇದೆ?. ಡಿ.ಕೆ.ಶಿವಕುಮಾರ್‌ ಜಲಸಂಪನ್ಮೂಲ…

Read More »

ರಾಜ್ಯ ಸರಕಾರದ ವಿರುದ್ದ ದಲಿತ ಜನಾಂದೋಲನಕ್ಕೆ ಕರೆ

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಮೀನಾ ಮೇಷ ಎಣಿಸುತ್ತಿರುವರಾಜ್ಯ ಸರಕಾರದ ವಿರುದ್ದ ರಾಜ್ಯಾದ್ಯಂತ ದಲಿತ ಜನಾಂದೋಲನಕ್ಕೆ ಡಾ.ಎಂ.ವೆಂಕಟಸ್ವಾಮಿ ನೇತೃತ್ವದ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ. ನಗರದ ಪ್ರೆಸ್ ಕ್ಲಬ್‍ನಲ್ಲಿ ಮಾತನಾಡಿದ ಅವರು, ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಸರಕಾರದ ವಿರುದ್ದ ದಲಿತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಧಾನಸೌಧ ಮುತ್ತಿಗೆ ಸೇರಿದಂತೆ ಹಲವು ಹಂತಗಳ ಹೋರಾಟಗಳ ಹಿನ್ನಲೆಯಲ್ಲಿ ನಮ್ಮ ಒಕ್ಕೂಟದೊಂದಿಗೆ ಆಗಸ್ಟ್ 1 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸುಧೀರ್ಘ ಚರ್ಚೆಯ ಸಭೆನಡೆಯಿತು. ಆಗಸ್ಟ್ 14 ರಂದು ಸುಪ್ರೀಂಕೋರ್ಟ್‍ನಲ್ಲಿದ್ದ ಈ ಕುರಿತ ವಿಚಾರಣೆಯವರೆಗೆ ಮುಖ್ಯಮಂತ್ರಿಗಳು ಕಾಲಾವಕಾಶ ಕೇಳಿದ್ದರು. ಆಗಸ್ಟ್ 14 ರಂದು ಕೋರ್ಟ್‍ನಿಂದ ಯಾವುದೇ ತೀರ್ಪು ಹೊರಡಿಸದಿದ್ದರೆ ಕಾಯ್ದೆಯನ್ನು ಕೂಡಲೇ ಅನುಷ್ಠಾನಗೊಳಿಸುವುದಾಗಿ ಭರವಸೆಯನ್ನೂ ನೀಡಿದ್ದರು. ಆಗಸ್ಟ್ 28ಕ್ಕೆ ಮುಂದೂಡಿದ್ದ ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ಮತ್ತೆ ಮುಂದೂಡಿದೆ. ಹೀಗೆ ಕೋರ್ಟ್ ವಿಚಾರಣೆ ಮುಂದೂಡಿರುವುದನ್ನು ನೆಪ ಮಾಡಿಕೊಂಡು ಕಾಯ್ದೆಅನುಷ್ಠಾನ ಮಾಡದೆ ರಾಜ್ಯ ಸರಕಾರವು ದಲಿತಜನಾಂಗಕ್ಕೆ ದ್ರೋಹಬಗೆಯುತ್ತಿದೆ. ರಾಜ್ಯ ಸರಕಾರಕ್ಕೆ ಇದುವರೆಗೂ ಕಾಲಾವಕಾಶ ನೀಡದ್ದು ಸಾಕಾಗಿದೆ. ಮುಖ್ಯಮಂತ್ರಿಗಳು ಕಾಯ್ದೆಯನ್ನು ಅನುಷ್ಠಾನಮಾಡುವುದಿಲ್ಲ ಎಂದು ನಮಗೆ ಖಾತರಿಯಾಗಿದೆ. ಆದ್ದರಿಂದ ಅವರ ದಲಿತ ವಿರೋಧಿ ಸಮ್ಮಿಶ್ರ ಸರಕಾರದ ವಿರುದ್ದ ಹೋರಾಟವನ್ನು ತೀವ್ರಗೊಳಿಸದೆ ಅನ್ಯಮಾರ್ಗವಿಲ್ಲವೆಂದು ರಾಜ್ಯಾದ್ಯಂತ “ದಲಿತಜನಾಂದೋಲನಕ್ಕೆ” ಕರೆ ನೀಡುತ್ತಿದ್ದೇವೆ ಎಂದು ಡಾ ವೆಂಕಟಸ್ವಾಮಿ ಹೇಳಿದರು.

Read More »

ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರುಪಾಲು

ಹಾಸನ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿದ ಪರಿಣಾಮ ಮಹಿಳೆ ನೀರು ಪಾಲಾಗಿರುವ ಘಟನೆ ಸಕಲೇಶಪುರ ತಾಲೂಕಿನ ಐಗೂರು ಬಳಿ ನಡೆದಿದೆ. ಭಾರಿ ಮಳೆಯಿಂದಾಗಿ ಗ್ರಾಮದ ಸೇತುವೆ ಕೊಚ್ಚಿ ಹೋಗಿತ್ತು.…

Read More »

ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

ದೆಹಲಿ: ಸಮ್ಮಿಶ್ರ ಸರಕಾರ ಯಶಸ್ವಿ ನೂರು ದಿನ ಪೂರೈಸಿದೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದ ಸಿಎಂ,…

Read More »

ದಿನಗಳು ನೂರು, ಹೋದಲೆಲ್ಲ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು!

ಬೆಂಗಳೂರು: ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರೈಸಿರುವ ಎಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ಟ್ವೀಟ್ ಮಾಡುವ ಮೂಲಕ ವ್ಯಂಗ್ಯ ಮಾಡಿದೆ. ದಿನಗಳು ನೂರು, ಹೋದಲೆಲ್ಲ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು! ಎಂಬ…

Read More »

ಋಣಭಾರ ಪೀಡಿತರಿಗೆ ಕಿರುಕುಳ ತಡೆಯಲು ಸೂಚನೆ 

ಬೆಂಗಳೂರು: ಋಣಭಾರ ಪೀಡಿತ ಸಣ್ಣ ರೈತರು, ದುರ್ಬಲ ವರ್ಗದವರಿಗೆ ಲೇವಾದೇವಿದಾರರು ಕಿರುಕುಳ ನೀಡದಂತೆ ಕ್ರಮ ವಹಿಸಲು ಎಲ್ಲ ಪ್ರಾದೇಶಿಕ ಆಯುಕ್ತರು, ಎಲ್ಲ ವಲಯಗಳ ಪೊಲೀಸ್ ಮಹಾನಿರೀಕ್ಷಕರು, ಎಲ್ಲ…

Read More »

ಬೆಂಗಳೂರಿನ ಪಬ್ ಹಾಗೂ ಬಾರ್ ಗಳಲ್ಲಿ ಧೂಮಪಾನ ನಿಷೇಧ?

ಬೆಂಗಳೂರು: ನಗರದ ಬಾರ್, ರೆಸ್ಟೋರೆಂಟ್, ಕೆಫೆ ಹಾಗೂ ಪಬ್ ಗಳಲ್ಲಿ ಧೂಮಪಾನ ನಿಷೇಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಬಗ್ಗೆ ಮಂಗಳವಾರ ಬಿಬಿಎಂಪಿ ಸೂಚನೆ ಹೊರಡಿಸಿದ್ದು, ಹೋಟೆಲ್,…

Read More »

ಇಂದು ಕುಮಾರಸ್ವಾಮಿ – ರಾಹುಲ್ ಭೇಟಿ

ಬೆಂಗಳೂರು: ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸೂಕ್ತ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ದೆಹಲಿಗೆ ತೆರಳಿದ್ದು, ಇದೇ ವೇಳೆ…

Read More »

ಮಳೆ ನಿಂತ ಮೇಲೆ ಶಿರಾಡಿಘಾಟ್ ದುರಸ್ತಿ: ರೇವಣ್ಣ

ಹಾಸನ: ಮಳೆ ನಿಲ್ಲುವವರೆಗೆ ಶಿರಾಡಿಘಾಟ್ ರಸ್ತೆ ದುರಸ್ತಿ ಅಸಾಧ್ಯ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಾಡಿ ರಸ್ತೆ 30 ಅಡಿ ಕುಸಿದು ಹೋಗಿದೆ.…

Read More »

ನಾಳೆ ಬೀದರ್‌ಗೆ ವೆಂಕಯ್ಯನಾಯ್ಡು ಬೇಟಿ

ಬೀದರ್: ನಗರದ ಕಮಠಾಣಾ ಬಳಿಯ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಆ.31 ರಂದು ವಿವಿ ಆವರಣದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿ…

Read More »
Language
Close