About Us Advertise with us Be a Reporter E-Paper

ರಾಜ್ಯ

ಕರ್ನಾಟಕದ ಕಣಕಣದಲ್ಲೂ ಅಟಲ್ ಜೀ : ಕೇಂದ್ರ ಸಚಿವ ಅನಂತ್ ಕುಮಾರ್

ಮಂಡ್ಯ: ಕರ್ನಾಟಕದ ಕಣಕಣದಲ್ಲೂ ಅಟಲ್ ಬಿಹಾರಿ ವಾಜಪೇಯಿ ಜೀ ಇದ್ದಾರೆ ಮತ್ತು ಅಟಲ್ ಜೀ ಅವರ ಕಣಕಣದಲ್ಲೂ ಕರ್ನಾಟಕವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.  ಕಾವೇರಿ ನದಿಗೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಾಜಿ ಪ್ರಧಾನಿ ದಿವಂಗತಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿಯನ್ನು ವಿಸರ್ಜಿಸಿ ಮಾತನಾಡಿದ ಅವರು ಕರ್ನಾಟಕದೊಂದಿಗಿನ ಅವರ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು.ಅಟಲ್ ಬಿಹಾರಿ ವಾಜಪೇಯಿಯವರು ನೂರಾರು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ದಶಕಗಳ ಕಾಲ ಲಕ್ಷಾಂತರ ಜನರನ್ನು ತಮ್ಮಪ್ರೇರಣಾ ಭರಿತ ಮಾತುಗಳಿಂದ ಸಂಭೋಧಿಸಿ ಉದ್ದೀಪನಗೊಳಿಸಿದ್ದಾರೆ ಎಂದು ಕರ್ನಾಟಕದೊಂದಿಗಿನ ಅವರ ನಂಟನ್ನು ಕೇಂದ್ರ ಸಚಿವ ಅನಂತಕುಮಾರ್ ಮೇಲುಕುಹಾಕಿದರು. ವಿಶ್ವಮಾನ್ಯರಾಗಿರುವ ಅವರ ಸಮಾನತೆ, ಸಮಾಜಿಕ ನ್ಯಾಯ ಮತ್ತು ಅವರ ಜೀವನ ವಿಚಾರ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿರುತ್ತದೆ ಎಂದರು. ವಿಶ್ವ ಚೇತನ, ಅಜಾತ ಶತ್ರು, ವಿಶ್ವ ಮಾನ್ಯ, ಪಕ್ಷಾತೀತ, ಜಾತ್ಯತೀತ, ಅಟಲ್ ಜೀಯವರ ಅಸ್ಥಿಯನ್ನು ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಲಾಗಿದೆ ಎಂದರು. ನಾಳೆಯೂ ಸಹ ವಿವಿಧ ಬಿಜೆಪಿ ಮುಖಂಡರುಗಳು ರಾಜ್ಯದ ಎಂಟು ನದಿಗಳಲ್ಲಿ ಅಂದರೆ ನೇತ್ರಾವತಿ, ತುಂಗಭದ್ರ, ಮಲಪ್ರಭಾ, ಕೃಷ್ಣಾ ನದಿಗಳಲ್ಲಿ ಅಸ್ಥಿ ವಿಸರ್ಜಿಸಲಿದ್ದಾರೆ ಎಂದು ತಿಳಿಸಿದರು. ಉತ್ತರ ಮತ್ತು ದಕ್ಷಿಣದ ನದಿಗಳ ಜೋಡಣೆ ಅಟಲ್ ಜೀ ಅವರ ಕನಸಾಗಿತ್ತು. ಕಾವೇರಿ ಮತ್ತು ಗಂಗಾ ಸೇರಿದಂತೆ 36 ನದಿಗಳನ್ನು ಜೋಡಿಸುವ ಕನಸನ್ನು ಹೊಂದಿದ್ದರು. ಈ ಮೂಲಕ ಇಡೀದೇಶದ ರೈತರಿಗೆ ಸುಜಲಾಂ ಸುಫಲಾಂ ಸಾಧಿಸುವ ಸಂಕಲ್ಪಹೊಂದಿದ್ದರು ಎಂದು ಅಟಲ್ ಜೀ ಅವರ ಯೋಜನೆಗಳನ್ನ ಅನಂತಕುಮಾರ್ ಸ್ಮರಿಸಿದರು. ಈ ವೇಳೆ ಅಸ್ಥಿ ಕಳಸ ಯಾತ್ರೆ ಯುದ್ದಕ್ಕೂ ಅಟಲ್ ಜೀ ಅಮರವಾಗಲೀ ಮತ್ತು ಚಿರಾಯುವಾಗಲಿ ಎಂಬ ಘೋಷಣೆಯ ಮೂಲಕ ಸಾವಿರಾರು ಜನರು ಶ್ರದ್ಧಾಂಜಲಿಯನ್ನು ಮತ್ತು ಪುಷ್ಪಾಂಜಲಿ ಅರ್ಪಿಸಿದರು.  ಅಟಲ್ ಜೀ ಅವರ ಬಗೆಗಿನ ಜನರ ಅಭಿಮಾನಕ್ಕೆ ಕೇಂದ್ರ ಸಚಿವರು ಗದ್ಗದಿತರಾಗಿ ಭಾವಂಜಲಿಯನ್ನು ಅರ್ಪಿಸಿದರು.  3 Attachments

Read More »

ಮನೆ ಗೋಡೆ ಕುಸಿದು ಗರ್ಭಿಣಿ ಸೇರಿ ಇಬ್ಬರ ದುರ್ಮರಣ

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಗರ್ಭಿಣಿ ಸಹಿತ ಇಬ್ಬರು ಸಾವನ್ನಪ್ಪಿರುವ ಘಟನೆ ಅಳ್ನಾವರದಲ್ಲಿ ನಡೆದಿದೆ. ಕುಸಿದು ಬಿದ್ದ ಮನೆ ಪ್ರಕಾಶ್ ಸುರೋಜಿ ಅವರದ್ದು ಎಂದು…

Read More »

ಅಜ್ಮೇರ್‌ನ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡಿದ ಸಿಎಂ, ಮಾಜಿ ಪಿಎಂ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಜ್ಮೇರ್‌ನ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದರು. ಇದಕ್ಕೂ ಮೊದಲು ಪುಷ್ಕರ್‌ನ ಬ್ರಹ್ಮ…

Read More »

ಕೊಡಗಿನ ಪ್ರಕೃತಿ ವಿಕೋಪ ನಿರ್ವಹಣೆ: ಸರಕಾರಕ್ಕೆ ಒಂದು ಪರೀಕ್ಷೆ ಇದ್ದಂತೆ

ಮಡಿಕೇರಿ: ರಾಜ್ಯ ಸರಕಾರದ ಪಾಲಿಗೆ ಕೊಡಗಿನ ಪ್ರಕೃತಿ ವಿಕೋಪ ನಿರ್ವಹಣೆ ಪರೀಕ್ಷೆಯಂತಿದೆ. ಇದನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರಕಾರ ಸರಕಾರ ಇರುವುದೇ ಜನರಿಗಾಗಿ. ಹೀಗಿರುವಾಗ ಸಂಕಷ್ಟದಲ್ಲಿರುವ ಜನತೆಯ ಸಮಸ್ಯೆ…

Read More »

ಕಾವೇರಿ ನದಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ (ವಿಡಿಯೊ)

ಮಂಡ್ಯ: ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಗೆ ತಂದು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ಕರ್ನಾಟಕಕ್ಕೂ…

Read More »

87 ವರ್ಷಗಳ ದಾಖಲೆ ಮಳೆ ಕಂಡ ಕೊಡಗು

ಆಗಸ್ಟ್‌ನಲ್ಲಿ ಭಾರೀ ಮಳೆ ಕಂಡ ಕೊಡಗು ಜಿಲ್ಲೆ, 87 ವರ್ಷಗಳಲ್ಲೇ ದಾಖಲೆಯ ವರ್ಷಧಾರೆಗೆ ಸಾಕ್ಷಿಯಾಗಿದೆ. 1931ರ ಆಗಸ್ಟ್‌ ಇಡೀ ತಿಂಗಳಲ್ಲಿ ಕೊಡಗಿನಲ್ಲಿ 1,559ಮಿಮೀ ಮಳೆಯಾಗಿತ್ತು. ಈವರ್ಷದ ಆಗಸ್ಟ್‌ನ…

Read More »

ಕುಲದೀಪ್ ನಯ್ಯರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಹಿರಿಯ ಲೇಖಕ , ಪತ್ರಕರ್ತ ಕುಲದೀಪ್ ನಯ್ಯರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತುರ್ತುಪರಿಸ್ಥಿತಿ ವಿರುದ್ಧ ದನಿ ಎತ್ತಿದ ಪತ್ರಕರ್ತರಲ್ಲಿ…

Read More »

ಶ್ರೀರಂಗಪಟ್ಟಣದತ್ತ ವಾಜಪೇಯಿ ಚಿತಾಭಸ್ಮ

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಾಲಯದಿಂದ ಮಾಜಿ ಪ್ರಧಾನಿ  ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಗೆ ಒಯ್ಯಲಾಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ…

Read More »

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆ

ತುಮಕೂರು: ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯನ್ನು ಜನರನ್ನು ನೋಡಿ ಗಾಬರಿಗೊಂಡು ಪೊದೆಯೊಂದರಲ್ಲಿ ಅವಿತು ಕುಳಿತಿದ್ದಂತಹ ಘಟನೆ ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿ ನಡೆದಿದೆ. ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು, ಸಪ್ತಗಿರಿ…

Read More »

ಕೊಡಗು ಸಂತ್ರಸ್ತರ ಸಹಾಯಕ್ಕೆ ಧಾವಿಸಿದ ಕರ್ನಾಟಕದ ‘ಅಮ್ಮ’ (ವಿಡಿಯೊ)

ಬೆಂಗಳೂರು: ಕೊಡಗಿನಲ್ಲಿ ಉಂಟಾದ ಮಹಾ ಜಲಪ್ರಳಯಕ್ಕೆ ರಾಜ್ಯದೆಲ್ಲೆಡೆಯಿಂದ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಸಂತ್ರಸ್ತರಿಗೆ…

Read More »
Language
Close