About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ನ್ಯಾಯಾಂಗ ನಿಂದನೆ: ನಿರ್ದೇಶಕ ನಾಗೇಶ್ವರ ರಾವ್‌ಗೆ ಕಲಾಪ ಮುಗಿಯುವವರೆಗೂ ಕೋರ್ಟ್‌‌ನ ಮೂಲೆಯಲ್ಲಿ ಕೂತಿರಿ ಎಂದ ಸುಪ್ರೀಂ

ನಾಗೇಶ್ವರ ರಾವ್,​ ಸಿಬಿಐನ ಕಾನೂನು ಸಲಹೆಗಾರರಿಗೆ ತಲಾ 1 ಲಕ್ಷ ರೂಪಾಯಿ ದಂಡ

ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಬಿಐನ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್​ ಮತ್ತು ಸಿಬಿಐನ ಕಾನೂನು ಸಲಹೆಗಾರರಿಗೆ ಸುಪ್ರೀಂಕೋರ್ಟ್​ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೇ, ಕಲಾಪ ಮುಗಿಯುವವರೆಗೂ ಕೋರ್ಟ್​ ಹಾಲ್​ನ ಒಂದು ಮೂಲೆಯಲ್ಲಿ ಕುಳಿತು ಕೋರ್ಟ್​ ಕಲಾಪ ವೀಕ್ಷಿಸುವ ಶಿಕ್ಷೆಯನ್ನೂ ವಿಧಿಸಿತು.

ಮುಜಾಫರ್​ಪುರ ಶೆಲ್ಟರ್​ ಹೋಂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐನ ಜಂಟಿ ನಿರ್ದೇಶಕ ಆಗಿದ್ದ ಅರುಣ್​ ಕುಮಾರ್​ ಶರ್ಮ ಅವರನ್ನು ತನಿಖೆ ಮುಗಿಯುವವರೆಗೂ ವರ್ಗಾವಣೆ ಮಾಡದಂತೆ ಆದೇಶಿಸಿತ್ತು. ಆದರೆ, ಸುಪ್ರೀಂಕೋರ್ಟ್​ ಆದೇಶಕ್ಕೆ ವಿರುದ್ಧವಾಗಿ ಅರುಣ್​ ಕುಮಾರ್​ ಅವರನ್ನು ವರ್ಗಾವಣೆ ಮಾಡಿದ್ದ ನಾಗೇಶ್ವರ್​ ರಾವ್​, ತಕ್ಷಣವೇ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ​ 1 ಲಕ್ಷ ಜುಲ್ಮಾನೆ ವಿಧಿಸಿದೆ.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ನ್ಯಾಯಪೀಠ ಅವರೆಲ್ಲರಿಗೂ ದಿನದ ಕಲಾಪ ಮುಗಿಯುವವರೆಗೂ ಕೋರ್ಟ್​ ಹಾಲ್​ನ ಒಂದು ಮೂಲೆಯಲ್ಲಿ ಕುಳಿತು ಕೋರ್ಟ್​ ಕಲಾಪ ವೀಕ್ಷಿಸುವ ಅಪರೂಪದ ಶಿಕ್ಷೆಯನ್ನೂ ವಿಧಿಸಿತು.

ಅರುಣ್​ ಕುಮಾರ್​ ಶರ್ಮ ಅವರನ್ನು ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್​ನ ಆದೇಶಕ್ಕೆ ವಿರುದ್ಧವಾಗಿ ವರ್ಗಾವಣೆ ಮಾಡಿದ್ದಕ್ಕಾಗಿ ಕ್ಷಮಾಪಣೆ ಕೋರಿ ನಾಗೇಶ್ವರ್​ ರಾವ್​ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ನ್ಯಾಯಪೀಠ ಇದನ್ನು ಪರಿಗಣಿಸಲು ನಿರಾಕರಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close